ಶಿವಣ್ಣ ಅವರು ಅಂದು ಆಸ್ಪತ್ರೆಯಲ್ಲಿ ಮಲಗಿದ್ದಾಗ ಅವರ ಪ್ತನಿ ಗೀತಾ ಅವರು ಮಾಡಿದ್ದೇನು..?

ರಾಜ್ ಕುಮಾರ್ ಕುಟುಂಬದ ಬಗ್ಗೆ ಯಾರೂ ಏನೂ ಹೇಳಲು ಆಗುವುದಿಲ್ಲ. ತ್ಯಾಗ, ಒಳ್ಳೆಯತನ, ಸೌಜನ್ಯ ಸೇರಿದಂತೆ ಎಲ್ಲಾ ಉತ್ತಮ ಗುಣಗಳೂ ಇವೆ. ರಾಜ್ ಕುಮಾರ್ ಕುಟುಂಬದ ಕುಡಿಗಳಲ್ಲಷ್ಟೇ ಅಲ್ಲದೇ, ಅವರ ಮನೆಗೆ ಬಂದಿರುವ ಸೊಸೆಯಂದಿರು ಕೂಡ ಕುಟುಂಬಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ. ನಯ-ವಿನಯದಲ್ಲಿ ಕೊಂಚವೂ ಕೊರತೆ ಇಲ್ಲದ ಕುಟುಂಬವದು. ಎಷ್ಟೇ ಹಣವಿದ್ದರೂ ಶ್ರೀಮಂತಿಕೆಯನ್ನು ತೋರಿಕೊಳ್ಳದೇ, ಎಲ್ಲರಲ್ಲೂ ಒಬ್ಬರಂತೆ ಬದುಕು ನಡೆಸುತ್ತಿದ್ದಾರೆ.

ಈ ಬಗ್ಗೆ ಹೆಚ್ಚಿಗೆ ಏನೂ ಹೇಳಬೇಕಾಗಿಯೇ ಇಲ್ಲ. ಯಾಕೆಂದರೆ, ರಾಜ್ ಕುಮಾರ್ ಕುಟುಂಬದವರ ಬಗ್ಗೆ ಇಡೀ ಕರುನಾಡಿಗೇ ಗೊತ್ತಿದೆ. ಅಲ್ಲದೇ, ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಾಗ, ಜನರ ಸಂಕಷ್ಟಕ್ಕೆ ಮರುಗಿದ್ದವರು. ಬಲಗೈನಲ್ಲಿ ಮಾಡಿದ ಕೆಲಸವನ್ನು ಎಡಗೈಗೆ ತಿಳಿಯದಂತೆ ನೋಡಿಕೊಂಡಿದ್ದವರು. ಅಪ್ಪು ಬದುಕಿದ ರೀತಿ ಪ್ರತಿಯೊಬ್ಬ ಮನುಷ್ಯನಿಗೂ ಮಾದರಿಯಾಗಿದ್ದಾರೆ. ಈಗ ಅದೆಷ್ಟೋ ಜನ ಪುನೀತ್ ಅವರ ಅಭಿಮಾನಿಗಳು ಅಪ್ಪು ಬದುಕಿದ ರೀತಿಯಲ್ಲೇ ಜೀವಿಸಲು ಯತ್ನಿಸುತ್ತಿದ್ದಾರೆ.

ಇನ್ನು ಶಿವರಾಜ್ ಕುಮಾರ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಎದುರಾಗಿತ್ತು. ಹಾಗಾಗಿ ಶಿವಣ್ಣ ಅವರು ಫಾರಿನ್ ನಲ್ಲಿ ಚಿಕಿತ್ಸೆಗೆ ತೆರಳಿದ್ದರು. ಈ ವೇಳೆ ಶಿವಣ್ಣ ಅವರ ಜೊತೆಗೆ ಅವರ ಪತ್ನಿ ಗೀತಾ ಅವರು ಕೂಡ ಇದ್ದರು. ಶಿವಣ್ಣ ಅವರಿಗೆ ಹುಷಾರಾದರೆ, ಮುಡಿ ಕೊಡುವುದಾಗಿ ದೇವರಿಗೆ ಬೇಡಿಕೊಂಡಿದ್ದರಂತೆ. ಹಾಗಾಗಿ ಗೀತಾ ಅವರು ದೇವರಿಗೆ ಕೂದಲನ್ನು ಕೊಟ್ಟಿದ್ದರು. ಈ ವಿಚಾರವನ್ನು ಶಿವಣ್ಣ ಅವರು ವೇದಿಕೆಯೊಂದರಲ್ಲಿ ಹೇಳಿಕೊಂಡು ಭಾವುಕರಾಗಿದ್ದರು.