ಜೀವ ತೆಗೆದ ಸೆಲ್ಫಿ ಹುಚ್ಚು ;ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿದ ಮಹಿಳೆ ಸಾವು! ; ವಿಡಿಯೋ ವೈರಲ್

ಜೀವ ತೆಗೆದ ಸೆಲ್ಫಿ ಹುಚ್ಚು ;ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿದ ಮಹಿಳೆ ಸಾವು! ; ವಿಡಿಯೋ ವೈರಲ್

ಈಗಿನ ಕಾಲದ ಜನರಿಗೆ  ಸೆಲ್ಫಿ ಹುಚ್ಚು ಎಷ್ಟು ಹೆಚ್ಚಾಗಿದೆ ಅಂದರೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೆಲ್ಫಿ ತೆಗೆಯಲು ಮುಂದಾಗುತ್ತಾರೆ . ಆದರೆ ಅವರಿಗೆ ಇದರಿಂದ ತಮ್ಮ ಪ್ರಾಣ ಸಹ ಹೋಗ ಬಹುದು ಎಂದು ಗೊತ್ತಿರುವದಿಲ್ಲ . ಇಲ್ಲೊಂದು ಘಟನೆ ನೋಡಿ . ಇನ್ನಾದರೂ ಜನರು ಬುದ್ದಿ ಕಲಿಯ ಬೇಕು .

ಮಹಿಳೆಯನ್ನು ಜ್ಯೋತಿ ಸೋನಾರ್ ಎಂದು ಗುರುತಿಸಲಾಗಿದೆ. ಆಕೆಯ ಪತಿ ಮುಖೇಶ್ ಸೋನಾರ್ ಮತ್ತು ಅವರ ಮಕ್ಕಳು ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ಬಾಂದ್ರಾ ಕೋಟೆಗೆ ತೆರಳಿದ್ದಾರೆ. ಮುಂಬೈನ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಜುಲೈ 9 ರಂದು ಈ ದುರಂತ ಘಟನೆ ಸಂಭವಿಸಿದೆ .ಮಹಿಳೆ ತನ್ನ ಪತಿಯೊಂದಿಗೆ ಸಮುದ್ರದ ಕಲ್ಲಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು, ಆಗ ಸಮುದ್ರದ ದೊಡ್ಡ ಅಲೆಯೊಂದು ಅವಳಿಗೆ ಅಪ್ಪಳಿಸಿತು. 

ಮಳಿ ಪತಿ ಜತೆಗೆ ಕುಳಿತು ಸಮುದ್ರದ ಅಲೆ ಅಪ್ಪಳಿಸುವುದನ್ನು ಎಂಜಾಯ್​​ ಮಾಡುತ್ತಿದ್ದಳು. ಆದರೆ ಜೋರಾಗಿ ಅಲೆ ಅಪ್ಪಳಿಸಿದ ಹೋಡೆತಕ್ಕೆ ಮಹಿಳೆ ಕೊಚ್ಚಿಕೊಂಡು ಹೋಗಿದ್ದಾಳೆ. ಅಲ್ಲೇ ಇದ್ದ ಅವರ ಮಗು ಮಮ್ಮಿ.. ಮಮ್ಮಿ ಎಂದು ಕೂಗುತ್ತಿರುವುದು ಕೇಳುತ್ತದೆ. ಅಲ್ಲಿ ನಿಂತಿದ್ದ ಜನರು ಪತಿಯನ್ನು ರಕ್ಷಿಸಿದ್ದಾರೆ. ಆದರೆ ಮಹಿಳೆ ಕೊಚ್ಚಿಹೋಗಿದ್ದಾಳೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.