ತಮ್ಮ ಬಗ್ಗೆ ಮಡದಿ ಸ್ಪಂದನ ಡೈರಿಯಲ್ಲಿ ಬರೆದಿದ್ದ ನೋಡಿ ವಿಜಯ್ ಕಣ್ಣೀರು..! ಡೈರಿಯಲ್ಲಿ ಅಂತಂದ್ದೇನಿತ್ತು

ತಮ್ಮ ಬಗ್ಗೆ ಮಡದಿ ಸ್ಪಂದನ ಡೈರಿಯಲ್ಲಿ ಬರೆದಿದ್ದ ನೋಡಿ ವಿಜಯ್ ಕಣ್ಣೀರು..! ಡೈರಿಯಲ್ಲಿ ಅಂತಂದ್ದೇನಿತ್ತು

ಕನ್ನಡ ಚಿತ್ರರಂಗದ ಖ್ಯಾತ ನಟರಾಗಿ, ಹಾಡುಗಾರರಾಗಿ, ನಿರ್ಮಾಪಕರಾಗಿ, ನಿರ್ಮಾಣ ಸಂಸ್ಥೆ ಮೂಲಕವೇ ನಿರ್ಮಾಪಕರಾಗಿ ಇಡೀ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಡಾಕ್ಟರ್ ರಾಜಕುಮಾರ್. ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರ ಸಹೋದರರಾದ ಚಿನ್ನೆಗೌಡರ ಮಕ್ಕಳು ನಟ ವಿಜಯ ರಾಘವೇಂದ್ರ, ಮತ್ತು ನಟ ಶ್ರೀ ಮುರಳಿ ಅವರು. ಹೌದು ಇವರಿಬ್ಬರೂ ಕೂಡ ಅವರದ್ದೇ ಆದ ವಿಭಿನ್ನ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹೆಸರು ಮಾಡಿದ್ದಾರೆ. ಹಾಗೆ ಹಾಡುಗಾರಿಕೆಯಲ್ಲಿ ಕೂಡ ವಿಜಯ್ ಅವರು ತುಂಬಾನೇ ಅನುಭವ ಹೊಂದಿದ್ದ ನಟ. ರಾಘವೇಂದ್ರ ಅವರ ಬದುಕು ತುಂಬಾನೇ ಸೊಗಸಾಗಿ ಇತ್ತು. ಆದರೆ ವಿಧಿ ಅವರ ಬದುಕಿನಲ್ಲಿ ಅತಿ ದೊಡ್ಡ ಗಾಳಿಯನ್ನೇ ಇದೀಗ ಬೀಸಿದೆ. ನಟ ವಿಜಯ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರನ್ನ ದೇವರು ತನ್ನ ಬಳಿ ಕರೆದುಕೊಂಡಿದ್ದಾನೆ. ಆ ವಿಚಾರ ಎಲ್ಲರಿಗೂ ಗೊತ್ತು.   

ನಿನ್ನೆಯಷ್ಟೆ ಸ್ಪಂದನ ಕುಟುಂಬದವರು ಮತ್ತು ವಿಜಯ ರಾಘವೇಂದ್ರ ಕುಟುಂಬದವರು, ಸ್ಪಂದನ ಅವರಿಗೆ ವಿಧಿ ವಿಧಾನಗಳ ಮೂಲಕ ಪುಣ್ಯತಿಥಿ ಮಾಡಿ ಮುಗಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಸ್ಪಂದನ ಅವ್ರು ಹೃದಯಘಾತಕ್ಕೆ ಒಳಗಾಗಿ ಎಲ್ಲರನ್ನು ಬಿಟ್ಟು ಹೋಗಿರುವುದು ನಿಜಕ್ಕೂ ದುಃಖದ ವಿಷಯ.. ಇದರಿಂದ ರಾಘವೇಂದ್ರ ಅವರು ಆದಷ್ಟು ಬೇಗನೆ ಹೊರ ಬರಬೇಕು, ಹೆಂಡತಿಯನ್ನು ಕಳೆದುಕೊಂಡು ಅವರ ಬದುಕೆ ಕತ್ತಲಾಗಿದೆ. ಆದರೆ ಮುದ್ದಿನ ಮಗ ಇದ್ದಾನೆ, ಮಗನ ಮೂಲಕ ಹೆಂಡತಿಯನ್ನ ನೆನೆಯುತ್ತಾ, ಅವರ ನೆನಪಿನಲ್ಲಿ ಜೀವನ ಮಾಡಬೇಕು.. ನಿನ್ನೆ ಸ್ಪಂದನ ಅವರ ಪುಣ್ಯ ತಿಥಿಯೂ ನಡೆದಿದ್ದು ಸ್ಪಂದನ ಅವರ ಒಂದು ಡೈರಿಯ ವಿಚಾರ ಹೊರಗಡೆ ಬಂದಿದೆ ಎಂದು ಕೇಳಿ ಬಂದಿದೆ. 

