ಮಕ್ಕಳೇ ಹಾಗೆ. ದೊಡ್ಡವರು ಮಾಡಿದ್ದನ್ನೇ ತಾವು ಮಾಡಲು ಪ್ರಯತ್ನಿಸುತ್ತಾರೆ. ಆಗಷ್ಟೇ ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ಮಕ್ಕಳಿಗೆ ಕಸ ಗುಡಿಸಬೇಕು, ಪಾತ್ರೆ ತೊಳೆಯಬೇಕು, ಅಡುಗೆ ಮಾಡಬೇಕು, ದೊಡ್ಡವರಂತೆ ಮಾಡುವುದು, ತಮ್ಮ ಟೀಚರ್‌ ಹಾಗೂ ಪೋಷಕರಂತೆ ನಟಿಸುವುದನ್ನು ಮಾಡುತ್ತಾರೆ. ಯಾವುದಾದರೂ ಸಿನಿಮಾ ನೋಡಿದರೆ, ಅದರಲ್ಲಿನ ತಮಗಿಷ್ಟವಾದ ಪಾತ್ರವನ್ನೇ ಮಾಡುತ್ತಾರೆ. ಇದು ಎಲ್ಲಾ ಮಕ್ಕಳಲ್ಲೂ ಇರುತ್ತದೆ.

ಹಾಗಾಗಿ ಮನೆಯಲ್ಲಾಗಲೀ, ಶಾಲೆಯಲ್ಲಾಗಲಿ, ಮಕ್ಕಳ ಬಗ್ಗೆ ಕೊಂಚ ಹೆಚ್ಚೇ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಗಮನಿಸಬೇಕಾಗುತ್ತದೆ. ಕೆಲವೊಮ್ಮೆ ಮಕ್ಕಳು ಎಡವಟ್ಟು ಮಾಡಿಕೊಂಡು ಬಿಡುತ್ತಾರೆ. ಕಾಯಿನ್‌ ನುಂಗುವುದು, ಆಟಿಕೆಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದು, ನೀರಿನಲ್ಲಿ ಆಡುವಾಗ ಹೆಚ್ಚು-ಕಡಿಮೆ ಆಗುತ್ತದೆ. ಹಾಗಾಗಿ ಎಲ್ಲರೂ ಮಕ್ಕಳ ಬಗ್ಗೆ ಸ್ವಲ್ಪ ಹೆಚ್ಚೇ ಜಾಗ್ರತೆ ವಹಿಸುವುದು ತುಂಬಾನೆ ಒಳ್ಳೆಯದು.

ಕನ್ನಡ ರಾಜ್ಯೋತ್ಸವಕ್ಕಾಗಿ ಚಿತ್ರದುರ್ಗದ ಕೆಳಗೋಟೆ ಬಡಾವಣೆಯ 12 ವರ್ಷದ ಸಂಜಯ್ ಗೌಡ ಎಂಬ ಪುಟ್ಟ ಬಾಲಕ ಭಗತ್‌ ಸಿಂಗ್ ಪಾತ್ರವನ್ನು ಮಾಡಬೇಕಿತ್ತು. ಇದಕ್ಕಾಗಿ ಮನೆಯಲ್ಲಿ ಒಬ್ಬನೇ ರಿಹರ್ಸಲ್‌ ಮಾಡುತ್ತಿದ್ದ. ಈ ವೇಳೆ ಫ್ಯಾನಿಗೆ ನೂಲಿನ ಹಗ್ಗವನ್ನು ಬಿಗಿದುಕೊಂಡು ಪ್ರಾಕ್ಟೀಸ್‌ ಮಾಡಲು ಮುಂದಾಗಿದ್ದಾನೆ. ಮುಖಕ್ಕೆ ಉಲ್ಲನ್ ಟೋಪಿ ಧರಿಸಿ ಮಂಚದಿಂದ ಜಿಗಿದಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ದುರ್ಘಟನೆಯಿಂದ ಪೋಷಕರು ಶಾಕ್‌ ನಲ್ಲಿದ್ದಾರೆ. ( video credit : third eye )