ಯಶ್ ಹುಟ್ಟಿದ ದಿನವೇ ಸಾವನ್ನಪ್ಪಿದ ಹುಡುಗರ ಕುಟುಂಬಕ್ಕೆ ಪರಿಹಾರ ನೀಡಿದ ಯಶ್..! ಕೊಟ್ಟ ಹಣವೇಷ್ಟು ನೋಡಿ
ಹೌದು ಇತ್ತೀಚಿಗೆ ಎಲ್ಲರಿಗೂ ಗೊತ್ತಿರುವಂತೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ ಬಂದಿತ್ತು. ಅವರ ಹುಟ್ಟು ಹಬ್ಬದ ದಿನವೇ ಅವರ ಅಭಿಮಾನಿಗಳು ಫ್ಲೆಕ್ಸ್ ಕಟ್ಟಲು ಮೇಲೆ ಹತ್ತುವ ವೇಳೆಯೇ ಕರೆಂಟ್ ಶಾಕ್ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.. ಹೌದು ಒಟ್ಟು ಮೂವರು ಸಾವನ್ನಪ್ಪಿದ್ದರು ಆ ದುರಂತದಲ್ಲಿ. ಅದು ನಡೆದದ್ದು ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ. 19 ವರ್ಷದ ನವೀನ್ ಗಾಜಿ, 20 ವರ್ಷದ ಮುರಳಿ ನಡುವಿನಮನಿ, ಹಾಗೂ 21 ವರ್ಷದ ಹನುಮಂತ ಹರಿಜನ್ ಎನ್ನಲಾಗಿದೆ. ಇವರೇ ಕರೆಂಟ್ ಶಾಕ್ಗೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದವರು.
ಅದಾದ ಬಳಿಕ ನಟ ಯಶ್ ಅವರಿಗೆ ಈ ಕಹಿ ವಿಷಯ ಮುಟ್ಟುತ್ತಿದ್ದಂತೆಯೆ ಸೀದಾ ಕುಟುಂಬಸ್ಥರ ಊರಿಗೆ ಆಗಮಿಸಿ ಆ ಎಲ್ಲಾ ಹುಡುಗರ ತಂದೆ ತಾಯಿ ಹಾಗೂ ಅವರ ಕುಟುಂಬದವರನ್ನು ಮಾತನಾಡಿಸಿ, ತಮ್ಮ ಹುಟ್ಟು ಹಬ್ಬದ ದಿನ ಈ ರೀತಿ ಆಯಿತಲ್ಲ ಎಂದು ನೋವ ತೋಡಿಕೊಂಡಿದ್ದರು.. ಅವರ ನೋವಿನಲ್ಲಿ ಭಾಗಿಯಾಗಿದ್ದರು. ಹೌದು ಇದೀಗ ನಟ ಯಶ್ ಅವರ ಮೂಲಕವೇ, ಯಶ್ ಅವರ ಗೆಳೆಯರು ಸಾವನ್ನಪ್ಪಿದ ಹುಡುಗರ ಕುಟುಂಬಸ್ಥರಿಗೆ ಸಹಾಯ ಹಸ್ತ ನೀಡಿದ್ದಾರೆ..
ಪರಿಹಾರ ರೂಪದಲ್ಲಿ ಸಾವನ್ನಪ್ಪಿದ ಹುಡುಗರ ತಂದೆ ತಾಯಿಗೆ ಐದು ಲಕ್ಷ ಹಣ ನೀಡಿದ್ದಾರೆ ಎಂದು ಕೇಳಿ ಬಂದಿದೆ.
ಹೌದು ಜೊತೆಗೆ ಇನ್ನು ಮುಂದೆಯೂ ಕೂಡ ನಿಮ್ಮ ನಿಮ್ಮ ಕುಟುಂಬದ ಜೊತೆ ಇರುತ್ತೇವೆ ಎನ್ನುವ ಭರವಸೆ ಮಾತನ್ನು ಕೂಡ ಯಶ್ ಅವರು ಆಡಿದ್ದಾರೆ ಎನ್ನಲಾಗಿ ಕುಟುಂಬಸ್ಥರ ಎದುರು ಯಶ್ ಗೆಳೆಯರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಹಾಗೆ ಈ ರೀತಿ ಅಭಿಮಾನಿಗಳು ಸಾವನ್ನಪ್ಪಬಾರದಿತ್ತು. ಆದ್ರೆ ಅದು ಆಗಿಯೇ ಹೋಯ್ತು ಎಂದು ನೋವಿನ ವಿಚಾರದ ಬಗ್ಗೆ ಮಾತಾಡಿ,, ಯಶ್ ಅವರ ಕಡೆಯಿಂದ ಬಂದ ಐದು ಲಕ್ಷ ಚೆಕ್ ನೀಡಿದ್ದಾರೆ. ಹೌದು ಇನ್ನೂ ಕೆಲವು ಗಳಾಯುಗಳ ಡೀಟೇಲ್ಸ್ ಗಳನ್ನು ಪಡೆದುಕೊಳ್ಳುತ್ತಿದ್ದು ಅವರಿಗೂ ಪರಿಹಾರ ನೀಡುತ್ತೇವೆ ಎಂದು ಹೇಳಿದರು. ಯಶ್ ಅವರ ಯಶೋಮಾರ್ಗದ ಮೂಲಕ ಇದೀಗ 5 ಲಕ್ಷ ಹಣದ ಚೆಕ್ ಆ ಹುಡುಗರ ಸಂತ್ರಸ್ತ ಕುಟುಂಬಕ್ಕೆ ಸೇರಿದೆ....