ಹೌದು ಸ್ಪಂದನ ಅವರಿಗೆ ಡೈರಿ ಬರೆಯುವ ಹವ್ಯಾಸ ಇತ್ತಂತೆ, ಡೈರಿಯಲ್ಲಿ ಕೆಲವೊಂದಿಷ್ಟು ವಿಚಾರಗಳನ್ನು ತಿಳಿದುಕೊಂಡಿರುವ ವಿಜಯ ರಾಘವೇಂದ್ರ ಅವರು ಕಣ್ಣೀರು ಸುರಿಸಿದ್ದಾರೆ. ಸ್ಪಂದನ ಅವರಿಗೆ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ಸಾಧನೆ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದರು, ಪಾರ್ವತಮ್ಮ ರಾಜಕುಮಾರ್ ಅವರಂತೆಯೇ ಸಾಕಷ್ಟು ಕಲಾವಿದರಿಗೆ ನಿರ್ಮಾಣ ಸಂಸ್ಥೆ ಮೂಲಕ ಸಿನಿಮಾಗಳನ್ನು ಮಾಡಿ ನಿರ್ಮಾಪಕಿ ಆಗಬೇಕು ಎನ್ನುವ ದೊಡ್ಡ ಆಸೆಯನ್ನು ಹೊಂದಿದ್ದರಂತೆ, ಹಾಗೆ ವಿಜಯ ರಾಘವೇಂದ್ರ ಅವರು ಸಿನಿಮಾದಲ್ಲಿ ಯಶಸ್ಸು ಹೆಚ್ಚು ಕಾಣಬೇಕು ಎನ್ನುವ ಕನಸು ಕೂಡ ಇದ್ದು, ಆ ಡೈರಿಯಲ್ಲಿ ಇದನ್ನೆಲ್ಲಾ ಬರೆದಿದ್ದರು ಎಂದು ತಿಳಿದು ಬಂದಿದೆ. ಹೌದು ಮಗನನ್ನೂ ಸಹ ಸಿನಿಮಾರಂಗದಲ್ಲಿ ಬೆಳೆಸುವ ಕನಸನ್ನು ಹೊತ್ತಿದ್ದ ಸ್ಪಂದನ ಅವರ ವಿಚಾರ ಡೈರಿಯ ಮೂಲಕ ಬಹಿರಂಗವಾಗಿದೆ.

ಈ ವಿಚಾರವನ್ನು ಅವರ ಮಾವನವರು ಮಾಧ್ಯಮದ ಮುಂದೆ ತಿಳಿಸಿದ್ದಾರೆ. ಅತಿ ಬೇಗನೆ ಎಲ್ಲರನ್ನು ಬಿಟ್ಟು ಹೋಗಿದ್ದರಿಂದ ಸ್ಪಂದನ ಅವರ ಕನಸುಗಳು ಅವರಿಂದ ಯಶಸ್ವಿಯಾಗಲಿಲ್ಲ,  ಆದರೆ ಅವರ ಕನಸುಗಳನ್ನು ಪತಿ ವಿಜಯ್ ಮತ್ತು ಶೌರ್ಯ ನನಸು ಮಾಡಲಿ ಎಂದು ಹಾರೈಸುತ್ತಾ, ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ, ಧನ್ಯವಾದಗಳು...