ಜಡೆ ಜಗಳಕ್ಕೆಲ್ಲಿದೆ ಕೊನೆ: ಮುಂಬೈ ಟ್ರೈನಲ್ಲಿ ಆ ಮೂವರು ಮಹಿಳೆಯರು ಮಾಡಿದ್ದೇನು ಗೊತ್ತಾ..?

ಜಡೆ ಜಗಳ ಎಂಬ ಮಾತನ್ನು ಎಲ್ಲರೂ ಕೇಳಿರುತ್ತೀರಿ. ಮನೆಗೆ ಸೊಸೆ ಬಂದರೂ ಈ ಮಾತು ಸರ್ವೇ ಸಾಮಾನ್ಯವಾಗಿ ಬಿಟ್ಟಿರುತ್ತದೆ. ಜಡೆ ಜಗಳದಿಂದ ಅದೆಷ್ಟೋ ಮನೆಗಳು ಇಬ್ಬಾಗವಾಗಿರುವುದೂ ಉಂಟು. ಸಾಮಾನ್ಯವಾಗಿ ಇಬ್ಬರಿಗಿಂತ ಹೆಚ್ಚು ಮಹಿಳೆಯರು ಒಂದೆಡೆ ಸೇರಿದರೆ ಜಗಳವಾಗುತ್ತದೆ. ಹಾಗಂತಾ ಮಹಿಳೆಯರು ಇರುವೆಡೆಯೆಲ್ಲಾ ಜಗಳವಾಗುತ್ತೆ ಎಂದರ್ಥವಲ್ಲ. ಎಷ್ಟೋ ಕುಟುಂಬಗಳು ಬೇರೆಯಾಗುವುದಕ್ಕೆ ಜಡೆ ಜಗಳವೇ ಕಾರಣ ಎನ್ನಲಾಗುತ್ತದೆ ಅಷ್ಟೇ.

ಇದಕ್ಕೆ ಇಲ್ಲೊಂದು ನೈಜ ಉದಾಹರಣೆಯೂ ಇದೆ. ಮಹಾನಗರಗಳಲ್ಲಿ ಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣಿಸಲು ಈಗ ಬಸ್, ಟ್ರೈನ್ ಗಳ ಸೌಲಭ್ಯವಿದೆ. ಬೆಳಗೆದ್ದು, ಮನೆಯಲ್ಲಿನ ಹೆಮಗಸರು, ಗಂಡಸರು ಎಲ್ಲರೂ ಕೆಲಸಕ್ಕೆ ಹೋಗುತ್ತಾರೆ ಕೂಡ. ಹಾಗಾಗಿ ಟ್ರೈನ್ ಬಸ್ ಗಳಲ್ಲಿ ಪೀಕ್ ಅವರ್ಸ್ ಗ:ಳಲ್ಲಿ ರಶ್ ಇರುತ್ತದೆ. ಇದರಿಂದ ಸಾಮಾನ್ಯ ಕಿತ್ತಾಟಗಳು ನಡೆಯುತ್ತಲೇ ಇರುತ್ತವೆ. ಇದೀಗ ಮುಂಬೈನ ಟ್ರೈನ್ ಒಂದರೆ ಜಡೆ ಜಗಳ ನಡೆದಿದ್ದು, ಈ ವೀಡಿಯೋ ಭಾರೀ ವೈರಲ್ ಆಗಿದೆ.

ಹೌದು, ಮುಂಬೈನ ಟ್ರೈನ್ ಒಂದರಲ್ಲಿ ಹೆಣ್ಮಕ್ಕಳ ಕಂಪಾರ್ಟ್ ಮೆಂಟ್ ನಲ್ಲಿ ಮೂವರು ಮಹಿಳೆಯರು ಇದ್ದಕ್ಕಿದ್ದ ಹಾಗೆಯೇ ಜಗಳವನ್ನು ಆಡಲು ಪ್ರಾರಂಭಿಸಿದ್ದಾರೆ. ಒಬಬರಿಗೊಬ್ರು ಬೈದುಕೊಂಡು ಕೂದಲನ್ನು ಎಳೆದಾಡಿಕೊಂಡು ಜಗಳವಾಡಿದ್ದಾರೆ. ಇದನ್ನು ಯಾರೋ ಒಬ್ಬರು ವೀಡಿಯೋ ಮಾಡಿದ್ದಾರೆ. ಜಗಳವಾಡುವಾಗ ಟ್ರೈನ್ ನಲ್ಲಿದ್ದ ಇತರೆ ಮಹಿಳೆಯರು ರುಕೋ, ಚೋಡ್ ದೋ ಎಂದು ಬಿಡಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಒಬ್ಬರಿಗೊಬ್ಬರು ಒಡೆದುಕೊಂಡಿದ್ದಾರೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀರಿಗಾಗಿ ಬೀದಿಯಲ್ಲಿ ನಿಂತು ಜಗಳವಾಡಿದಂತೆ ಈ ವೀಡಿಯೋ ಗಲ್ಲಿ ಗಲ್ಲಿಗೂ ತಲುಪಿದೆ.