ಮಹಿಳೆಯರು ಯಾವ ಯಾವ ಕಾರಣಕ್ಕೆ ತಮ್ಮ ಗಂಡನಿಗೆ ಮೋಸ ಮಾಡ್ತಾರೆ ಗೊತ್ತಾ..? ಶಾಕ್ ಆಗ್ತೀರಾ

ಮಹಿಳೆಯರು ಯಾವ ಯಾವ ಕಾರಣಕ್ಕೆ ತಮ್ಮ ಗಂಡನಿಗೆ ಮೋಸ ಮಾಡ್ತಾರೆ ಗೊತ್ತಾ..? ಶಾಕ್ ಆಗ್ತೀರಾ

ಹೌದ ಇತ್ತೀಚಿಗೆ ಒಳ್ಳೆಯ ಕುಟುಂಬಗಳನ್ನು, ಒಳ್ಳೆಯ ದಂಪತಿಗಳನ್ನು, ಕಷ್ಟವನ್ನು ಅನುಸರಿಸಿಕೊಂಡು ಸುಖ ದುಃಖದಲ್ಲಿ ಭಾಗಿಯಾಗುವ ದಂಪತಿಗಳನ್ನು ಹೆಚ್ಚು ಜನರಲ್ಲಿ ಕಾಣುತ್ತಿಲ್ಲ... ಅದಕ್ಕೆ ಕಾರಣ ತುಂಬಾನೇ ಇವೆ. ಒಂದು ಬಾರಿ ಒಂದು ಹೆಣ್ಣಿನ ಕೊರಳಿಗೆ ತಾಳಿ ಬಿತ್ತು ಅಂತ ಆದ್ರೆ, ಆಕೆಗೆ ತಾಳಿ ಕಟ್ಟಿದ ಗಂಡ ಹೇಗೆ ಇರಲಿ ಆತನ ಜೊತೆ ಸಂಸಾರ ಮಾಡಲು ಮುಂದಾಗುತ್ತಾಳೆ. ಒಳ್ಳೆಯ ಜೀವನ ನಡೆಸಲು ನಿರ್ಧಾರ ಮಾಡುತ್ತಾರೆ. ಒಂದು ಬಾರಿ ತಾಳಿ ಕೊರಳಿಗೆ ಬಿತ್ತು ಅಂದ್ರೆ ಮುಗೀತು ಅಂದುಕೊಳ್ಳಿ. ಆತ ಹೇಗಿದ್ದರೂ ಕೆಲವು ಹೆಣ್ಣು ಮಕ್ಕಳು ಆತನನ್ನು ಒಪ್ಪಿಕೊಳ್ಳುತ್ತಾರೆ..ಆದ್ರೆ ಆಕೆಯ ಸಹನೆ ಕಟ್ಟಿ ಒಡೆಯಿತು ಅಂದ್ರೆ ಎನೆಲ್ಲಾ ಅನಾಹುತ ನಡೆಯುತ್ತವೆ ಗೊತ್ತಾ..?

ಇದರ ನಡುವೆ ಸಂಶೋಧನೆಯಲ್ಲಿ ತಿಳಿದು ಬಂದ ಪ್ರಕಾರ ಹೆಚ್ಚಾಗಿ ಪುರುಷರು ಅವರವರ ಹೆಂಡತಿಗೆ ಮೋಸ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಆದರೆ ಅವರಿಗಿಂತಲೂ ಕೂಡ ಕೆಲವು ಹೆಂಗಸರು ಅವರವರ ಗಂಡಂದಿರಿಗೆ ಮೋಸ ಮಾಡುವ ಹೆಂಗಸರು ಕೂಡ ಹೆಚ್ಚಾಗಿಯೇ ಇದ್ದಾರೆ ಎಂದು ತಿಳಿದು ಬಂದಿದೆ..ಪತ್ನಿ ತನ್ನ ಪತಿಗೆ ಯಾವೆಲ್ಲ ಕಾರಣಕ್ಕಾಗಿ ಮೋಸ ಮಾಡಲು ಮುಂದಾಗುತ್ತಾಳೆ ಎಂದು ನೋಡೋಣ. ಹೌದು ಆ  ಕಾರಣಗಳು ಹೀಗಿವೆ. ನಿಜಕ್ಕೂ ಎಲ್ಲರಿಗೂ ಈ ಮಾಹಿತಿ ಉಪಯೋಗಕ್ಕೆ ಬರುತ್ತದೆ. ಮುಂದೆ ಓದಿ...

