ದರ್ಶನ್ ಹೆಸರಿನ ಜೊತೆ ತಳುಕು ಹಾಕಿಕೊಂಡಿರುವ ಈ ಪವಿತ್ರ ಗೌಡ ನಿಜಕ್ಕೂ ಯಾರು ಗೊತ್ತೇ..? ಇಲ್ನೋಡಿ
ಇದೀಗ ದರ್ಶನ್ ಅವರ ಜೊತೆಗಿನ ಕೆಲ ಫೋಟೋಗಳ ಹಂಚಿಕೊಂಡಿರುವ ಪವಿತ್ರ ಗೌಡ ಅವರು ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.. ಹತ್ತು ವರ್ಷಗಳ ರಿಲೇಶನ್ಶಿಪ್ ಎಂದು ಕ್ಯಾಪ್ಶನ್ ಕೊಟ್ಟು ಹ್ಯಾಷ್ ಟ್ಯಾಗ್ ಮೂಲಕ ನಟ ದರ್ಶನ್ ಅವರ ಹೆಸರಿನ ಜೊತೆಗೆ ನಟಿ ಪವಿತ್ರ ಗೌಡ ಕೆಲವೊಂದಿಷ್ಟು ಫೋಟೋಗಳನ್ನ ಮತ್ತೆ ತಮ್ಮದೇ ಇನ್ಸ್ಟಾಗ್ರಾಮ್ನಲ್ಲಿ, ವಿಡಿಯೋ ರೂಪದಲ್ಲಿ ಫೋಟೋಸ್ ಹಂಚಿಕೊಂಡಿದ್ದಾರೆ...ಈ ವಿಡಿಯೋ ನೋಡಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಕೆಂಡಾ ಮಂಡಲ ಆಗಿದ್ದು ಇಷ್ಟು ದಿವಸ ಕೇವಲ ಪರೋಕ್ಷವಾಗಿ ಉತ್ತರ ನೀಡುತ್ತಿದ್ದ ದರ್ಶನ್ ಪತ್ನಿ ಇದೀಗ ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ಹೌದು ವಿಜಯಲಕ್ಷ್ಮಿ ಅವರು ಇಲ್ಲಿಯವರೆಗೆ ಯಾವುದನ್ನು ಕೂಡ ಅವರ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರಲಿಲ್ಲ.. ಯಾರಿಗೂ ಪ್ರಶ್ನೆ ಮಾಡಿರಲಿಲ್ಲ. ಆದರೆ ನಟಿ ಪವಿತ್ರ ಗೌಡ ಅವರು ತಮ್ಮೊಟ್ಟಿಗೆ ಅತ್ತ ದರ್ಶನ್ ಅವರ ಕೆಲವು ಫೋಟೋಸ್ ಹಂಚಿಕೊಂಡು ಕ್ಯಾಪ್ಶನ್ ನೀಡಿದ ಪರಿಗೆ ವಿಜಯಲಕ್ಷ್ಮಿ ಅವರು ಕೋಪಗೊಂಡು ಆ ಪೋಸ್ಟ್ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಬೇರೊಬ್ಬರ ಪತಿಯ ಜೊತೆ ಇವರು ಹೇಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಏಕೆ ಈ ರೀತಿ ನಡೆದುಕೊಳ್ಳುತ್ತಾರೆ, ಇದನ್ನ ನಾನು ಇಲ್ಲಿಗೆ ಬಿಡುವುದಿಲ್ಲ.ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ಗುಡುಗಿದ್ದಾರೆ..
ದರ್ಶನ್ ಅವರ ಜೊತೆಗೆ ಹಾಗೂ ಅವರ ಹೆಸರಿನ ಜೊತೆ ಪದೇ ಪದೇ ತಳುಕು ಹಾಕಿಕೊಳ್ಳುವ ಈ ಪವಿತ್ರ ಗೌಡ ಅಸಲಿಗೆ ಯಾರು ಗೊತ್ತಾ ಮುಂದೆ ಓದಿ ..ನಟಿ ಪವಿತ್ರಾ ಗೌಡ ಅವರು ಒಬ್ಬ ಭಾರತೀಯ ಚಲನಚಿತ್ರ ನಟಿ ಹೌದು. ಫ್ಯಾಷನ್ ಡಿಸೈನರ್ ಆಗಿ ಅತ್ತ ಪ್ರಾಥಮಿಕವಾಗಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಇವರು ಸಕ್ರಿಯ ಕೂಡ ಆಗಿದ್ದಾರೆ...ಚತ್ರಿಗಳು ಸಾರ್ ಚತ್ರಿಗಳು, ಅಗಮ್ಯ, ಜೊತೆಗೆ ಸಾಗುವ ದಾರಿಯಲ್ಲಿ ಮುಂತಾದ ಕನ್ನಡ ಸಿನಿಮಾಗಳಲ್ಲಿ ಇವರು ಅಭಿನಯ ಮಾಡಿದ್ದಾರೆ. ಪವಿತ್ರಾ ಅವರು 2016 ರಲ್ಲಿ '54321' ಎಂಬ ಸಿನಿಮಾ ಮೂಲಕ ತಮಿಳು ಇಂಡಸ್ಟ್ರಿಗೂ ಎಂಟ್ರಿ ನೀಡಿದರು. ಇದೀಗ ನಟಿ ಪವಿತ್ರಾ ಗೌಡ ಫ್ಯಾಷನ್ ಡಿಸೈನರ್ ಆಗಿ ತಮ್ಮ ಕೆಲಸ ಮಾಡುತ್ತಿದ್ದು ಜೀವನ ಮಾಡುತ್ತಿದ್ದಾರೆ.
ಅವರ ಕಾರ್ಪೆಟ್ ಸ್ಟುಡಿಯೋ ಹೆಸರಿನ ಸ್ವಂತ ಸ್ಟುಡಿಯೋ ಸಹ ಇವರು ಹೊಂದಿದ್ದು ಅಲ್ಲಿಯೂ ಸಹ ಕಾರ್ಯ ನಿರ್ವಹಿಸುತ್ತಾ ಇದ್ದಾರೆ ಎನ್ನಲಾಗಿದೆ. ಜೊತೆಗೆ ಉದ್ಯಮದಲ್ಲಿ ಹೆಸರಾಂತ ಖ್ಯಾತ ಕೆಲವು ನಟಿಯರಿಗೆ ಸಾಂಪ್ರದಾಯಿಕ ಸೀರೆಗಳನ್ನ ಇವರೇ ತಯಾರಿಸುವಲ್ಲಿ ಸಹ ಪವಿತ್ರಾ ಗೌಡ ಪರಿಣತಿ ಹೊಂದಿದ್ದಾರೆ ಎಂದು ಕೇಳಿ ಬಂದಿದೆ. ನಟ ದರ್ಶನ್ ಅವರ ಮನೆಯಲ್ಲಿ ಅಂದು, ಪವಿತ್ರ ಅವರ ಮಗಳು ಖುಷಿ ಗೌಡ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿದ್ದು ಆ ವಿಡಿಯೋ ಸಹ ಹೆಚ್ಚು ವೈರಲ್ ಆಗಿತ್ತು. ಇದೀಗ ಮತ್ತೆ ಪವಿತ್ರ ಅವರು ದರ್ಶನ್ ಅವರ ಜೊತೆಗೆ ಫೋಟೋಸ್ ಶೇರ್ ಮಾಡಿಕೊಂಡು ಚರ್ಚೆಗೆ ಬಂದಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು.
( video credit :NewsFirst Kannada )