ಈ ಮನುಷ್ಯನ ಸೃಷ್ಟಿ ಹೇಗಾಯಿತು..? ಮೊದಲ ಬಾರಿ ಹೆಂಗಸು ಗರ್ಭಿಣಿ ಆದ ಕಥೆ ನೋಡಿ..!!

ಈ ಮನುಷ್ಯನ ಸೃಷ್ಟಿ ಹೇಗಾಯಿತು..? ಮೊದಲ ಬಾರಿ ಹೆಂಗಸು ಗರ್ಭಿಣಿ ಆದ ಕಥೆ ನೋಡಿ..!!

ಮನುಷ್ಯ ಭೂಮಿಗೆ ಬರುವ ಮುನ್ನ ಈ ಭೂಮಿ ಸೃಷ್ಟಿ ಹೇಗಾಯಿತು, ಭೂಮಿ ಮೇಲೆ ಜಲಚರ ಪ್ರಾಣಿಗಳು, ಗಿಡಗಳು, ಮರಗಳು, ನದಿಗಳು, ನೀರು, ಬೆಂಕಿ, ಗಾಳಿ, ಭೂಮಿ, ಆಕಾಶ, ಇದೆಲ್ಲ ಹೇಗೆ ಸೃಷ್ಟಿ ಆಯಿತು ಎಂದು  ಸಾಕಷ್ಟು ಜನರಿಗೆ ಗೊತ್ತಿಲ್ಲ. ಗ್ರಂಥಾಲಯದ ಒಂದು ವರದಿ ಪ್ರಕಾರ, ಈ ಭೂಮಿಯ ಸೃಷ್ಟಿಕರ್ತ ಅಂದರೆ ಅದು ದೇವರಂತೆ.. ಭೂಮಿಯ ಮೇಲೆ ಎಲ್ಲಾ ರೀತಿ ಪ್ರಾಣಿಗಳನ್ನು ದೇವರು ಮೊದಲಿಗೆ ಸೃಷ್ಟಿ ಮಾಡುತ್ತಾನೆ.. ಆಕಾಶಕ್ಕೆ ಹಗಲು ಕಾಯಲಿಕ್ಕೆ ಸೂರ್ಯನ ನೇಮಕ ಮಾಡುತ್ತಾನೆ. ರಾತ್ರಿ ಕಾಯಲು ಚಂದ್ರನನ್ನು ನೇಮಕ ಮಾಡುತ್ತಾನೆ. ಹೀಗೆ ವಿಧಿ ವಿಧಾನವಾಗಿ ಎಲ್ಲವನ್ನು ಸೃಷ್ಟಿ ಮಾಡಿದ ಸೃಷ್ಟಿಕರ್ತ ದೇವರು, ನಂತರ ಒಬ್ಬ ಮನುಷ್ಯನನ್ನು ತನ್ನಂತೆ ಇರುವ ಹೋಲಿಕೆಯ ಮನುಷ್ಯನನ್ನ ಮಣ್ಣಿನಲ್ಲಿ ದೇವರೇ ತನ್ನ ಕೈಯಾರೆ ತಯಾರು ಮಾಡುತ್ತಾನಂತೆ.

ನಂತರ ತಯಾರಾದ ಮೊದಲ ಪುರುಷನನ್ನ ಒಂದು ತೋಟದಲ್ಲಿ ಬಿಟ್ಟು, ಪ್ರಾಣಿಗಳ ಜೊತೆ ಅಡವಿಯಲ್ಲಿ ಬಿಟ್ಟುಬಿಡುತ್ತಾನೆ. ಅಲ್ಲಿ ಇರುವ ಹಣ್ಣುಗಳನ್ನು ತಿಂದು ಜೀವನ ಸಾಗಿಸುವುದಾಗಿ ಆತನಿಗೆ ಹೇಳಿರುತ್ತಾನೆ. ಅದೇ ರೀತಿ ಎಲ್ಲಾ ಜೀವ ರಾಶಿಗಳಿಗೆ ಒಂದೊಂದು ಜೋಡಿ ಎಂಬಂತೆ ಇದ್ದು, ಮನುಷ್ಯನಿಗೆ ಮಾತ್ರ ಯಾವ ಜೋಡಿ ಆರಂಭದಲ್ಲಿ ಇರುವುದಿಲ್ಲ. ಹೌದು ದೇವರು ಇದನ್ನು ಅರ್ಥೈಸಿಕೊಂಡು ಒಂದು ಹೆಣ್ಣನ್ನು ಕೂಡ ಆಗ ಸೃಷ್ಟಿ ಮಾಡುತ್ತಾನೆ. ನಂತರ ಇವರಿಬ್ಬರಿಗೆ ತೋಟದಲ್ಲಿರುವ ಹಣ್ಣುಗಳನ್ನು ತಿನ್ನಿರಿ, ನಿಮಗೆ ಇಲ್ಲಿ ಉಚಿತವಾಗಿಯೇ ಹಣ್ಣುಗಳು ಸಿಗುತ್ತವೆ ಎಂದು ಹೇಳಿರುತ್ತಾನೆ. ಆದರೆ ಅದೊಂದು ವಿಶಿಷ್ಟ ಮರದ ಹಣ್ಣನ್ನು ಎಂದಿಗೂ ಸಹ ತಿನ್ನಬೇಡಿ ಎಂದು ಆಜ್ಞೆ ಮಾಡಿ ಹೋಗಿರುತ್ತಾನಂತೆ ಈ ದೇವರು. 

