ದೇವದಾಸಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ಶಾಕಿಂಗ್ ಸತ್ಯಗಳು..! ವಿಡಿಯೋ ನೋಡಿ ಬೆರಗಾಗ್ತೀರಾ

ದೇವದಾಸಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ಶಾಕಿಂಗ್ ಸತ್ಯಗಳು..! ವಿಡಿಯೋ ನೋಡಿ ಬೆರಗಾಗ್ತೀರಾ

ಭಾರತ ದೇಶದಲ್ಲಿ ಸಾಕಷ್ಟು ಆಚಾರ ವಿಚಾರಗಳು ಅಂದಿನಿಂದಲೂ ಇಂದಿಗೂ ನಡೆದಿವೆ, ಹಾಗೇನೆ ಅವುಗಳು ನಡೆಯುತ್ತಲೇ ಬಂದಿವೆ. ಹೌದು ಹಿಂದಿನ ಹಿರಿಕರು ಮಾಡಿದ ಪದ್ಧತಿಗಳೊ ಗೊತ್ತಿಲ್ಲ, ಅಥವಾ ಯಾರು ಮಾಡಿದರೋ ಇಂತಹ ಪದ್ಧತಿಗಳನ್ನು ಗೊತ್ತಿಲ್ಲ, ಇಂತಹ ಪದ್ಧತಿಗಳು ಇಂದಿಗೂ ಕೆಲವು ಕಡೆ ತುಂಬಾ ಕೆಟ್ಟದಾಗಿ ನಡೆಯುತ್ತವೆ..ಅಂತಹ ಪದ್ಧತಿಗಳಲೊಂದು ದೇವದಾಸಿ ಪದ್ಧತಿ. ಹೌದು ದೇವದಾಸಿ ಪದ್ಧತಿ ತುಂಬಾ ಅನಿಷ್ಟ ಪದ್ದತಿ ಎಂದು 1988 ರಲ್ಲಿ ಭಾರತ ದೇಶದ ಸರ್ಕಾರ ಇದನ್ನು ರದ್ದುಗೊಳಿಸಿತ್ತು.

ಆದರೂ ಕೂಡ ಇಂದಿಗೂ ಕೆಲವು ಕಡೆ ಈ ದೇವದಾಸಿ ಪದ್ಧತಿ ಮುಂದುವರೆಯುತ್ತಲೆ ಬಂದಿದೆ. ಅಸಲಿಗೆ ಈ ದೇವದಾಸಿ ಎಂದರೇನು..? ದೇವದಾಸಿಯರು ಎಂದರೆ ಹಿಂದಿನಿಂದಲೂ ಒಂದು ಕುಟುಂಬವನ್ನು ದೇವದಾಸಿ ಕುಟುಂಬ ಎಂದು ಪರಿಗಣಿಸಲಾಗುತ್ತಿತ್ತು. ಅದೇ ರೀತಿ  ಕುಟುಂಬದಲ್ಲಿ ಹುಟ್ಟಿದ ಮೊದಲ ಮಗಳಿಗೆ ಎಂಟರಿಂದ 18 ವರ್ಷ ತುಂಬತಲೆ ಆಕೆಯನ್ನು ದೇವರಿಗೆ ಬಿಡುತ್ತಾರೆ. ಅಂದರೆ ದೇವರೋಟ್ಟಿಗೆ ಮದುವೆ ಮಾಡಿಸಿ ದೇವದಾಸಿ ಎಂದು ಮರುನಾಮಕರಣ ಮಾಡುತ್ತಾರೆ. ಆಕೆ ಈ ಹೆಸರಿನಲ್ಲಿಯೇ ದೇವರ ಸೇವೆ ಮಾಡಬೇಕು. ದೇವರ ಗುಡಿಯನ್ನು ಸ್ವಚ್ಛವಾಗಿ ಇಟ್ಟುಕೊಂಡು ಅಲ್ಲಿಯೇ ಪೂಜೆ ಮಾಡುತ್ತಾ ಬರಬೇಕು. ಇದು ಒಂದು ರೀತಿಯ ದೇವದಾಸಿಯ ಸೇವೆ ಆದ್ರೆ, ಮತ್ತೊಂದು ಕಡೆ ಒಳಗಡೆ ತುಂಬಾನೇ ಕೆಟ್ಟದಾದ ಸೇವೆ ನಡೆಯುತ್ತದೆ.   

ಹಿಂದಿನಿಂದಲೂ ನಡೆದ ಪದ್ಧತಿ ಏನೆಂದರೆ, ಆ ಊರಿನ ಮುಖಂಡ ಈ ದೇವದಾಸಿಯನ್ನ ಹೇಗೆ ಬೇಕು ಹಾಗೆ ಬಳಸಿಕೊಳ್ಳಬಹುದು. ನಂತರ ಆ ಊರಿನ ಜನರು ಕೂಡ ಈಕೆಯನ್ನು ಹೇಗೆ ಬೇಕು ಹಾಗೆ ತಮ್ಮಿಷ್ಟದಂತೆ ಬಳಸಿಕೊಳ್ಳುತ್ತಾರೆ. ದೇವರಿಗೆ ಬಿಟ್ಟಿರುವ ಇಂತಹ ಮಹಿಳೆಯರು ಮದುವೆ ಆಗುವಂತಿಲ್ಲ, ಒಂದು ವೇಳೆ ಆ ಕುಟುಂಬದಲ್ಲಿ ಹೆಣ್ಣು ಮಗಳು ಹುಟ್ಟದೆ ಇದ್ದರೆ ಗಂಡು ಮಗ ಹುಟ್ಟಿದ್ದು ನಂತರ ಆತನ ಮೊದಲ ಮಗಳು ಈ ಸೇವೆಯನ್ನು ಮುಂದುವರಿಸಬೇಕಾಗಿದೆ. ಈ ರೀತಿ ಪದ್ದತಿ ಹಿಂದಿನಿಂದಲೂ ಇದೆ.

ಕರ್ನಾಟಕದಲ್ಲಿ ಬಸವಿ, ಮಹಾರಾಷ್ಟ್ರದಲ್ಲಿ ಮಾತಂಗಿ, ಉತ್ತರ ಕನ್ನಡದಲ್ಲಿ ದೇವದಾಸಿ, ಮತ್ತು ಆಂಧ್ರದಲ್ಲಿ ಜೋಗಿಣಿ ಎಂದು ಕರೆಯುತ್ತಾರೆ. ಈ ರೀತಿ ಪದ್ದತಿ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವಿಡಿಯೋ ನೋಡಿ. ಈ ರೀತಿ ಪದ್ದತಿ ಯಾವ ಹಂತಕ್ಕೆ ಇಂದು ಬಂದು ನಿಂತಿದೆ, ಇದನ್ನು ಸರ್ಕಾರ ರದ್ದು ಮಾಡಲು ಏನೆಲ್ಲಾ ಹರಸಾಹಸ ಪಟ್ಟಿತು ಎಂಬುದಾಗಿ ತಿಳಿಯಲು ಈ ವಿಡಿಯೋ ನೋಡಿ, ಮತ್ತು ಮಾಹಿತಿ ಉಪಯುಕ್ತ ಇದೆ ಎಂದೆನಿಸಿದಲ್ಲಿ ಶೇರ್ ಮಾಡಿ, ಧನ್ಯವಾದಗಳು...( video credit : SR tv Kannada )