ರಾಕಿಭಾಯ್ ಗೆ ಆಕ್ಷನ್ ಕಟ್ ಮಾಡುತ್ತಿರುವ ಈ ನಿರ್ದೇಶಕಿ ಬಗ್ಗೆ ನಿಮಗೆ ಎಷ್ಟು ಗೊತ್ತು ?

ರಾಕಿಭಾಯ್ ಗೆ ಆಕ್ಷನ್ ಕಟ್ ಮಾಡುತ್ತಿರುವ ಈ ನಿರ್ದೇಶಕಿ ಬಗ್ಗೆ ನಿಮಗೆ ಎಷ್ಟು ಗೊತ್ತು ?

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಇವತ್ತು ಅನೌನ್ಸ್ ಆಗಿದೆ. ನಟ ಯಶ್ ಅವರು ಕೆಜಿಎಫ್ ಒಂದು, ಕೆಜಿಎಫ್ 2ರ ಬಳಿಕ ತುಂಬಾನೇ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲೂ ಕೂಡ ಸದ್ದು ಮಾಡಿದ ನಟ. ಹೆಚ್ಚು ಅಭಿಮಾನಿಗಳು ಸಹ ಇವರನ್ನ ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ. ಯಶ್ ಅವರ ಹಾವಳಿ ತುಂಬಾನೇ ಇದೀಗ ಜೋರಾಗಿದೆ ಎಂದು ಹೇಳಬಹುದು. ಯಶ್ ಅವರ ಕೆಜಿಎಫ್ ಭಾಗ 2 ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದಿದ್ದು, ಅದರ ಸಕ್ಸಸ್ ನಂತರ ಅವರ ಅಭಿಮಾನಿಗಳು ಮತ್ತು ಇಡೀ ಕನ್ನಡ ಚಿತ್ರರಂಗದವರು ಯಾವ ಮುಂದಿನ ಸಿನಿಮಾ ಯಶ್ ಅವರದ್ದು ಹೊರ ಬೀಳುತ್ತದೆ, ಯಾವಾಗ ಹೊರ ಬೀಳುತ್ತದೆ, ಅಸಲಿಗೆ ಆ ಸಿನಿಮಾ ಹೇಗಿರಲಿದೆ ಎಂದು ಯಶ್ ೧೯ ಚಿತ್ರದ ಬಗ್ಗೆ ಹೆಚ್ಚು ಪ್ರಶ್ನೆಗಳು ಕೇಳಿ ಬರುತ್ತಿದ್ದವು. 

ಅಸಲಿಗೆ ಯಶ್ ಅವರ ಮುಂದಿನ ಚಿತ್ರವನ್ನು ಯಾರು ನಿರ್ಮಾಣ ಮಾಡಲಿದ್ದಾರೆ, ಜೊತೆಗೆ ನಿರ್ದೇಶಕರು ಯಾರಾಗಲಿದ್ದಾರೆ ಎನ್ನುವ ಚರ್ಚೆ ಮತ್ತು ಪ್ರಶ್ನೆಗಳ ಸುರಿಮಳೆಗಳು ಬಹಳ ದಿನಗಳಿಂದ ಕೇಳಿ ಬರುತ್ತಿದ್ದವು, ಅದರಂತೆ ಇದೀಗ ಯಶ್ ಅವರ 19 ಚಿತ್ರ ಯಾವುದು ಎಂಬ ಸುದ್ದಿ ಹೊರ ಬಿದ್ದಿದೆ ಗೆಳೆಯರೇ. ಹೌದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವ ನಟ ಯಶ್ ಅವರ ಮುಂದಿನ ಚಿತ್ರ ಟಾಕ್ಸಿಕ್ ಎನ್ನುವ ಟೈಟಲ್ ಮೂಲಕ ಕಂಡು ಬಂದಿದೆ. ಹೌದು ಇದೊಂದು ವಿಭಿನ್ನ ಪ್ರಯತ್ನದ ಚಿತ್ರ ಆಗಿರಲಿದೆಯಂತೆ. ಹಾಗೇನೆ ಪ್ಯಾನ್ ಇಂಡಿಯಾ ಚಿತ್ರವಾಗಿ ಕೂಡ ಹೊರಹೊಮ್ಮಲಿದೆ ಎಂದು ಮಾಧ್ಯಮ ವಲಯಗಳಲ್ಲಿ ತಿಳಿದು ಬಂದಿದೆ.

 

ರಾಕಿಭಾಯ್ ಗೆ ಆಕ್ಷನ್ ಕಟ್ ಮಾಡುತ್ತಿರುವ ಈ ನಿರ್ದೇಶಕಿ ಬಗ್ಗೆ ನಿಮಗೆ ಎಷ್ಟು ಗೊತ್ತು ?

ಇವರ ಮುಂದಿನ ಚಿತ್ರಕ್ಕೆ ನಿರ್ದೇಶಕರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಕೇರಳದ ಮಲೆಯಾಳಂ ನಟಿ ಮೋಹನ್ ದಾಸ್ ಅವರು. ಅಸಲಿಗೆ ಈ ಗೀತು ಮೋಹನ್ ದಾಸ್ ಯಾರು ಅಂದ್ರೆ ಮಲಯಾಳಂನ ಬಾಲ ನಟಿಯಾಗಿ ಮಿಂಚಿದ ಪ್ರತಿಭೆ. ಹೌದು ಸುಮಾರು 30ಕ್ಕೂ ಅಧಿಕ ಚಿತ್ರಗಳಲ್ಲಿ ಯಶಸ್ವಿ ನಟಿಯಾಗಿ ಮಿಂಚಿದ್ದಾರೆ. ಹಾಗೆ ಸ್ಟೇಟ್ ಅವಾರ್ಡ್ ಕೂಡ ಇವರಿಗೆ ಲಭಿಸಿದೆ. ನಿರ್ದೇಶಕಿ ಆಗಿ ಇದೀಗ ನಟ ಯಶ್ ಅವರ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ನಟ ಯಶ್ ಮುಂದಿನ ಚಿತ್ರದ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ಈಗ ಬಾರಿ ವೈರಲ್ ಆಗುತ್ತಿದ್ದು ನೀವು ಕೂಡ ಈ ವಿಡಿಯೋ ಒಮ್ಮೆ ನೋಡಿ.ಕೆವಿಎನ್  ಪ್ರೊಡಕ್ಷನ್ ಅಡಿಯಲ್ಲಿ ಯಶ್ ಅವರ ಮುಂದಿನ ಚಿತ್ರ ನಿರ್ಮಾಣ ಆಗುತ್ತಿದೆ ಗೆಳೆಯರೇ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ನಟ ಯಶ್ ಅವರ ಅಪ್ಪಟ ಅಭಿಮಾನಿಯಾಗಿದ್ದರೆ ಅವರ ಈ ಸಿನಿಮಾ ಯಾವ ರೀತಿ ಮೂಡಿ ಬರುಬಹುದು ಎಂದು ನಿಮ್ಮ ಕಲ್ಪನೆಯಲಿ  ತಪ್ಪದೆ ಕಮೆಂಟ್ ಮಾಡಿ. ಧನ್ಯವಾದಗಳು...