ದೇವರು ಈ ರೀತಿ ಹೇಳಲು ಕೂಡ ಒಂದು ದೊಡ್ಡ ಕಾರಣ ಇದೆ, ಕಾರಣ ಏನೆಂದರೆ ಒಂದು ವೇಳೆ ಆ ವಿಶಿಷ್ಟ ಮರದ ವಿಶಿಷ್ಟ ಹಣ್ಣನ್ನು ಈ ಜೋಡಿ ತಿಂದರೆ ಮನುಷ್ಯನಲ್ಲಿ ಇರದ ಕಾ+ಮ, ಕ್ರೋದ, ಮದ, ಮತ್ಸರ, ಆಸೆ, ಅಸುಹೆ, ನಾಚಿಕೆ, ಸೊಕ್ಕು ಎಲ್ಲವೂ ಕೂಡ ಬಂದೇ ಬರುತ್ತದೆ ಎಂಬುದಾಗಿ ಮೊದಲೆ ದೇವರಿಗೆ ಗೊತ್ತಿತ್ತಂತೆ. ಹಾಗಾಗಿ ಅದನ್ನು ತಿಂದರೆ ನೀವು ಸಾವನ್ನಪ್ಪುವಿರಿ ಎಂಬುದಾಗಿಯೂ ದೇವರು ಹೇಳಿದ್ದನಂತೆ. ಆದರೆ ಒಂದು ದಿನ ಹಾವು ಈ ಪುರುಷ ಮಹಿಳೆ ಬಳಿ ಬಂದು, ನೀವು ತೋಟದಲ್ಲಿರುವ ಹಣ್ಣುಗಳನ್ನೆಲ್ಲ ತಿನ್ನುತ್ತೀರಿ, ಅದೊಂದು ಮರದಲ್ಲಿಯ ಹಣ್ಣನು ಯಾಕೆ ತಿನ್ನುವುದಿಲ್ಲ ಎಂದು ಕೇಳಿತಂತೆ. ಆಗ ದೇವರು ಸೃಷ್ಟಿ ಮಾಡಿದ ಈ ಹೆಣ್ಣು, ಸೃಷ್ಟಿಕರ್ತ ದೇವರು ಅದೊಂದು ಮರದ ಹಣ್ಣನ್ನು ತಿನ್ನಬೇಡಿ ಎಂದು ನಮಗೆ ಹೇಳಿದ್ದಾನೆ ಎಂದು ಹೇಳುತ್ತಾಳೆ..ಆಗ ಹಾವು ಅದೇನು ಆಗುವುದಿಲ್ಲ, ನೀವು ಹಣ್ಣನ್ನು ಸೇವಿಸಬಹುದು ಎಂದು ಬಿಡುತ್ತದೆ. ಅದನ್ನು ಕೇಳಿಸಿಕೊಂಡು ಮೊಟ್ಟ ಮೊದಲ ಈ ಹೆಣ್ಣು, ಆ ಮರದಲ್ಲಿಯ ಹಣ್ಣನ್ನು ಕಿತ್ತುಕೊಂಡು ತಾನು ತಿಂದು ಬಿಡುತ್ತಾಳೆ. ಹುಡುಗನಿಗೂ ಕೂಡ ಕೊಟ್ಟುಬಿಡುತ್ತಾಳೆ ಅವನು ಸಹ ತಿನ್ನುತ್ತಾನೆ.

