ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ! ಯಾಕೆ ಗೊತ್ತಾ?

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ! ಯಾಕೆ ಗೊತ್ತಾ?

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಹೆಚ್ಚಾಗಿ ಸದ್ದು ಮಾಡುತ್ತಲೇ ಇದೆ. ಇದರಿಂದ ಒಳ್ಳೆಯ ಹಾಗೂ ಕೆಟ್ಟ ರೀತಿಯ ಇನ್ಫ್ಲುಯೆನ್ಸ್ ಆಗುತ್ತಲೇ ಇದೆ. ಒಂದು ಒಳ್ಳೆಯ ವಿಚಾರ ಹೇಗೆ ಅತಿ ಕಡಿಮೆ ಸಮಯದಲ್ಲಿ ಎಲ್ಲೆಡೆ ವೈರಲ್ ಆಗುತ್ತದೆ ಹಾಗೆಯೇ ಕೆಟ್ಟ ವಿಚಾರಗಳು ಕೊಡ ಅಷ್ಟೇ ಬೇಗ ಹರಡಲಿದೆ. ಇನ್ನೂ ಈ ವಿಚಾರವನ್ನು ಕೇಳಿದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದ್ರೆ ಅದು ಸೋನು ಶ್ರೀನಿವಾಸ್ ಗೌಡ. ಇವರು ಕೆಲವೊಂದು ಮಾಡಿಕೊಂಡ ಎಡವಟ್ಟುಗಳು ಸಾಕಷ್ಟು ವರ್ಷಗಳಿಂದ ಟ್ರೊಲ್ ಆಗುತ್ತಲೇ ಬರುತ್ತಿದ್ದಾರೆ. ಅಂದು ಶುರುವಾದ ಇವ್ರ ಟ್ರೊಲ್ ಸಮಸ್ಯೆ ಇಂದಿನ ವರೆಗೂ ನಿಂತಿಲ್ಲ ಎಂದ್ರೆ ತಪ್ಪಾಗಲಾರದು.

ಇನ್ನೂ ಇವರ ಪ್ರತಿಯೊಂದು ವಿಚಾರಕ್ಕೂ ಕೊಡ ಟ್ರೊಲ್ ಅವರು ಟ್ರೊಲ್ ಮಾಡುತ್ತಲೇ ಇರುತ್ತಾರೆ. ಎಲ್ಲದಕ್ಕಿಂತ ಹೆಚ್ಚಿನ ಟ್ರೊಲ್ ಆಗಿದ್ದು ಎಂದರೆ ಮಾಲ್ಡೀವ್ಸ್ ಸಮಯದಲ್ಲಿ ಇವ್ರ ಉಡುಪಿನ ಸಲುವಾಗಿ ಹೆಚ್ಚಿನ ಟ್ರೊಲ್ ಆಗಿತ್ತು ಅದರಿಂದ ಸಾಕಷ್ಟು ನೆಗಟಿವ್ ಕಾಮೆಂಟ್ ಹಾಗೂ ವಿರೋದ ಹುಟ್ಟಿಕೊಂಡಿತ್ತು. ಆ ನಂತರ ಇವರು ಸಂಪಿಗೆ ಎಂಬ ಹುಡುಗಿಯನ್ನು ದತ್ತು ತೆಗೆದುಕೊಂಡಿದ್ದು ಆ ಬಡ ಹುಡುಗಿಯ ಸಂಪೂರ್ಣ ಜವಬ್ದಾರಿ  ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಹಾಗೆಯೇ ಅವರು ಹೇಳಿದಂತೆ ಸೇವಂತಿ ಅವರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿರುವ ಅಪ್ಡೇಟ್ ನೀಡುತ್ತಾ ಬರುತ್ತಿದ್ದರು.

ಇನ್ನೂ ಈ ವಿಚಾರ ಕಳೆದ ಬಳಿಕ ಟ್ರೋಲರ್ಸ್   ಇವ್ರ ಒಳ್ಳೆಯ ಹಾದಿಯನ್ನು ಹಿಡಿದಿರುವುದನ್ನು ನೋಡಿ ಟ್ರೊಲ್ ಮಾಡುವುದನ್ನು ಕೊಡ ಕಡಿಮೆ ಮಾಡಿದ್ದರು. ಇನ್ನೂ ಸೋನು ಅವರು ಕೊಡ ಈ ವಿಚಾರವಾಗಿ ಯಾರು ಕೊಡ ಕೆಟ್ಟ ಕಾಮೆಂಟ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಎಲ್ಲವೂ ಕೊಡ ಸುಗಮವಾಗಿ ಸಾಗುತ್ತಿದ್ದ ಸಮಯದಲ್ಲಿ ಈ ವಿಷಯದಿಂದ ಸೋನು ಗೌಡ ಅರೆಸ್ಟ್ ಆಗಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ವಿಚಾರವಾಗಿ ಸೋನು ಗೌಡ ವಿರುದ್ಧ ದೂರ ದಾಖಲಾಗಿದೆ. ಏಕೆಂದರೆ ದತ್ತು ತೆಗೆದುಕೊಂಡ  ನಂತರ ಅವರ ಹಿನ್ನಲೆಯನ್ನು ಬಹಿರಂಗವಾಗಿ ತಿಳಿಸುವಂತಿಲ್ಲ. ಆದರೆ ಸೋನು ಅವರು ಸೇವಂತಿಯ ಬಗ್ಗೆ ಹಾಗೂ ಉತ್ತರ ಕರ್ನಾಟಕದಲ್ಲಿ ಇರುವ ಕುಟುಂಬದ ಬಗ್ಗೆ ತಿಳಿಸಿದ್ದಾರೆ. ಆ ಕಾರಣದಿಂದ ಈಗ ಪೊಲೀಸ್ ಅತಿಥಿಯಾಗಿದ್ದಾರೆ.