ಹೌದು ಮೊದಲಿಗೆ ಗಂಡನ ಅನುಮಾನ, ಗಂಡನ ಅನುಮಾನದಿಂದ ಹೆಣ್ಣು ದಾರಿ ತಪ್ಪುವ ಚಾನ್ಸಸ್ ಜಾಸ್ತಿ ಇರುತ್ತದೆ..ಹೆಜ್ಜೆ ಹೆಜ್ಜೆಗೂ ಹೆಂಡತಿಯ ಮೇಲೆ ಸಂಶಯ ಪಡುವ ಪುರುಷರು ಅವರ ಹೆಂಡತಿಯ ಕೆಟ್ಟ ದಾರಿಗೆ ಹಾಗೂ ಕೆಟ್ಟ ನಿರ್ಧಾರಗಳಿಗೆ ಸ್ವತಃ ಅವರೇ ಎಡೆ ಮಾಡಿಕೊಟ್ಟಂತಾಗುತ್ತದೆ. ಇದು ಕೂಡ ಹೆಣ್ಣು ದಾರಿ ತಪ್ಪುವುದಕ್ಕೆ ಕಾರಣವಾಗಿದೆ..ಎರಡನೆಯದು ಸುಖವಾದ ಸಂಸಾರ ನಡೆಸಬೇಕು ಅಂದರೆ ಪ್ರೀತಿ  ತುಂಬಾನೇ ಮುಖ್ಯ.. ಸಂಸಾರದಲ್ಲಿ, ಸುಖ ದಾಂಪತ್ಯ ಜೀವನದಲ್ಲಿ ಪ್ರೀತಿ ಇರದಿದ್ದರೆ ಆಗಲು ಕೂಡ ಹೆಣ್ಣು ಬೇರೊಬ್ಬನ ಪ್ರೀತಿ ಬಯಸುತ್ತಾಳೆ. ಹೆಚ್ಚು ತಪ್ಪು ದಾರಿ ಹಿಡಿಯುತ್ತಾಳೆ, ಗಂಡನಿಗೆ ಮೋಸ ಮಾಡುವ ಸಾಧ್ಯತೆ ಇರುತ್ತದಂತೆ.

ಮೂರನೆಯದು ಆರ್ಥಿಕ ಸಮಸ್ಯೆ, ಹೌದು ಈ ಆರ್ಥಿಕ ಸಮಸ್ಯೆ ಕುಟುಂಬದ ಸಂಸಾರದಲ್ಲಿ ಹೆಚ್ಚಾಗುತ್ತಿದ್ದಂತೆ ಕಷ್ಟಗಳು ಎದುರಾದಾಗ, ಇದ್ದಕ್ಕಿದ್ದಂತೆ ತನ್ನ ಗಂಡನನ್ನು ಕೆಲ ಹೆಂಗಸರು ಆತನ ಕಷ್ಟ ಅರ್ಥ ಮಾಡಿಕೊಳ್ಳದೆ ಇವನ ಕೈಯಲ್ಲಿ ಏನು ಆಗುವುದಿಲ್ಲ ಎನ್ನುವ ಅತಿ ಕೆಟ್ಟ ಮನಸ್ಥಿತಿಗೆ ಬಂದು ಬಿಡುತ್ತಾರೆ. ಆತನ ಕಷ್ಟಗಳನ್ನು ಅರ್ಥೈಸಿಕೊಳ್ಳುವುದಿಲ್ಲ. ಆಗ ದುಡ್ಡಿಗೆ ಬೆಲೆ ಕೊಟ್ಟು, ಆಕೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಿದ ತನ್ನ ಗಂಡನಿಗೆ ಆಕೆ ಮೋಸ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕೇಳಿ ಬಂದಿದೆ.   

ಮುಂದಿನ ಕಾರಣ ಗಂಡನ ನಿರ್ಲಕ್ಷ, ಸದಾ ಕೆಲಸದಲ್ಲಿ ಬಿಜಿ ಇದ್ದು ಆಕೆಗೆ ಸಮಯ ಕೊಡಲು ಆಗದೆ, ಪತಿ ಆದವನು ಆಕೆಯನ್ನು ಹೆಚ್ಚು ನಿರ್ಲಕ್ಷ್ಯ ಮಾಡಿದರೆ, ಆಕೆ ಬೇರೆ ಪುರುಷನ ಜೊತೆ ಯಾವ ಕೆಲಸಕ್ಕೂ ಅಂಜದೆ ತನ್ನ ಗಂಡನಿಗೆ ಮೋಸ ಮಾಡುವುದರಲ್ಲಿ ಯತ್ನ ಮಾಡಿ ಆ ಕೆಲಸಕ್ಕೂ ಸಹ ಮುಂದಾಗುತ್ತಾಳೆ ಎಂದು ಕೇಳಿ ಬಂದಿದೆ..ಮುಂದಿನ ಕಾರಣ ಪತಿಯಿಂದ ಸಿಗದ ತೃಪ್ತಿ. ಹೌದು, ಭೂಮಿಯ ಮೇಲೆ ಪ್ರತಿ ಜೀವಕ್ಕೂ ದೈಹಿಕವಾಗಿ ಪ್ರೀತಿ ಮುಖ್ಯ ಜೊತೆಗೆ ಸುಖದ ತೃಪ್ತಿ ಬೇಕಾಗಿರುತ್ತದೆ. ಆ ತೃಪ್ತಿ ಆಕೆಯ ಗಂಡನಿಂದ ಸಿಗದೇ ಇದ್ದಾಗ ಆಕೆ ತಪ್ಪು ದಾರಿ ತುಳಿಯುವ ಸಾಧ್ಯತೆ ಕೂಡ ಇರುತ್ತದಂತೆ.