ನಂತರ ಅರಿವಿಲ್ಲದೇನೆ ಅವರಿಬ್ಬರಿಗೂ ನಾಚಿಕೆ, ಆಸೆ ಬರುತ್ತದೆ. ಅವರ ದೇಹದಲ್ಲಿಯ ಬದಲಾವಣೆಗಳಿಂದ ಇಬ್ಬರು ಅಲ್ಲಿಯೇ ಮೈ ಮರೆತುಬಿಡುತ್ತಾರೆ.. ಇಬ್ಬರೂ ದೇಹ ಸ್ಪರ್ಶ ಮಾಡಿ ಅಲ್ಲಿ ಇಬ್ಬರೂ ಸುಖದಲ್ಲಿ ತೆಲಾಡಿ ಬಿಡುತ್ತಾರೆಂದು ತಿಳಿದುಬಂದಿದೆ. ನಂತರ ನಮ್ಮ ಮೈ ಮೇಲೆ ಒಂದು ಚೂರೂ ತುಂಡು ಬಟ್ಟೆ ಇಲ್ಲವಲ್ಲ ಎಂಬ  ಅರಿವು ಆಗ ಅವರಿಗೆ ಬರುತ್ತದೆ. ಇದ್ದಕ್ಕಿದ್ದಂತೆಯೆ ಆ ತೋಟಕ್ಕೆ ಬಂದ ದೇವ್ರು, ಎಲ್ಲಿದ್ದೀರಾ ನೀವಿಬ್ಬರೂ ಎಂದು ಪ್ರಶ್ನೆ ಮಾಡುತ್ತಾನೆ. ನಮ್ಮ ಮೈ ಮೇಲೆ ಯಾವ ಬಟ್ಟೆ ಇಲ್ಲ, ಹಾಗಾಗಿ ಎಲೆ ಮರಗಳನ್ನು ಸುತ್ತಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ದೇವ್ರೆ ಎಂದು ಈ ಗಂಡು ಹೆಣ್ಣು ಉತ್ತರಿಸುತ್ತಾರೆ. ಅಷ್ಟೊತ್ತಿಗೆ ಇವರ ಹಣ್ಣಿನ ವಿಚಾರ ದೇವರಿಗೆ ಎಲ್ಲ ಗೊತ್ತಾಗಿಬಿಡುತ್ತದೆ.

ಆ ಹಣ್ಣು ತಿಂದಿರುವ ವಿಷಯ ಗೊತ್ತಾಗಿದ್ದು, ಮೊದಲು ಹಾವಿನ ಕಡೆ ದೇವರು ಗಮನ ಹರಿಸುತ್ತಾನೆ...ನೀನು ಮಾಡಿರುವ ಈ ತಪ್ಪಿನಿಂದ ಭೂಲೋಕದಲ್ಲಿ ಇನ್ನು ಮುಂದೆ ನಿನ್ನನ್ನು ಮನುಷ್ಯ ನೋಡಿದ ತಕ್ಷಣ ಕಂಡ ಸ್ಥಳದಲ್ಲೇ ಕೊಲ್ಲುತ್ತಾನೆ. ಅದೇ ನಾ ನಿನಗೆ ಕೊಡ್ತಿರುವ  ಶಾಪ, ಹಾಗೂ ಶಿಕ್ಷೆ ಎಂದು ಬಿಡುತ್ತಾನೆ ದೇವ್ರು. ನೀನು ಭೂಲೋಕದಲ್ಲಿ ಕೆಟ್ಟ ಹುಳದಂತೆಯೇ ಇದ್ದು, ಕೆಟ್ಟ ಹುಳ ಎಂಬ ಹೆಸರಿನಿಂದಲೆ ಪ್ರಖ್ಯಾತಿ ಪಡೆಯುವೆ ಎಂದು ಶಾಪ ಹಾಕಿಬಿಡುತ್ತಾನಂತೆ ದೇವರು.. ನಂತರ ಹೆಣ್ಣಿನ ಕಡೆಗೆ ಬಂದು, ನೀನು ಮಾಡಿರುವ ಈ ತಪ್ಪಿನ ಬದಲಿಗೆ ನೀನು ಒಂದು ಮಗುವಿಗೆ ಜನ್ಮ ನೀಡುತ್ತೀಯಾ ಅಲ್ವಾ, ಜನ್ಮ ನೀಡುವ ಆ ವೇಳೆ ನಿನಗೆ ಮತ್ತೊಂದು ಮರುಜನ್ಮ ಹುಟ್ಟಿ ಬಂದಷ್ಟು ನೋವು ಆ ಸಮಯದಲ್ಲಿ ನಿನಗೆ ಇರಲಿ ಎಂದು ಶಾಪ ಹಾಕಿಬಿಡುತ್ತಾನೆ.

