ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾದ ಖುಷ್ಬು ಮತ್ತು ಪ್ರಭು ಕೇವಲ 4 ತಿಂಗಳಿಗೆ ದೂರದದ್ದು ಯಾಕೆ??
ತೆಲುಗು ಸಿನಿಮಾ ಒಂದರ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿ ಆನಂತರ ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾ ರಂಗದಲ್ಲಿ ತಮ್ಮ ಅತ್ಯದ್ಭುತ ಅಭಿನಯದ ಪರಿಚಯವನ್ನು ಮಾಡಿ ಬರೋಬ್ಬರಿ 2೦೦ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದಂತಹ ಖುಷ್ಬು ಅವರು ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.\
ಇಂತಹ ನಟಿ ಆಗಿನ ಕಾಲದಲ್ಲಿ ನಟ ಪ್ರಭು ಗಣೇಶನ್ ಅವರೊಂದಿಗೆ ನಾಲ್ಕು ವರ್ಷಗಳ ಕಾಲ ರಿಲೇಶನ್ ಶಿಪ್ನಲ್ಲಿ ಇದ್ದು, ಆನಂತರ ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಆದರೆ ಇವರಿಬ್ಬರ ನಡುವೆ ಹೊಂದಾಣಿಕೆ ಸರಿ ಬರೆದ ಕಾರಣ ಮದುವೆಯಾದ ನಾಲಕ್ಕೆ ತಿಂಗಳಿಗೆ ಇಬ್ಬರು ದೂರಾದರು ಎಂಬ ಸುದ್ದಿ ಈಗಲೂ ಕೂಡ ಹೋಗೆ ಆಡುತ್ತಲೇ ಇರುತ್ತದೆ.
ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿರುವ ಕಾಕಿನಾಡ ಶಾಮಲಾ ಅವರು ಖುಷ್ಬು ಹಾಗು ಪ್ರಭು and Prabhu ಅವರ ಬ್ರೇಕ್.ಅಪ್ ವಿಚಾರದ ಕುರಿತು ಯಾರಿಗೂ ತಿಳಿಯದ ಸತ್ಯ ಸಂಗತಿ ಒಂದನ್ನು ತೆರೆದಿಟ್ಟಿದ್ದಾರೆ. ಹೌದು ಗೆಳೆಯರೇ ಇತ್ತೀಚಿಗಷ್ಟೇ ನಟಿ ಖುಷ್ಬು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಮೊದಲ ಸಿನಿಮಾ ಮೂವತ್ತೆರಡು ವರ್ಷ ಪೂರೈಸಿದರ ಕುರಿತು ಸಂತಸ ವ್ಯಕ್ತಪಡಿಸಿದರು.
ಹೌದು ಪಿ ವಾಸು ಅವರ ನಿರ್ದೇಶನದಲ್ಲಿ ಮೂಡಿಬಂದಂತಹ ‘ಚಿನ್ನತಂಬಿ'(chinnathambi) ಎಂಬ ಸಿನಿಮಾದಲ್ಲಿ ಖುಷ್ಬು ಅವರು ಪ್ರಪ್ರಥಮ ಬಾರಿಗೆ ನಾಯಕನಟಿಯಾಗಿ ಬಣ್ಣ ಹಚ್ಚಿದರು. ಅಲ್ಲದೆ ಇವರ ಇವರಿಗೆ ಜೋಡಿಯಾಗಿ ಪ್ರಭು ಅವರು ತೆರೆಯ ಮೇಲೆ ಅದ್ಭುತವಾಗಿ ಅಭಿನಯಿಸಿದರು.
ತದನಂತರ ಈ ಸಿನಿಮಾವನ್ನು ರವಿಚಂದ್ರನ್ ಅವರು ಮಾಲಾಶ್ರೀ ಅವರೊಂದಿಗೆ ರಾಮಾಚಾರಿ ಎಂದು ರಿಮೇಕ್ ಮಾಡಿ ಗೆದ್ದರು ಎಂದು ಖುಷ್ಬು ಅವರು ತಮ್ಮ ಸಿನಿ ಪಯಣದ ಕುರಿತು ವಿಶೇಷವಾಗಿ ಬರೆದುಕೊಂಡಿದ್ದರು. ಇದರ ಕುರಿತು ಇಂಗ್ಲಿಷ್ ಪತ್ರಿಕಾ ಸಂದರ್ಶನ ಒಂದರಲ್ಲಿ ಮಾತನಾಡಿರುವ ಕಾಕಿನಾಡ ಶಾಮಲಾ ಅವರು ” ಖುಷ್ಬು ಬಹಳ ಒಳ್ಳೆಯ ಹುಡುಗಿ, ಪ್ರಭುನನ್ನ ಬಹಳ ಗಾಡವಾಗಿ ಪ್ರೀತಿಸುತ್ತಿದ್ದಳು.
ಇಬ್ಬರು ಯಾವುದೇ ಕಾರಣಕ್ಕೂ ಒಬ್ಬರಿಂದ ಒಬ್ಬರು ಬಿಟ್ಟು ಕೊಡುತ್ತಿರಲಿಲ್ಲ. ಒಂದು ಮದುವೆಯಾಗಿದ್ದರು ಕೂಡ ಎರಡನೇ ಮದುವೆಯಾದಳು. ಆದರೆ ಇದು ಅವರ ತಂದೆ ಶಿವಾಜಿ ಗಣೇಶನ್ ಅವರಿಗೆ ಇಷ್ಟವಿಲ್ಲದ ಕಾರಣ ದೊಡ್ಡ ಸಂಘರ್ಷವೇ ಸೃಷ್ಟಿಯಾಯಿತು, ಹೀಗೆ ಮನೆಯವರ ಕಾರಣದಿಂದಾಗಿ ಇಬ್ಬರು ದೂರಾಗಿ ಬಿಟ್ಟರು” ಎಂದಿದ್ದಾರೆ.