ಕೆಲಸದ ನಿಮಿತ್ತ ಮನೆಯಿಂದ ಹೊರಗಿರುವ ಪುರುಷರು. ಹೆಚ್ಚು ಜವಾಬ್ದಾರಿ ಮೈ ಮೇಲೆ ಬಿದ್ದಾಗ ಆ ಸಮಯವನ್ನು ಕೆಲಸಕ್ಕಾಗಿ ಕೆಲವರು ಮೀಸಲಿಟ್ಟು ಬಿಡುತ್ತಾರೆ..ಮನೆಯಲ್ಲಿ ತನ್ನ ಹೆಂಡತಿ ಒಬ್ಬಳೇ ಇದ್ದಾಳೆ ಒಬ್ಬಂಟಿಯಾಗಿ ಜೀವನ ಕಳೆಯುತ್ತಿದ್ದಾಳೆ ಎನ್ನುವುದು ಅರಿಯದೆ ಕೆಲಸದ ಕಡೆ ಹೆಚ್ಚು ಒತ್ತು ಕೊಡುವ ಹಾಗೂ ಆ ಸಮಯವನ್ನು ಅಲ್ಲಿಯೆ ಹೆಚ್ಚು ಕಳೆಯುವ ಪುರುಷರಿಗೂ ಕೂಡ ಕೆಲ ಹೆಂಗಸರು ಮನೆಯಲ್ಲಿ ಒಬ್ಬಂಟಿಯಾಗಿ ಇದ್ದು ಬೋರಾಗಿ ಬೇರೊಬ್ಬನ ಸಂಘ ಸೇರುವುದು ಕೂಡ ಕೆಲವರಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿದೆ. 

ಪ್ರೀತಿಯನ್ನ ಗಂಡ ತನ್ನ ಹೆಂಡತಿಗೆ ನೀಡಲೇಬೇಕು.. ಮದುವೆಯಾದ ಆರಂಭದ ದಿನದಲ್ಲಿ ಹೇಗಿರುತ್ತಾನೋ ಹಾಗೆಯೇ ತನ್ನ ಹೆಂಡತಿಯನ್ನು ಖುಷಿ ಖುಷಿಯಾಗಿ ನೋಡಿಕೊಳ್ಳಬೇಕು.. ಆಕೆಯ ಜೊತೆ ಹೆಚ್ಚು ಸಮಯ ಕಳೆಯುಬೇಕು ಇಲ್ಲದೆ ಹೋದರೆ ಆತನಿಗೆ ಆಕೆ ಮೋಸ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಇದು ಕೂಡ ಒಂದು ಕಾರಣ ಎಂದು ಕೇಳಲಾಗಿದೆ. ಕೊನೆಯದಾಗಿ ಪತಿಯ ಮಧ್ಯಪಾನ..ಹೌದು ಅತಿವವಾದ ಮಧ್ಯಪಾನ ಮಾಡುವ ಗಂಡಂದಿರು ಇದ್ದಾರೆ. ಅಂತಹ ಗಂಡಂದಿರನ್ನ ಅವರವರ ಪತ್ನಿಯರು ಸೇರುವುದಿಲ್ಲ...ಆತನನ್ನು ಇಷ್ಟಪಡುವುದಿಲ್ಲ...ಈ ಕಾರಣ ಕೂಡ ಒಂದಾಗಿದ್ದು ಹೆಂಗಸರು ತಮ್ಮ ತಮ್ಮ ಗಂಡನಿಗೆ ಮೋಸ ಮಾಡುವ ಕಾರಣವಾಗಿದೆ..ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.. ಎಲ್ಲರೂ ಈ ಕಾರಣಗಳನ್ನು ತಲೆಯಲ್ಲಿ ಇಟ್ಟುಕೊಂಡು ಜೀವನ ನಡೆಸಿ, ಮಾಹಿತಿ ಶೇರ್ ಮಾಡಿ ಧನ್ಯವಾದಗಳು...