ಸುಂದರ ಹೆಂಡತಿ ಇದ್ದರೂ ಗಂಡಸರು ಬೇರೆಯವರ ಹೆಂಡ್ತಿರನ್ನ ಯಾಕೆ ನೋಡ್ತಾರೆ..? ಇಲ್ಲಿದೆ ಕಾರಣ

ಸುಂದರ ಹೆಂಡತಿ ಇದ್ದರೂ ಗಂಡಸರು ಬೇರೆಯವರ ಹೆಂಡ್ತಿರನ್ನ ಯಾಕೆ ನೋಡ್ತಾರೆ..? ಇಲ್ಲಿದೆ ಕಾರಣ

ಈ ಜೀವನ ಅಂದ್ರೆ ಹಾಗೇನೆ, ಈ ಜೀವನದಲ್ಲಿ ಪ್ರತಿಯೊಂದು ಹಂತಗಳು ಪ್ರತಿಯೊಂದು ಸಮಯಕ್ಕೆ ತಕ್ಕಂತೆ ಆಗಬೇಕು, ಜೀವನದಲ್ಲಿ ಹಂತ ಹಂತವಾಗಿ ಯಾವ ಸಮಯಕ್ಕೆ ಏನು ಆಗಬೇಕು ಅದು ಆಗದೆ ಇದ್ದಲ್ಲಿ, ಜೀವನ ಮನುಷ್ಯರಿಗೆ ಕಠಿಣ ಆಗುತ್ತದೆ. ಈ ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಎನ್ನುತ್ತಾರೆ. ಗಂಡು ಹೆಣ್ಣು ಬೆಸೆದಾಗ ಮಾತ್ರ ಇನ್ನೊಂದು ಜೀವಕ್ಕೆ ಜೀವ ಕೊಡಲು ಸಾಧ್ಯ, ಗಂಡಿನಿಂದ ಹೆಣ್ಣು ಆಕರ್ಷಿತಳಾಗುವುದು, ಅಥವಾ ಹೆಣ್ಣಿನಿಂದ ಗಂಡು ಆಕರ್ಷಿತನಾಗುವುದು ಅದು ನೈಸರ್ಗಿಕವಾದದ್ದು ಎಂದು ಹೇಳಲಾಗುತ್ತದೆ. ಪ್ರತಿ ಗಂಡಿಗೂ ಮತ್ತು ಪ್ರತಿ ಹೆಣ್ಣಿಗೂ ಅವರದ್ದೇ ಆದರೆ ಆಸೆ ಆಕಾಂಕ್ಷಿಗಳು ಖಾಸಗಿ ವಿಚಾರಗಳಲ್ಲಿ ಇರುತ್ತವೆ. ಕೆಲವರು ಮದುವೆಯಾದ ಬಳಿಕ ಗಂಡನೇ ದೇವರು ಎಂದು ಆತನ ಜೊತೆ ಕಷ್ಟವೋ ಸುಖವು ಎಲ್ಲದರಲ್ಲಿಯೂ ಸಹಿಸಿಕೊಂಡು ಜೀವನ ಸಾಗಿಸುತ್ತಾರೆ. ಇನ್ನು ಕೆಲ ಗಂಡಸರು ಇದ್ದಾರೆ, ಜೀವನದಲ್ಲಿ ಮದುವೆಗೂ ಮುನ್ನ ಪ್ರೀತಿ ಪ್ರೇಮ ಎಂದು ತುಂಬಾನೇ ತಲೆಕೆಡಿಸಿಕೊಂಡಿದ್ದರೂ ಮದುವೆಯಾದ ಬಳಿಕ ಅವಳೇ ನನ್ನ ಮುದ್ದಿನ ಹೆಂಡತಿ ಎಂದು ಸಾಯುವವರೆಗೂ ಆಕೆಗೆ ಪ್ರೀತಿ ನೀಡಿ ಜೀವನವ ನಡೆಸುತ್ತಾರೆ.

ಆದರೆ ಹಿರಿಯರು ಇಂದಿನಿಂದ ಹೇಳುತ್ತಾ ಬಂದಿರುವ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂಬುದು ಇತ್ತೀಚಿನ ದಿನಗಳಲ್ಲಿ ತುಂಬಾ ನಂಬಲಾಗದ ಒಂದು ಕಟು ಸತ್ಯ ಆಗಿದೆ. ಕಾರಣ ಮದುವೆ ಆದವರು ಕೇವಲ ವರ್ಷಗಟ್ಟಲೆ ಎರಡು ವರ್ಷಗಟ್ಟಲೆ ಇರುತ್ತಾರೆ. ನಂತರ ಜಗಳ ಗಲಾಟೆ ಮಾಡಿಕೊಂಡು ಬೇರೆ ಬೇರೆ ಆಗುತ್ತಾರೆ. ಎಲ್ಲರೂ ಕೂಡ ಎಂದು ಹೇಳಲು ಅಸಾಧ್ಯ. ಕೇವಲ ಮದುವೆಯ ಮೇಲೆ ನಂಬಿಕೆ ಇಲ್ಲದವರು ಬೇರೆ ಬೇರೆ ರೀತಿಯ ಆಸೆಗಳನ್ನು ಆಕಾಂಕ್ಷೆಗಳನ್ನು ಇನ್ನೊಬ್ಬರಿಂದ ಪಡೆಯುವ ಹಂಬಲ ಇದ್ದವರೂ ಮಾತ್ರ ಈ ರೀತಿ ಕೆಲಸ ಮಾಡಿ ತಪ್ಪು ದಾರಿ ಹಿಡಿಯುತ್ತಾರೆ.  

