ಹೆಂಡತಿಯು ಗಂಡನಿಂದ ಏನೆಲ್ಲ ಬಯುಸುತ್ತಾಳೆ :ಅವಳ ಬಯಕೆ ಏನು ಗೊತ್ತಾ ?

ಹೆಂಡತಿಯು    ಗಂಡನಿಂದ ಏನೆಲ್ಲ ಬಯುಸುತ್ತಾಳೆ :ಅವಳ ಬಯಕೆ ಏನು ಗೊತ್ತಾ ?

ಗಂಡ ಹೆಂಡತಿಯ ಸಂಭಂದವು ಅತೀ ಮುಖ್ಯವಾದ ಮತ್ತು ವಿಶೇಷವಾದುದಾಗಿದೆ. ಅದು ನಂಬಿಕೆ, ಪ್ರೀತಿ, ಪರಸ್ಪರ ಗೌರವ, ಸಹಕಾರ ಮತ್ತು ಶ್ರದ್ಧೆಯ ಮೇಲೆ ನಿಂತಿರುತ್ತದೆ. ಉತ್ತಮ ಸಂಭಂಧವನ್ನು ಕಾಪಾಡಲು ಕೆಲವು ಅಂಶಗಳು ಬಹಳ ಮುಖ್ಯ ಎಂದು ಹೇಳಬಹುದು.ಅವರಿಬ್ಬರ ಮದ್ಯ ಪರಸ್ಪರ ಸಂವಾದ ಅವಶ್ಯಕ. ಒಬ್ಬರಿಗೊಬ್ಬರು ತಮ್ಮ ಭಾವನೆಗಳನ್ನು, ವಿಚಾರಗಳನ್ನು ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಬೇಕು. ಒಬ್ಬರಿಗೊಬ್ಬರು ಗೌರವ ನೀಡುವುದು ಅತೀ ಮುಖ್ಯ. ಇದರಿಂದ ವಿಶ್ವಾಸದ ಬಲ ಹೆಚ್ಚುತ್ತದೆ. ಪರಸ್ಪರ ಸಹಾನುಭೂತಿ ತೋರಿಸುವುದು ಮುಖ್ಯ. ಹತಾಶೆಗೊಳ್ಳುವಾಗ ಅಥವಾ ತೊಂದರೆ ಎದುರಿಸುವಾಗ ಒಬ್ಬರಿಗೊಬ್ಬರು ಬೆಂಬಲ ನೀಡಬೇಕು.

ಎಲ್ಲದಕ್ಕಿಂತ ಹೆಚ್ಚಾಗಿ ಒಟ್ಟಿಗೆ ಸಮಯ ಕಳೆಯುವುದು, ಹೊಸದನ್ನು ಕಲಿಯುವುದು, ಒಟ್ಟಿಗೆ ಪ್ರಯಾಣ ಮಾಡುವುದರಿಂದ ಬಾಂಧವ್ಯವು ಬಲವಾಗುತ್ತದೆ ಎಂದು ಎಲ್ಲರೂ ನಂಬುತ್ತಾರೆ. ಇನ್ನೂ  ಪರಸ್ಪರ ಸಮಯ ನೀಡುವುದು, ಒಟ್ಟಿಗೆ ಕೆಲಸ ಮಾಡುವುದು, ಹಬ್ಬ, ಹರಣಿಯನ್ನು ಒಟ್ಟಿಗೆ ಆಚರಿಸುವುದು ಇವರಿಬ್ಬರ ಭಂಧವನ್ನು ಇನ್ನೂ ಭಲ ಮಾಡುತ್ತದೆ ಎಂದು ಹೇಳಲಾಗುವ ವಿಚಾರ. ಇನ್ನೂ ಹೆಣ್ಣು ಕೊಡ ತನ್ನ ತವರು ಮನೆಯನ್ನು ಬಿಟ್ಟು ಮತ್ತೊಂದು ಮನೆಗೆ ಬರುವ ಸಮಯದಲ್ಲಿ ಸಾಕಷ್ಟು ಆಸೆ ಕನಸುಗಳನ್ನು ಕಟ್ಟಿಕೊಂಡು ತಾನು ಮದುವೆಯಾಗುವ ಹುಡುಗನನ್ನು ಮಾತ್ರ ನಂಬಿ ಬಂದಿರುತ್ತಾಳೆ. ಇನ್ನೂ ಈ ಕಾರಣದಿಂದ ಅವಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಇಟ್ಟು ಇರುತ್ತಾಳೆ. ಇನ್ನೂ ಆ ನಿರೀಕ್ಷೆ ಗಂಡನನ್ನು ಇನ್ನಷ್ಟು ಕಷ್ಟಕ್ಕೆ ಸಿಲುಕಿಸುವಂತದ್ದು ಖಂಡಿತಾ ಆಗಿರುವುದಿಲ್ಲ.   

ಇನ್ನೂ ಅವಳು ಅವನಿಗಾಗಿ ಸಾಕಷ್ಟು ಆಸೆ ಕನಸುಗಳನ್ನು ತೊರೆಯಲು ಕೊಡ ಸುದ್ದ ಇರುತ್ತಾಳೆ.ಹೆಂಡತಿಗೆ ಕುಟುಂಬದ ಆರ್ಥಿಕ ಸ್ಥಿತಿಯ ಬಗ್ಗೆ ನೆಮ್ಮದಿ ಮತ್ತು ಭದ್ರತೆಯ ಭಾವನೆ ಬೇಕು. ಗಂಡನು ತನ್ನ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಾನೆಂಬ ವಿಶ್ವಾಸ ನೀಡಬೇಕು.ಒಬ್ಬರಿಗೊಬ್ಬರು ಪರಸ್ಪರ ಗೌರವ ನೀಡಬೇಕು ಮತ್ತು ತೀರ್ಮಾನಗಳನ್ನು ಸಹಕಾರದಿಂದ ತೆಗೆದುಕೊಳ್ಳಬೇಕು.ಮನೆಯ ಕೆಲಸ ಮತ್ತು ಕುಟುಂಬದ ಹೊಣೆಗಳನ್ನು ಹಂಚಿಕೊಳ್ಳಬೇಕು.ಈ ಎಲ್ಲ ಆಸೆಗಳು ಪೂರ್ತಿಯಾದಾಗ, ಹೆಂಡತಿ ಸಂತೋಷವಾಗಿರಲು ಮತ್ತು ಸಂಭಂದವು ಸುಧಾರಿಸಲು ಸಹಾಯವಾಗುತ್ತದೆ. ಗಂಡ ಹಾಗೂ ಹೆಂಡತಿ ಅವರವರ ಇಷ್ಟವನ್ನು ಅರಿತು ಬಾಳುವುದರಿಂದ ಒಂದು ಸುಖ ಸಂಸಾರ ಕಟ್ಟಬಹುದು ಎಂದು ಹೇಳಲಾಗುವುದು.  

( video credit : Mast Guru 377K )