ಪಾದಗಳಿಂದ ನಿಮ್ಮ ಅದೃಷ್ಟ ಎಂತಹದ್ದು ಎಂಬುದನ್ನು ಸುಲಭವಾಗಿ ತಿಳಿಯಿರಿ..

ಸಾಮುದ್ರಿಕ ಶಾಸ್ತ್ರದ ಬಗ್ಗೆ ನೀವೆಲ್ಲಾ ಕೇಳಿರಬಹುದು. ಮನುಷ್ಯನ ಭವಿಷ್ಯವನ್ನು ತಿಳಿಯಲು ಸಾಮುದ್ರಿಕ ಶಾಸ್ತ್ರದಿಂದಲೂ ತಿಳಿಯಬಹುದು. ವ್ಯಕ್ತಿಯ ಸ್ವಾಭಾವ ಹಾಗೂ ದೇಹ ರಚನೆಯ ಮೂಲಕವೂ ಭವಿಷ್ಯವನ್ನು ಹೇಳಬಹುದು. ಅದೇ ಸಾಮುದ್ರಿಕ ಶಾಸ್ತ್ರ ಎನ್ನುವುದು. ಮನುಷ್ಯ ಎಂದ ಮೇಲೆ ಆತನಿಗೆ ತನ್ನ ಭವಿಷ್ಯದ ಕುತೂಹಲವಿರುವುದು ಸಹಜವೇ. ಹಾಗಾಗಿಯೇ ಹಲವರು ತಮ್ಮ ಭವಿಷ್ಯದ ಬಗ್ಗೆ ತಿಳಿದುಕೊಲ್ಳಲು ಸದಾ ಹಾತೊರೆಯುತ್ತಿರುತ್ತಾರೆ. ಕೆಲವರು ತಾವು ಹುಟ್ಟಿದ ನಕ್ಷತ್ರದ ಮೇಲೆ ಭವಿಷ್ಯವನ್ನು ತಿಳಿದುಕೊಂಡರೆ, ಮತ್ತೆ ಕೆಲವರು ಹಸ್ತ ರೇಖೆ ತೋರಿಸಿ ತಮ್ಮ ಭಿವಿಷ್ಯವನ್ನು ತಿಳಿದುಕೊಳ್ಳುತ್ತಾರೆ.

ಇನ್ನು ಪಾದಗಳನ್ನು ನೋಡಿಯೋ ವ್ಯಕ್ತಿಯ ಅದೃಷ್ವನ್ನು ತಿಳಿಯಬಹುದು. ವ್ಯಕ್ತಿಯ ಪಾದಗಳ ಅಂಗಾಲು ಇರುವ ರೀತಿ, ಅದರಲ್ಲಿ ಕಾಣುವ ಗುರುತುಗಳ ಮೂಲಕ ಅದೃಷ್ಟದ ಬಗ್ಗೆ ತಿಳಿಯಬಹುದು. ಒಬ್ಬ ವ್ಯಕ್ತಿಯ ಅಂಗಾಲು ನಯವಾಗಿ ಮೃದುವಾಗಿದ್ದು ಕೆಂಪು ಬಣ್ಣದಿಂದ ಕೂಡಿದ್ದರೆ, ಅಂತಹವರು ತುಂಬಾ ಅದೃಷ್ಟಶಾಲಿಗಳು ಎಂದರ್ಥ. ಹೀಗಿರುವವರ ಜೊತೆಗೆ ಲಕ್ಷ್ಮೀ ಸದಾ ನೆಲೆಸಿರುತ್ತಾಳಂತೆ. ಇನ್ನು ಕೆಲವರಿಗೆ ಚಪ್ಪಟೆಯಾದ ಅಂಗಾಲು ಇರುತ್ತದೆ. ಇವರು ತುಂಬಾನೇ ಶ್ರಮ ಜೀವಿಗಳಂತೆ. ಇವರು ಇತರರಿಗೆ ಸಹಾಯ ಮಾಡುವುದುರ ಜೊತೆಗೆ ಅವರ ಆಲೋಚನೆಗಳನ್ನು ತಮ್ಮಲ್ಲಿಯೇ ಬಚ್ಚಿಟ್ಟಿರುತ್ತಾರಂತೆ.

ಒಡೆದ ಹಿಮ್ಮಡಿ ಇರುವ ಪಾದಗಳಲ್ಲಿ ಚರ್ಮ ಒಣಗಿದ್ದರೆ ಅಂತಹ ವ್ಯಕ್ತಿಗಳೂ ಜೀವನದಲ್ಲಿ ತುಂಬಾ ಕಷ್ಟಪಟ್ಟಿರುತ್ತಾರೆ. ಜೀವನ ಪೂರ್ತಿ ಅವರು ಹೆಣಗಾಡಬೇಕಾಗುತ್ತದೆ ಎಂದರ್ಥ. ಇನ್ನು ಕೆಲವರ ಅಂಗಅಲು ಸಂಪೂರ್ಣವಾಗಿ ಬೆಳ್ಳಗೆ ಇರುತ್ತದೆ. ಅಂತಹವರಿಗೆ ಸರಿ ತಪ್ಪುಗಳನ್ನು ತಿಳಿಯುವಷ್ಟು ಜ್ಞಾನವಿರುವುದಿಲ್ಲ. ಅಂತಹವರು ಏನೇ ಕೆಲಸ ಮಾಡಿದರೂ ಹೆಚ್ಚು ಯೋಚಿಸುವುದಿಲ್ಲವಂತೆ. ಇವರು ಮಾಡುವ ವ್ಯವಾಹರಗಳಿಂದ ಹಾನಿಯಾಗುವುದೇ ಹೆಚ್ಚಂತೆ.

ಇನ್ನು ಅಂಗಾಲು ಕಪ್ಪಗಿದ್ದರೆ, ಅವರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಾರಂತೆ. ಅದರ ಜೊತೆಗೆ ಜೀವನದಲ್ಲೂ ಹೆಚ್ಚೆಚ್ಚು ಸಮಸ್ಯೆಗಳಿಗೆ ಒಳಗಾಗುತ್ತಾರಂತೆ. ಇನ್ನು ಕೆಲವರ ಅಂಗಅಲಿನಲ್ಲಿ ಹಿಮ್ಮಡಿಯಿಂದ ಶುರುವಾಗಿ ಹೆಬ್ಬೆರಳು ವರೆಗೂ ಗೆರೆಯೊಂದು ಮೂಡಿದ್ದರೆ, ಆತ ಬಹಳ ಅದೃಷ್ಟವಂತನಂತೆ. ಅವರ ಜೀವನ ತುಂಬಾ ಸುಲಭವಅಗಿ ಸಂತೋಷವಾಗಿ ಇರುತ್ತದೆಯಂತೆ. ನೀವು ನಿಮ್ಮ ಪಾದಗಳನ್ನು ನೋಡಿಕೊಂಡು ನಿಮ್ಮ ಅದೃಷ್ಟವನ್ನು ತಿಳಿಯಿರಿ.