ಮಂಡ್ಯದಲ್ಲೊಂದು ಶಾಕಿಂಗ್ ಘಟನೆ..! ಬೆಟ್ಟದ ತೆಪ್ಪಲಿನಲ್ಲಿ ಶಿಕ್ಷಕಿಯ ಎಳೆದೊಯ್ದು ಕೊಲೆ..!
ಸ್ನೇಹಿತರೆ ಹೇಗಿದ್ದೀರಾ, ಚೆನ್ನಾಗಿದ್ದೀರಾ, ನೀವೂ ಕೂಡ ಚೆನ್ನಾಗಿದ್ದೀರಿ ಅಂತ ಅನ್ಕೊಂಡಿದೀವಿ. ಹೌದು ಇತ್ತೀಚಿಗೆ ಕೆಲವರಿಗೆ ಕಾನೂನಿನ ಮೇಲೆ, ಪೊಲೀಸರ ಮೇಲೆ ಮತ್ತು ನ್ಯಾಯ ಒದಗಿಸುವ, ನ್ಯಾಯ ನೀಡುವ ಅತ್ತ ಕೋರ್ಟ್ ಗಳ ಮೇಲೆ ಆಗಲಿ, ಯಾವುದೇ ಭಯ ಇಲ್ಲದಂತೆ ಆಗಿ ಹೋಗಿದೆ. ಯಾವುದೇ ಆತಂಕ ಇಲ್ಲದೆ ನಿರ್ಭಯವಾಗಿ ತಾವು ಅಂದುಕೊಂಡ ರೀತಿಯೆ ಕೆಟ್ಟ ಕೆಲಸಗಳನ್ನು ಮಾಡಿ ಹೆಚ್ಚು ಜನರ ಭಯಬೀತರನ್ನಾಗಿ ಮಾಡುತ್ತಿದ್ದಾರೆ..ಇತ್ತೀಚಿಗೆ ಹೆಚ್ಚು ಜೀವ ತೆಗೆದು, ತಮ್ಮ ಆಸೆಗಳ ಬೆನ್ನತ್ತಿ, ಅತ್ತ ಸುಲಿಗೆಗಳನ್ನ ಮಾಡುತ್ತಾ, ಜೀವ ತೆಗೆದು ಬೆದರಿಕೆ ಒಡ್ಡಿ ಹಣ ತೆಗೆದುಕೊಂಡು ಹೋಗುವ ಘಟನೆಗಳನ್ನೇ ನೋಡುತ್ತಿದ್ದೇವೆ.
ಇನ್ನೊಂದು ಕಡೆ ಅತ್ಯಾಚಾರ, ಮಹಿಳೆಯರ ಮೇಲೆ ಆಗುವ ದೌರ್ಜನ್ಯಗಳು, ಅವರ ಜೀವ ತೆಗೆಯುವ ಮುಟ್ಟಕ್ಕೂ ಕೆಲವರು ಮುಂದಾಗುತ್ತಿದ್ದಾರೆ. ಅಂತಹದೇ ಒಂದು ಘಟನೆ ಮಂಡ್ಯದಲ್ಲಿ ನಡೆದಿದೆ..ಈಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಈ ಘಟನೆ ತುಂಬಾ ಭಯಾನಕ ಆಗಿ ನಡೆದಿರುವಂತೆ ಕಂಡು ಬಂದಿವೆ. ದೀಪಿಕಾ ಎಂಬ 28 ವರ್ಷದ ಅತಿಥಿ ಶಿಕ್ಷಕಿಯನ್ನು ಮಂಡ್ಯ ಜಿಲ್ಲೆಯ ಮೇಲುಕೋಟೆ ನರಸಿಂಹ ಬೆಟ್ಟದ ತೆಪ್ಪಲಿನಲ್ಲಿ ಕರೆದುಕೊಂಡು ಹೋಗಿ ಆಕೆಯ ಜೀವ ತೆಗೆದುಹಾಕಿದ್ದಾರೆ ದುಷ್ಕರ್ಮಿಗಳು. ದೀಪಿಕಾ ಅವರ ಶವ ಮೂರು ದಿನಗಳ ಬಳಿಕ ಆ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಅಲ್ಲಿ ಓಡಾಡುವ ಕಾಗೆ ಮತ್ತು ಹದ್ದುಗಳ ಹಾರಾಟದಿಂದ, ಹಾಗೆ ಅವರ ಸ್ಕೂಟಿ ಗಮನಿಸಿದ ಕೆಲವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಇನ್ನೊಂದು ಕಡೆ ಶನಿವಾರ ಸ್ಕೂಟಿ ತೆಗೆದುಕೊಂಡು ಶಾಲೆಗೆ ಹೋದ ದೀಪಿಕಾ ಅವರು ಮರಳಿ ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಅವರ ಮನೆಯವರು ಕೂಡ ದೂರನ್ನು ನೀಡಿದ್ದರು. ದೀಪಿಕಾ ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಎನ್ನುವ ಊರಿನವರು.. ಇವರು ಮೇಲುಕೋಟೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಎಸ್ ಎ ಟಿ ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇವರಿಗೆ ಈಗಾಗಲೇ ಮದುವೆಯಾಗಿದ್ದು ಎಂಟು ವರ್ಷದ ಮಗ ಕೂಡ ಇದ್ದನು ಎನ್ನಲಾಗಿದೆ. ಒಂದು ಕಡೆ ಸಂಸಾರ, ಇನ್ನೊಂದು ಕಡೆ ಉದ್ಯೋಗ, ಒಳ್ಳೆಯ ಕುಟುಂಬ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಇವರನ್ನು ಯಾರು ಆ ಬೆಟ್ಟದ ತೆಪ್ಪಲಿಗೆ ಎಳೆದುಕೊಂಡು ಹೋಗಿ ಕೊಲೆ ಮಾಡಿ ಸಾಯಿಸಿದ್ದಾರೆ ಎನ್ನುವ ವಿಚಾರ ಇನ್ನು ಬಯಲಾಗಬೇಕಿದೆ. ತನಿಕೆ ಈಗಾಗಲೇ ಜೋರು ನಡೆಯುತ್ತಿದ್ದು ಅವರನ್ನ ಹೂತು ಹಾಕಿದ ಸ್ಥಳವನ್ನ ಈ ವಿಡಿಯೋದಲ್ಲಿ ನೋಡಿ, ಮತ್ತು ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.. ( video credit : Third Eye )