ಸಾಯಿ ಪಲ್ಲವಿ ಗುಟ್ಟಾಗಿ ಮದುವೆಯಾದೆಯಾ? ವೈರಲ್ ಆಗಿರುವ ಮದುವೆಯ ಫೋಟೋಗಳ ಬಗ್ಗೆ ಇಲ್ಲಿದೆ ಮಾಹಿತಿ!

ಸಾಯಿ ಪಲ್ಲವಿ ಗುಟ್ಟಾಗಿ ಮದುವೆಯಾದೆಯಾ? ವೈರಲ್ ಆಗಿರುವ ಮದುವೆಯ ಫೋಟೋಗಳ ಬಗ್ಗೆ ಇಲ್ಲಿದೆ ಮಾಹಿತಿ!

ದಕ್ಷಿಣದ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ  ಎಂದು ಗುರುತಿಸಿಕೊಂಡಿರುವ ಸಾಯಿ ಪಲ್ಲವಿ ಅವರು ಸಾದಾ ಸುದ್ದಿಯಲ್ಲಿ ಇದ್ದಾರೆ. ಇನ್ನೂ ಈಕೆ ತಮ್ಮ ನ್ಯಾಚುರಲ್ ಬ್ಯೂಟಿ ಹಾಗೂ ನಟನೆಯ  ಮೂಲಕ ಪ್ರಸಿದ್ದಿ ಪಡೆದಿರುವ ನಟಿ ಎಂದ್ರೆ ಅದು "ಸಾಯಿ ಪಲ್ಲವಿ". ಇನ್ನೂ ಸಾಯಿ ಪಲ್ಲವಿ ಅವರು ವೃತ್ತಿ ಜೀವನದಲ್ಲಿ ವೈದ್ಯೆ ಆಗಿರುವವರು. ಇನ್ನೂ ಬಹಳ ಚಿಕ್ಕ ವಯಸ್ಸಿನಲ್ಲಿ ಕೂಡ ತೆಲುಗು ಈ ಟಿವಿನಲ್ಲಿ ಡ್ಯಾನ್ಸ್ ಶೋ ಒಂದರಲ್ಲಿ ಕಾಣಿಸಿಕೊಂಡು ಆಗಲೇ ತಮ್ಮ ನೃತ್ಯದ ಮೂಲಕ  ದೊಡ್ಡ ಮಟ್ಟದ ಸುದ್ದಿಯಾಗಿದ್ದರು. ಇನ್ನೂ ಡ್ಯಾನ್ಸ್ ನಲ್ಲಿ ಕೂಡ ಸಾಯಿ ಪಲ್ಲವಿ ಅವರು ದೊಡ್ಡ ಪ್ರಸಿದ್ದಿ ಪಡೆದಿದ್ದವರು. ಇನ್ನೂ ನಟನೆಯಲ್ಲಿ ಕೂಡ ಮಲಯಾಳಂ ನಲ್ಲಿ ಮೊದಲ ಸಿನಿಮಾ ಮೂಲಕ ಪರಿಚಯ ಮಾಡಿಕೊಂಡು ತಮ್ಮ ಮೊದಲ ಸಿನಿಮಾ ಮೂಲಕ ದೊಡ್ಡ ಹಿಟ್ ಪಡೆದುಕೊಂಡವರು.

ಸಾಯಿ ಪಲ್ಲವಿ ಅವರು ತಮ್ಮ ಮೊದಲ ಸಿನಿಮಾದಲ್ಲಿ ಮಲರ್ ಆಗಿ ಗುರುತಿಸಿಕೊಂಡು ಎಲ್ಲರ ಮನಸ್ಸು ಗೆದ್ದವರು. ಈ ಸಿನಿಮಾ ಆದ ಬಳಿಕ ಸಾಯಿ ಪಲ್ಲವಿ ಅವರು ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಇಂದಿಗೂ ಕೂಡ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಸಾಯಿ ಪಲ್ಲವಿ ಅವರು ಇದ್ದಾರೆ. ಇದೀಗ ಸಾಯಿ ಪಲ್ಲವಿ ಅವರು ಕೂಡ "ಅಲ್ಲು ಅರ್ಜುನ್" ಅವರ "ಪುಷ್ಪ 2" ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಲ್ಲು ಅರ್ಜುನ್ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸದ್ಯದಲ್ಲಿ ಸೆಪ್ಟೆಂಬರ್ 20 ರಂದು, "ನಾಗ ಚೈತನ್ಯ" ಅವರ ಮುಂಬರುವ ಸಿನಿಮಾ ನಿರ್ಮಾಪಕರು ಸಾಯಿ ಪಲ್ಲವಿಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೊಡ ಕೇಳಿ ಬರುತ್ತಿದೆ. ಈ ಹಿಂದೆ ಈ ಜೋಡಿ ಕೂಡ  ಜೊತೆ 'ಲವ್ ಸ್ಟೋರಿ'ಯಲ್ಲಿ ಕಾಣಿಸಿಕೊಂಡು ಹಿಟ್ ಪಡೆದುಕೊಂಡಿತ್ತು.  

ಇದೀಗ ಸಾಯಿ ಪಲ್ಲವಿ ಅವರು ಸಿನಿಮಾಗಳ ವಿಚಾರವನ್ನು ಹೊರತುಪಡಿಸಿ ಸದ್ಯದಲ್ಲಿ ಅವರ ಮದುವೆಯ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕ "ರಾಜ್‌ಕುಮಾರ್ ಪೆರಿಯಸಾಮಿ" ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇವರಿಬ್ಬರೂ ರಹಸ್ಯವಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ವಿಚಾರ ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿನ ಹಲವಾರು ಪುಟಗಳಲ್ಲಿ ಇದೀಗ ವೈರಲ್. ಆದ್ರೆ ಸತ್ಯಾಂಶ ಎಂದರೆ ಇವರಿಬ್ಬರೂ ಹಾರ ಹಾಕಿಕೊಂಡು ತೆಗೆದಿರುವ ಫೋಟೋ 'ಎಸ್‌ಕೆ 21' ನ ಪೂಜೆ ಸಮಾರಂಭದಲ್ಲಿ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಹಾಗಾಗಿ ಇವರಿಬ್ಬರೂ ಮದುವೆ ಆಗಿಲ್ಲ. ಈ ಫೋಟೋ ಈ ಸಿನಿಮಾ ಮುಹೂರ್ತದ ಸಮಯದಲ್ಲಿ ತೆಗೆದುಕೊಂಡ ಫೋಟೋ ಎಂದು ಸ್ಪಷ್ಟನೆ ನೀಡಿದ್ದಾರೆ