ನಂತರ ಪುರುಷನ ಕಡೆ ಬಂದ ಆ ದೇವರು, ನೀನು ಮಾಡಿರುವ ಈ ತಪ್ಪಿಗೆ, ಭೂಮಿಯ ಮೇಲೆ ಕೆಲಸ ಮಾಡಿಯೇ, ಭೂಮಿ ತಾಯಿ ಒಡಲಲ್ಲಿ ದುಡಿದೆ ಇನ್ನು ಮುಂದೆ ನೀನು ತಿನ್ನಬೇಕು ಎಂಬಂತೆ ಹೇಳಿದ್ದು, ನೀವು ಮಾಡಿದ ಈ ಕೆಲಸದಿಂದ ನೀವು ಕೊನೆಗೆ ಇದೆ ಮಣ್ಣಿನಲ್ಲಿ ಒಂದು ದಿನ ಮಣ್ಣಾಗಿ ಹೋಗುತ್ತೀರಿ, ಈ ಮಣ್ಣಿಗೆ ಕೊನೆಗೆ ನಿಮ್ಮ ದೇಹ ಸೇರಲೇಬೇಕು ಎಂದು ದೇವರು ಶಾಪ ನೀಡಿದನಂತೆ. ಹಾಗಾಗಿ ಮನುಷ್ಯನ ಇಂದಿನ ಜೀವನ ಯಾವುದು ಕೂಡ ಶಾಶ್ವತ ಇಲ್ಲ. ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇಬೇಕು. ಜೀವ ಬಿಡಲೆಬೇಕು ಅಲ್ವಾ, ದೇವರು ಹಾಕಿದ ಶಾಪದಂತೆ ಅಂದು ಗಂಡಸು ಹೆಂಗಸು ಸೇರಿ ಮಾಡಿದ ಅದೊಂದು ತಪ್ಪಿನಿಂದ ಇಂದಿಗೂ ಅದು ಮುಂದುವರೆಯುತ್ತಲೆ ಬಂದಿರುತ್ತದೆ, ಇವರಿಬ್ಬರು ಮಾಡಿದ ಮೊದಲ ತಪ್ಪಿನಿಂದ ಆಗ ಮಗು ಹುಟ್ಟಿದ್ದು ಆತನ ಕುಟುಂಬದ ಸಂತಾನೋತ್ಪತ್ತಿ ಆಗಿ ಮುಂದುವರಿಯಲಿ, ಯಾರಿಗೂ ಕೂಡ ಇಲ್ಲಿ ಭೂಮಿಯ ಮೇಲೆ ಇರಲು ಅವಕಾಶ ಇಲ್ಲ ಎಂಬಂತೆ ದೇವರು ಈ ರೀತಿ ಮನುಷ್ಯನನ್ನು  ಸೃಷ್ಟಿ ಮಾಡಿದ್ದು ಏನು ಆಸೆ ಪಡದ ಈ ಲೋಕವನ್ನ ಹಾಗೆ ಬಿಟ್ಟನು ಎಂದು ಕೆಲವು ವರದಿಗಳ ಮೂಲಕ ತಿಳಿದು ಬಂದಿದೆ...ಆದರೆ ಮನುಷ್ಯನ ಸೃಷ್ಟಿ ಮಂಗನಿಂದ ಮಾನವ ಎಂದು ಕೆಲವು ಕಡೆ ಹೇಳಲಾಗುತ್ತದೆ. ಅದರ ಬಗ್ಗೆ ಇಂದಿಗೂ ಕೂಡ ಸಾಕಷ್ಟು ವಿಜ್ಞಾನಿಗಳು ರಿಸರ್ಚ್ ಮಾಡುತ್ತಲೇ ಇದ್ದಾರೆ, ಮನುಷ್ಯನ ಸೃಷ್ಟಿ ಹೇಗಾಯಿತು ಎಂದು ಯಾರೂ ಸಹ ಇಲ್ಲಿಯವರೆಗೂ ಯಾವುದೇ ಮಾಹಿತಿ ಕಲೆ ಹಾಕಿಲ್ಲ. ಇಲ್ಲಿದೆ ನೋಡಿ ವಿಡಿಯೋ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು....

(video credit : Story Fellow )