ಹದಿ ಹರಯದ ಯುವಕರೇ ಇನ್ನಾದರೂ ಬುದ್ದಿ ಕಲಿಯಿರಿ :ರೈಲ್ವೆ ಬ್ರಿಡ್ಜ್ ಮೇಲೆ ರೀಲ್ಸ್ ಮಾಡಲು ಹೋಗಿ ಇಬ್ಬರು ಬಾಲಕರು ಸಾವು

ಹದಿ ಹರಯದ ಯುವಕರೇ ಇನ್ನಾದರೂ ಬುದ್ದಿ ಕಲಿಯಿರಿ :ರೈಲ್ವೆ ಬ್ರಿಡ್ಜ್ ಮೇಲೆ ರೀಲ್ಸ್ ಮಾಡಲು ಹೋಗಿ ಇಬ್ಬರು ಬಾಲಕರು ಸಾವು

ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್‌ ಬಂದದಾಗಿನಿಂದ ರೀಲ್ಸ್ ಮಾಡುವರ ಸಂಖ್ಯೆ ತುಂಬಾ ಹೆಚ್ಚಾಗಿದೆ . ವಯಸಾಗಿರುವರಿಂದ ಹಿಡಿದು ಯುವಕ ಮತ್ತು ಯುವತಿಯರು ಎಲ್ಲರೂ ಈ ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೀಲ್ಸ್ ಅಪ್ಲೋಡ್ ಮಾಡಬೇಕು ಎಂದು ಎಂತಹ ಸಾಹಸಕ್ಕೆ ಮುಂದಾಗುತ್ತಾರೆ . ಕೆಲವರು ನದಿಯ ತೀರದಲ್ಲಿ ಮತ್ತು ಬೆಟ್ಟ ಗುಡ್ಡದ ಮೇಲೆ ನಿಂತು ಕೊಂಡು ರೀಲ್ಸ್ ಮಾಡಿರುತ್ತಾರೆ ಮತ್ತು ಎಷ್ಟೋ ಜನ ಇದರಿಂದ ಪ್ರಾಣ ಸಹ ಕಳೆದುಕೊಂಡಿರುತ್ತಾರೆ ಇಂತಹ ಒಂದು ಘಟನೆ ರೀಲ್ಸ್ ಮಾಡಲು ಹೋಗಿ ರೈಲಿಗೆ ಸಿಲುಕಿ ಬಾಲಕರಿಬ್ಬರು ಮೃತಪಟ್ಟ ಘಟನೆ ಬಿಹಾರದ ಖಗರಿಯಾದಲ್ಲಿ ನಡೆದಿದೆ. 

ಮೃತ ಬಾಲಕರು ಸೇರಿದಂತೆ ಒಟ್ಟು ಮೂರು ಜನ ರೈಲು ಹಳಿ ಮೇಲೆ ನಿಂತುಕೊಂಡು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ರೈಲು ಬಂದಿದ್ದು, ಓರ್ವ ಬಾಲಕ ರೈಲ್ವೆ ಬ್ರಿಡ್ಜ್‌ನಿಂದ ಕೆಳಗೆ ಹಾರಿದ್ದರೆ, ಮತ್ತಿಬ್ಬರು ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿಗೂ 15 ನಿಮಿಷ ಮೊದಲು ಇವರು ಇನ್ಸ್ಟಾಗೆ ರೀಲ್ಸ್ ಅಪ್‌ಲೋಡ್ ಮಾಡಿದ್ದರು.  ಬಿಹಾರದ    ಖಗರಿಯಾದಲ್ಲಿರುವ   ರೈಲ್ವೆ ಬ್ರಿಡ್ಜ್‌ ಮೇಲೆ ನಿಂತುಕೊಂಡು ಬಾಲಕರಿಬ್ಬರು ರೀಲ್ಸ್ ಮಾಡುತ್ತಿದ್ದರು. ಈ ವೇಳೆ ರೈಲು ಬಂದಿದ್ದು, ಇಬ್ಬರು ಬಾಲಕರು ರೈಲಡಿಗೆ ಬಿದ್ದು ಪ್ರಾಣ ಬಿಟ್ಟರೆ ಮತ್ತೊಬ್ಬ ಬ್ರಿಡ್ಜ್‌ನಿಂದ ನರಿ ತೀರಕ್ಕೆ ಹಾರಿದ್ದು, ಆತನ ಪ್ರಾಣ ಉಳಿದಿದ್ದರು, ಆತನಿಗೆ ಗಂಭೀರ ಗಾಯಗಳಾಗಿವೆ.  ಜನವರಿ 1 ರ ಹೊಸವರ್ಷದಂದೇ ಈ ದುರಂತ ಸಂಭವಿಸಿದೆ. ಮೂವರ ವಯಸ್ಸು 16 ರಿಂದ 19 ವರ್ಷದ ಒಳಗಿದೆ. 

ಮೃತ ಬಾಲಕರನ್ನು ಸೋನು ಹಾಗೂ ನಿತೀಶ್ ಎಂದು ಗುರುತಿಸಲಾಗಿದೆ. ಈ ಅನಾಹುತದಲ್ಲಿ ಪ್ರಾಣ ಉಳಿಸಿಕೊಂಡಿರುವ ಬಾಲಕ ಅಮನ್ ಘಟನೆ ಬಗ್ಗೆ ವಿವರಿಸಿದ್ದಾನೆ. ನಾನು, ಸೋನು ಹಾಗೂ ನಿತೀಶ್ ಮೂವರು ಹೊಸ ವರ್ಷದ ಅಂಗವಾಗಿ ಧಮರಾ ಘಾಟ್ ಸ್ಟೇಷನ್  ಬಳಿ ಇರುವ ಮಾ ಕ್ಯಾತ್ಯಾಯಿನಿ ದೇಗುಲಕ್ಕೆ ಹೋಗುತ್ತಿದ್ದೆವು. ಈ ವೇಳೆ ಪ್ರಮುಖ ರಸ್ತೆಯಲ್ಲಿ ಭಾರಿ ಜನಸಂದಣಿ ಇದ್ದಿದ್ದರಿಂದ ನಾವು ರೈಲ್ವೆ ಬ್ರಿಡ್ಜ್ ಮೇಲೆ ಹೋಗಲು ನಿರ್ಧರಿಸಿದೆವು. ಈ ನಡುವೆ ರೈಲ್ವೆ ಬ್ರಿಡ್ಜ್‌ನಲ್ಲೇ ಸೋನು ಹಾಗೂ ನಿತೀಶ್ ರೀಲ್ಸ್ ಮಾಡಲು ಮುಂದಾಗಿದ್ದಾರೆ ಎಂದು ಆತ ಹೇಳಿದ್ದಾನೆ. 

ಯುವಕರೇ ಮತ್ತು ಯುವತಿಯರೇ ಇನ್ನಾದರೂ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡುವದನ್ನು ತಪ್ಪಿಸಿ . ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ .