ವರ್ತೂರ್ ಸಂತೋಷ್ ಧರಿಸಿದ ಹುಲಿಯ ಉಗುರು ಭಾರತದಲ್ಲಿ ಏಕೆ ಬ್ಯಾನ್ ಆಗಿದೆ ಗೊತ್ತಾ? ಲಕ್ಷ ಕೊಟ್ಟರೆ ಸಿಗುತ್ತಿದ್ದ ಹುಲಿಯ ಉಗುರು ಈಗ ಕೋಟಿ ಇದ್ದರೂ ಖರೀದಿಸುವಂತಿಲ್ಲ!

ವರ್ತೂರ್  ಸಂತೋಷ್ ಧರಿಸಿದ ಹುಲಿಯ ಉಗುರು ಭಾರತದಲ್ಲಿ ಏಕೆ ಬ್ಯಾನ್ ಆಗಿದೆ ಗೊತ್ತಾ?  ಲಕ್ಷ ಕೊಟ್ಟರೆ ಸಿಗುತ್ತಿದ್ದ  ಹುಲಿಯ ಉಗುರು ಈಗ ಕೋಟಿ ಇದ್ದರೂ ಖರೀದಿಸುವಂತಿಲ್ಲ!

ಈಗ ಎಲ್ಲೆಡೆ ವೈರಲ್ ಆಗಿರುವ ವಿಚಾರ ಎಂದರೆ ಅದು "ವರ್ತೂರು ಸಂತೋಷ್" ಅವರ ಅರೆಸ್ಟ್. ಇನ್ನೂ ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ಬಂದಿದ್ದರು. ಕಡಿಮೆ ವೋಟ್ ಪಡೆದುಕೊಂಡು ಡೇಂಜರ್ ಜೋನ್ ಎನ್ನುವ ಗುರುತಿನಿಂದಾ ಮನೆಗೆ ಬಂದಿದ್ದ ವರ್ತೂರು ಸಂತೋಷ್ ಅವರು ಕೇವಲ ಎರಡು ವಾರದಲ್ಲಿ ಮನೆಯವರ ಹಾಗೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಇನ್ನೂ ಮೂರನೇ ವಾರಕ್ಕೆ ಕಾಲಿಟ್ಟ ವರ್ತೂರು ಸಂತೋಷ್ ಅವರಿಗೆ ಒಂದು ಆಘಾತವೇ ಕಾದಿತ್ತು. ಅದೇನೆಂದರೆ ಬಿಗ್ ಬಾಸ್ ಓಪನಿಂಗ್ ವೇಳೆಯಲ್ಲಿ ಹಾಗೂ ನೆನ್ನೆ ನಡೆದ ಸುದೀಪ್ ಅವರ ವೀಕೆಂಡ್ ಎಪಿಸೋಡ್ ನಲ್ಲಿ ಕೂಡ ವರ್ತೂರು ಅವರು ಹುಲಿ ಉಗುರನ್ನು ಧರಿಸಿರಿವುದು ಕಣ್ಣಿಗೆ ಬಿದ್ದಿದೆ. ಈ ಕಾರಣದಿಂದ ಈಗ ಅರಣ್ಯ ಅಧಿಕಾರಿಗಳ ಬಂಧನದಲ್ಲಿ ಇದ್ದಾರೆ. 

ಇನ್ನೂ ವರ್ತೂರು ಸಂತೋಷ್ ಅವರು ಅಲ್ಲದೆ ಯಾವ ಪ್ರಭಲ ವ್ಯಕ್ತಿ ಕೂಡ ಈ ರೀತಿ ಹುಲಿಯ ಉಗುರನ್ನು ಧರಿಸುವುದು ತಪ್ಪು. ಇದು ಕಾನೂನು ಬಾಹಿರ ಎಂದು ನಿಮಗೆಲ್ಲರಿಗೂ ಈಗಾಗಲೇ ತಿಳಿದೇ ಇದೇ. ಇನ್ನು ಇದಕ್ಕೆ ಸೂಕ್ತ ಕಾರಣಗಳೇನು ಎಂದು ನಾವು ನಮ್ಮ ಲೇಖನದಲ್ಲಿ ತಿಳಿಸಿಕೊಡುತ್ತದೆ ನೀವೇ ಓದಿ. ಇನ್ನೂ ಮೊದಲೆಲ್ಲಾ ಬೇಟೆಯಾಡಿದವರು ಹಾಗೂ ಉಡುಗೊರೆ ಪಡೆದುಕೊಂಡವರು ಈ ರೀತಿ ಧರಿಸಭಹುದಿತ್ತು. ಇನ್ನೂ ಈ ರೀತಿ ಹುಲಿಯ ಉಗುರನ್ನು ಧರಿಸುವುದರಿಂದ ಅವರಿಗೆ ಐಶ್ವರ್ಯ, ಮನಶ್ಯಾಂತಿ ಹಾಗೂ ನೆಮ್ಮದಿಯ ಜೀವನ ಲಭ್ಯವಾಗುತ್ತದೆ. ಇನ್ನೂ ಈ ರೀತಿ ಹುಲಿಯ ಉಗುರನ್ನು ಧರಿಸುವುದರಿಂದ ಅವರಿಗೆ ಯಾವ ಆರೋಗ್ಯ ಸಮಸ್ಯೆ ಹಾಗೂ ದೃಷ್ಟಿ ದೋಷವು ಕೂಡ ಕಾಡುವುದಿಲ್ಲ. ಈ ನಂಬಿಕೆಯಿಂದ ಜನರು ಹುಲಿಯ ಉಗುರನ್ನು ಕೊಂಡು ಈ ಹಿಂದೆ ಧರಿಸುತ್ತಿದ್ದರು. ಆದರೆ ಈಗ ಅದು ಕಾನೂನು ಬಾಹಿರ.


 ಈಗ ಎಲ್ಲಾ ವನ್ಯ ಜೀವಿಗಳ ಸಂಖ್ಯೆ ಕುಗ್ಗಿರುವ ಕಾರಣದಿಂದ ಈಗ ಈ ರೀತಿ ಮಾಡುವುದು ಕಾನೂನು ಭಾಹಿರ ಎಂದು ಘೋಷಣೆ ಮಾಡಲಾಗಿದೆ. ಇನ್ನೂ ಪ್ರೊಟೆಕ್ಷನ್ ಅಕ್ಟ್ 1992ರ ಪ್ರಕಾರ ಯಾರೊಬ್ಬರೂ ಪ್ರಾಣಿಗಳನ್ನು ಬೇಟೆ ಆಡಿದರೆ ಅಥವಾ ಪ್ರಾಣಿಗಳಿಗೆ ಸಂಬಂಧಿತ ವಸ್ತುಗಳು ಅಂದರೆ ಕೊದಲು, ಉಗುರು,ಹಲ್ಲು, ಬಾಲ ಚರ್ಮ ಹೀಗೆ ಇನ್ನಿತರ ವಸ್ತುಗಳನ್ನು ಇಟ್ಟುಕೊಂಡರೆ ಅವರಿಗೆ ಸೆರೆ ವಾಸ ಅನುಭವಿಸಬೇಕಾಗುತ್ತದೆ. ಇನ್ನೂ ಈಗಿನ ಸದ್ಯದ ಜಾಗತಿಕ ಮಟ್ಟದಲ್ಲಿ ಯಾವ ಪ್ರಾಣಿಯನ್ನು ಕೊಡ ಹಿಂಸೆ ಮಾಡುವಂತಿಲ್ಲ. ಇನ್ನೂ ಹುಲಿ ಉಗುರನ್ನು ಈ ಹಿಂದೆ ಕೇವಲ ಒಂದು ಉಗುರಿಗೆ ಒಂದು ಲಕ್ಷದ ವರೆಗೂ ಇತ್ತು. ಆದರೆ ಈಗ ಕೋಟಿ ಕೊಟ್ಟರು ಯಾರೊಬ್ಬರೂ ಕೊಡ ಖರೀದಿ ಮಾಡುವಂತಿಲ್ಲ.