ಹೆಂಡ್ತಿ ಬಾಯಿಯೊಳಗೆ ಸಿಗರೇಟ್ ಹೊಗೆ ಬಿಟ್ಟ ಪತಿ...! ಥೂ ಎಂದು ವಿಡಿಯೋ ನೋಡಿ ಉಗಿದ ನೆಟ್ಟಿಗರು

ಹೆಂಡ್ತಿ ಬಾಯಿಯೊಳಗೆ ಸಿಗರೇಟ್ ಹೊಗೆ ಬಿಟ್ಟ ಪತಿ...! ಥೂ ಎಂದು ವಿಡಿಯೋ ನೋಡಿ ಉಗಿದ ನೆಟ್ಟಿಗರು

ಹೌದು ಈಗೀಗ ಸಾಮಾಜಿಕ ಜಾಲತಾಣದಲ್ಲಿ ಕೆಲವರು ತುಂಬಾ ಫಾರ್ವರ್ಡ್ ಆಗುತ್ತಿದ್ದಾರೆ.. ಮದುವೆಗೂ ಮುನ್ನ ಫೋಟೋಶೂಟ್ ಮಾಡಿಸುವುದನ್ನು ನೀವು ಕೂಡ ನೋಡಿದ್ದೀರಿ. ಮದುವೆಯಾದ ಮೇಲು ಕೂಡ ವೆಡ್ಡಿಂಗ್ ಫೋಟೋಶೂಟ್, ವೆಡ್ಡಿಂಗ್ ವಿಡಿಯೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಲೆ ಇವೆ. ಕೆಲವು ವಿಡಿಯೋಗಳು ಸಂತೋಷಭರಿತ ಹಾಗೂ ಸಂತಸ ಕ್ಷಣಗಳನ್ನು ಸೆರೆಹಿಡಿದಂತೆ ಕಂಡರೆ, ಇನ್ನು ಕೆಲವುಗಳು ನೆಟ್ಟಿಗರ ಮತ್ತು ನೋಡುಗರ ಕೆಂಗಣ್ಣಿಗೆ ಗುರಿಯಾಗುತ್ತವೆ. ಹೌದು ಕೆಲವರು ಮಾನ ಮರ್ಯಾದೆ ಸಂಪ್ರದಾಯ ಎಲ್ಲವನ್ನು ದಾಟಿ ಕೆಟ್ಟದಾದ ರೀತಿಯಲ್ಲಿ ವಿಡಿಯೋ ಶೂಟ್ ಮಾಡುತ್ತಾರೆ.

ಅಂತಹದೆ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ ಕೂಡ. ಹೌದು ಮಾಹಿತಿ ಪ್ರಕಾರ ಇದು ಕೇರಳದಲ್ಲಿ ನಡೆದಿರುವ ಘಟನೆಯಾಗಿದೆ. ಮದುವೆ ನಂತರ ಈ ನವ ಜೋಡಿ ಒಂದು ವಿಭಿನ್ನ ವಿಡಿಯೋ ಶೂಟ್ ಮಾಡಿಕೊಂಡಿದೆ. ತನ್ನ ಅರ್ಧಾಂಗಿ ಈಗಾಗಲೇ ಈಕೆ ಆಗಿದ್ದಾಳೆ ಎನ್ನುವ ಅರ್ಥವನ್ನು ತಲೆಯಲ್ಲಿ ಇಟ್ಟುಕೊಂಡು ತುಂಬಾನೇ ರೋಮ್ಯಾಂಟಿಕ್ ಆಗಿ ಓಪನ್ ಪ್ಲೇಸ್ ನಲ್ಲಿಯೇ ತನ್ನ ಹೆಂಡತಿ ಬಾಯಿಗೆ ಸಿಗರೇಟ್ ಹೊಗೆಯನ್ನು ತುಂಬಿಸಿ ಅದನ್ನು ಆಕೆಯ ಮೂಲಕವೇ ಹೊರ ಹಾಕಿಸುವಂತೆ ವಿಡಿಯೋದಲ್ಲಿ ಈ ವರ ಕಾಣಿಸಿದ್ದಾನೆ. ಅಸಲಿಗೆ ಈ ರೀತಿ ಸಿಗರೇಟ್ ಹೊಗೆಯ ತನ್ನ ಹೆಂಡತಿ ಬಾಯಿಯಲ್ಲಿ ಹಾಕಿ, ಆಕೆ ಬಾಯಿಯೊಳಗೆ ಹೊಗೆ ಬಿಡುತ್ತಾ ಈ ರೀತಿ ಕೆಟ್ಟದಾಗಿ ಕಾಣಿಸಿಕೊಳ್ಳುವ ಸಂಪ್ರದಾಯ ಬೇಕಾ ಈತನಿಗೆ. ಅಸಲಿಗೆ ಇದು ಯಾವ ರೀತಿ ವಿಡಿಯೋ ಶೂಟ್ ಎಂದು ನೆಟ್ಟಿಗರು ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.  

ಇನ್ನು ಕೆಲವರು ಇವರನ್ನ ಈ ರೀತಿ ವಿಡಿಯೋ ಶೂಟ್ ಮಾಡಲು ಬಿಡುತ್ತಿದ್ದಾರೆ ಅಂದರೆ ಇವರ ಮನೆಯವರು ಇವರ ಕುಟುಂಬಸ್ಥರು ಎಷ್ಟು ಫಾರ್ವರ್ಡ್ ಇರಬಹುದು ಎಂದು ಯೋಚನೆ ಮಾಡಿ ಎಂದಿದ್ದಾರೆ. ಇನ್ನೂ ಕೆಲವರು ಎತ್ತ ಸಾಗುತ್ತಿದೆ ನಮ್ಮ ಸಮಾಜ ಇದರಿಂದ ಮದುವೆ ಆಗದಿರುವ ಮತ್ತು ಇನ್ನು ಚಿಕ್ಕ ಮಕ್ಕಳ ಮನಸ್ಸಿನಲ್ಲಿ ಯಾವ ರೀತಿ ಪ್ರಭಾವ ಬೀರಬಹುದು ಎನ್ನುವ ಸಣ್ಣ ಅರಿವು ಕೂಡ ಇಲ್ಲದೆ ಈ ರೀತಿ ನಡೆದುಕೊಳ್ಳುತ್ತಾರೆ ಇವರು ಎಂದು ಸಕ್ಕತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ, ಈ ರೀತಿ ಕೆಟ್ಟದಾಗಿ ಕಾಣಿಸಿಕೊಳ್ಳುವ ಮತ್ತು ಓಪನ್ ಪ್ಲೇಸ್ ನಲ್ಲಿ ಈ ರೀತಿ ವಿಡಿಯೋ ಮಾಡಿಕೊಳ್ಳುವ ಜನರಿಗೆ ನೀವು ಏನು ಹೇಳುತ್ತೀರಾ ಕಮೆಂಟ್ ಮಾಡಿ ಧನ್ಯವಾದಗಳು..