ನಟ ರಘುವೀರ್ ಮಗಳು ಈಗ ಎಲ್ಲಿದ್ದಾರೆ ಗೊತ್ತಾ..?

ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ ಚಿತ್ರಗಳ ಮೂಲಕ ಖ್ಯಾತಿ ಪಡೆದ ನಟ ರಘುವೀರ್ ಬದುಕಲ್ಲಿ ಏನೆಲ್ಲಾ ಆಯ್ತು ಗೊತ್ತಾ..? ಇಂಜಿನಿಯರ್ ಓದಿ ಕೆಲಸ ಮಾಡಿಕೊಂಡು ಇರಬೇಕಿದ್ದ ರಘೂವೀರ್ ಅವರು, ಅಕಸ್ಮಾತ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಉತ್ತುಂಗಕ್ಕೆ ಏರಿದ ರಘುವೀರ್ ಅವರು ನಟಿ ಸಿಂಧೂ ಜೊತೆಗೆ ಸಪ್ತಪದಿ ತುಳಿದು ಸುಖ ಸಂಸಾರ ನಡೆಸಿದರು. ಇವರಿಗೆ ಶ್ರೇಯಾ ಎಂಬ ಮುದ್ದಾದ ಹೆಣ್ಣು ಮಗು ಕೂಡ ಜನಿಸಿತು.

ಆದರೆ, ಈ ಸುಖ ಸಂಸಾರಕ್ಕೆ ಪತ್ನಿ ಸಿಂಧು ಸಾವು ವಿಧಿಯಾಟವಾಗಿತ್ತು. ಸಿಂಧು ಅವರು ಅನಾರೋಗ್ಯ ಕಾರಣ ಬಹು ಬೇಗನೇ ಇಹಲೋಕ ತ್ಯಜಿಸಿದರು. ಇವರ ಮಗಳು ಶ್ರೇಯಾ ಕೂಡ ತಾತ-ಅಜ್ಜಿ ಜೊತೆಗೆ ಚೆನ್ನೈ ಸೇರಿಬಿಟ್ಟರು. ಆಗ ರಘುವೀರ್ ಅವರು, ಸೋದರತ್ತೆ ಮಗಳಾದ ಗೌರಿ ಜೊತೆ ಸಪ್ತಪದಿ ತುಳಿದರು. ಇವರಿಗೂ ಮೋಕ್ಷಾ ಎಂಬ ಮುದ್ದು ಹೆಣ್ಣು ಮಗಳಿದ್ದಾಳೆ. ಆದರೆ, ತಮ್ಮ ಕುಡಿತ, ಇತರೆ ಚಟಗಳಿಂದ ಸಂಸಾರದಿಂದ ದೂರ ಉಳಿದರು. 2014 ರಲ್ಲಿ ಅನಾರೋಗ್ಯ ಹಿನ್ನೆಲೆ ಚಿಕ್ಕವಯಸ್ಸಿಗೆ ಪ್ರಾಣ ಬಿಟ್ಟರು.

ಇನ್ನು ರಘುವೀರ್ ಹಾಗೂ ಸಿಂಧೂ ಪುತ್ರಿ ಶ್ರೇಯಾ ಈಗ ಎಲ್ಲಿದ್ದಾರೆ ಗೊತ್ತಾ..? ಶ್ರೇಯಾ ಅವರು ಈಗ ಮದುವೆಯಾಗಿದ್ದು, ಅವರಿಗೆ ಒಂದು ಪುಟ್ಟ ಮಗು ಇದೆ. ಡೈರೆಕ್ಟರ್ ಅಶ್ವಿನ್ ಅವರನ್ನು ಪ್ರೀತಿಸಿ ಶ್ರೇಯಾ ಅವರು ಮದುವೆಯಾಗಿದ್ದಾರೆ. ಇನ್ನು ಇವರ ಇನ್ನೊಬ್ಬಳು ಪುತ್ರಿ ಮೋಕ್ಷ ಬಿಟಿಎಂ ಲೇಔಟ್ ನಲ್ಲಿ ನೆಲೆಸಿದ್ದಾರೆ. ತಾಯಿ ಜೊತೆಗೆ ನೆಲೆಸಿರುವ ಮೋಕ್ಷಾ ಇನ್ನು ಓದುತ್ತಿದ್ದಾರೆ. ರಘುವೀರ್ ಸಿನಿಮಾರಂಗದಲ್ಲಿ ಮಿಂಚಿ ಕೊನೆಗೆ ಅದೇ ಕ್ಷೇತ್ರದಲ್ಲಿ ಸೋತು ದುರಂತ ಅಂತ್ಯವನ್ನು ಕಂಡವರು.