ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಶುರುವಾಯ್ತು ಕಿತ್ತಾಟ: ಇದಕ್ಕೆ ಕಾರಣವೇನು..?

ನಟಿ ಪವಿತ್ರಾ ಲೋಕೇ ಹಾಗೂ ನಟ ನರೇಶ್ ಇಬ್ಬರೂ ಕದ್ದು ಮದುವೆಯಾಗಿದ್ದಾರೆ ಎಂಬ ಸುದ್ದಿಯೊಂದು ಇದ್ದಕ್ಕಿದ್ದ ಹಾಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಜೋರಾಗಿ ಸದ್ದು ಮಾಡಿತ್ತು. ಪವಿತ್ರಾ ಲೋಕೇಶ್ ಅವರು ಸುಚೇಂದ್ರ ಅವರೊಂದಿಗೆ ಎರಡನೇ ಮದುವೆಯಾಗಿದ್ದು, ಅವರಿಗೆ ಮಗ ಕೂಡ ಇದ್ದಾನೆ. ಅದೂ ಕೂಡ ಕಾಲೇಜಿಗೆ ಹೋಗುವ ಮಗನಿರುವಾಗ ಈಗ ಮತ್ತೊಂದು ಮದುವೆ ಬೇಕಿತ್ತಾ ಎಂದು ಒಂದು ಕಡೆ ಚರ್ಚೆಯಾದರೆ, ಮೊತ್ತೊಂದು ಕಡೆ ಸುಚೇಂದ್ರ ಅವರಿಗೆ ಡಿವೋರ್ಸ್ ಕೊಡದೆ ಮದುವೆಯಾಗಿದ್ದಾರೆ ಎಂದು ಚರ್ಚೆಯಾಗುತ್ತಿತ್ತು.

ಇನ್ನು ನರೇಶ್ ಅವರ ವಿಚಾರಕ್ಕೆ ಬಂದರೆ ನರೇಶ್ ಅವರು ಮದುವೆಯಾಗಿರುವ ರಮ್ಯಾ ಅವರು ಕೂಡ ಎರಡನೇ ಪತ್ನಿ. ಹೀಗಿದ್ದರೂ ಆಕೆಗೂ ಡಿವೋರ್ಸ್ ನೀಡಿದೆ, ನರೇಶ್ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗಿರುವುದು ಎಷ್ಟು ಸರಿ. ಕದ್ದು ಮುಚ್ಚಿ ಅಫೇರ್ ಇಟ್ಟುಕೊಂಡಿದ್ದಾರೆ ಎಂದು ಸದ್ದಾಗಿತ್ತು. ಇನ್ನು ನರೇಶ್ ಈ ವಿಚಾರವಾಗಿ ಇವೆಲ್ಲಾ ಸುಳ್ಳು ಎಂದು ಹೇಳಿದರೂ ಯಾರೂ ನಂಬಲಿಲ್ಲ. ಸ್ವತಃ ನರೇಶ್ ಅವರ ಪತ್ನಿ ರಮ್ಯಾ ಅವರೇ ಮಾಧ್ಯಮದ ಎದುರಿಗೆ ಬಂದು ನರೇಶ್ ತಮಗೆ ಮೋಸ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪವಿತ್ರಾ ಸಹವಾಸ ಮಾಡಿ ನನ್ನ ಮನೆಯನ್ನು ಹಾಳು ಮಾಡಿದ್ದಾರೆ ಎಂದಿದ್ದರು.

ಪವಿತ್ರಾ ಲೋಕೇಶ್ ನಿಂದಾಗಿ ನನ್ನ ಸಂಸಾರ ಮೂರಾಬಟ್ಟೆಯಾಗಿದೆ ಎಂದು ಗೋಳಾಡಿದ್ದರು. ಆದರೆ ಈ ಯಾವ ವಿಚಾರದ ಬಗ್ಗೆಯೂ ಪವಿತ್ರಾ ಲೋಕೇಶ್ ಅವರು ತುಟಿ ಬಿಚ್ಚಲಿಲ್ಲ. ಇನ್ನೇನು ನರೇಶ್ ಹಾಗೂ ಪವಿತ್ರಾ ಮದುವೆಯಾಗಿದ್ದಾರೆ. ಇಬ್ಬರೂ ತಮ್ಮ ತಮ್ಮ ಪತಿ ಹಾಗೂ ಪತ್ನಿಗೆ ಡಿವೋರ್ಸ್ ನೀಡಿದ್ದಾರೆ. ಪವಿತ್ರಾ ಹಾಗೂ ನರೇಶ್ ತಮ್ಮ ಪಾಡಿಗೆ ತಮ್ಮ ಬದುಕು ನಡೆಸುತ್ತಿದ್ದಾರೆ ಎನ್ನುವಾಗಲೇ ಈಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅದೇನೆಂದರೆ, ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಯಾವುದೋ ವಿಚಾರಕ್ಕೆ ಕಿತ್ತಾ ಶುರುವಾಗಿದೆ. ಈಗ ಇಬ್ಬರೂ ಬೇರೆಯಾಗಿದ್ದಾರೆ ಎನ್ನಲಾಗುತ್ತಿದೆ.