ಕ್ಷಣಿಕ ಸುಖಕ್ಕಾಗಿ ಜೀವನವನ್ನ ತಮ್ಮ ಕೈಯಾರೆ ಪೂರ್ತಿ ಹಾಳು ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. ಹೌದು ಈ ಮನುಷ್ಯನ ಜೀವನವ ಧರ್ಮಾರ್ಥ, ಕಾಮ ಮೊಕ್ಷ ಪುರುಷಾರ್ಥಗಳಲ್ಲಿ ಅರ್ಥೈಸಲಾಗುತ್ತದೆ. ಗಂಡು ಹೆಣ್ಣು ವಿವಾಹ ಆಗುವ ಸಂದರ್ಭದಲ್ಲಿ ಹಿರಿಯರ ಸಮ್ಮುಖದಲ್ಲಿ, ಬಂಧು ಬಳಗದ ಸಮ್ಮುಖದಲ್ಲಿ, ನಾನು ಪ್ರಾಮಾಣಿಕತೆಯಿಂದ ನನ್ನ ಗಂಡನ ಮತ್ತು ನನ್ನ ಹೆಂಡತಿಯ ಜೊತೆ ಹೀಗೇ ಕೊನೆಯವರೆಗೂ ಇರುತ್ತೇನೆ ಎಂದು ಅಗ್ನಿಸಾಕ್ಷಿಯಾಗಿ ಮದುವೆ ಮಾಡಿಕೊಂಡು ಪ್ರಮಾಣ ಮಾಡಿರುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಇದು ಕಾಣುತ್ತಿಲ್ಲ, ಕಾರಣ ಮದುವೆಯಾದ ಗಂಡಸು ಬೇರೆಯವರ ಹೆಂಡತಿಯನ್ನು ನೋಡಿ ಆಕರ್ಷಣಕ್ಕೆ ಒಳಗಾಗುತ್ತಿದ್ದಾನೆ. ಇದಕ್ಕೆ ಕಾರಣ ತಿಳಿದು ಬಂದಿದ್ದು ಮನುಷ್ಯನ ಸ್ವಾಭಾವಿಕ ವೀಕ್ನೆಸ್ ಏನೆಂದರೆ ಕೆಲವರಲ್ಲಿ ಒಂದೇ ಒಂದು ವಸ್ತು ಮೇಲೆ ಜಾಸ್ತಿ ದಿನ ಪ್ರೀತಿ ಇರುವುದಿಲ್ಲ, ಅದು ಆತನಿಗೆ ಬೋರಾಗಿಬಿಡುತ್ತದಂತೆ. ಅದೇ ರೀತಿ ತನ್ನ ಹೆಂಡತಿಯು ಕೂಡ ಆತನಿಗೆ ತನ್ನೆಲ್ಲ ಸರ್ವಸ್ವ ನೀಡಿದರೂ ಕೂಡ ಬೋರ್ ಆಗುತ್ತಾಳೆ. ಇದು ಕೆಲವರಲ್ಲಿ ಮಾತ್ರ ಎಂದು ಹೇಳಬಹುದು.

ಹಾಗಾಗಿಯೇ ಇನ್ನೊಬ್ಬರ ಹೆಂಡತಿಯನ್ನು ಗಂಡಸು ನೋಡುತ್ತಾನೆ ಎಂದು ಹೇಳಲಾಗಿದೆ. ಜೊತೆಗೆ ಕೇವಲ ಗಂಡಸರು ಮಾತ್ರ ಅಲ್ಲದೆ ಹೆಂಗಸರು ಕೂಡ ಇಂತಹದ್ದೇ ವೀಕ್ನೆಸ್ ಕೆಲವರು ಹೊಂದಿರುತ್ತಾರೆ. ಗಂಡನಿಗೆ ಮೋಸ ಮಾಡಿ ಬೇರೆ ಗಂಡಸರ ಸಹವಾಸ ಬೆಳೆಸುತ್ತಾರೆ. ಇದು ಕೆಲವರಲ್ಲಿ ಮಾತ್ರ ವೀಕ್ನೆಸ್ ಆದರೆ, ಇನ್ನೂ ಕೆಲವರಲ್ಲಿ ಚಟವಾಗಿ ಮಾರ್ಪಾಡು ಆಗಿರುತ್ತದೆ ಎಂದು ನಾವು ಹೇಳಬಹುದು. ಕ್ಷಣಿಕ ಸುಖಕ್ಕಾಗಿ ಮದುವೆ ಎನ್ನುವ ಬಂಧನದಿಂದ ಅವರು ಮಾಡಿದ ಪ್ರತಿಜ್ಞೆಯಿಂದ ಹೊರ ಹೀಗೆ ಹೊರ ಬರುತ್ತಾರೆ. ಕೆಟ್ಟ ಕೆಲಸ ಮಾಡಿ ಜೀವನಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇಂಥಾ ತಪ್ಪು ಕೆಲ್ಸವನ್ನ ನಿಜಕ್ಕೂ ಮಾಡಬೇಡಿ. ನಿಮ್ಮ ನಂಬಿದವರಿಗೆ ಕೆಟ್ಟದ್ದು ಮಾಡಿದರೆ ಬಡ್ಡಿ ಸಮೇತ ಆ ಕರ್ಮವನ್ನ ನೀವು ನಿಜ ಎದುರಿಸುತ್ತಿರಿ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದಗಳು...( video credit :news first live )