ಮೀಟಿಂಗ್ ಮಧ್ಯದಲ್ಲಿ ಪೀರಿಯಡ್ಸ್ ಆದಾಗ ಎಲ್ಲರ ಮುಂದೆ ಈ ಲೇಡಿ IPS ಮಾಡಿರುವ ಕೆಲಸ ನೋಡಿ ಇಡೀ ದೇಶವೇ ಬೆಚ್ಚಿದೆ!!
ಪ್ರಕೃತಿ ಸಹಜವಾಗಿ ಮನುಷ್ಯನಿಗೆ ಬಂದಿರುವ ಗುಣಲಕ್ಷಣಗಳು ಸಾಮಾನ್ಯವಾಗಿರುತ್ತವೆ ಇವು ಪುರುಷರಿಗೆ ಹಾಗೂ ಮಹಿಳೆಯರಿಗೆ ಬೇರೆ ಬೇರೆ ರೀತಿಯಲ್ಲಿ ಇರಬಹುದು ಆದರೆ ಸಮಾಜ ಮಾತ್ರ ಪುರುಷರಿಗೆ ನೀಡುವ ಬೆಲೆಯನ್ನು ಸ್ತ್ರೀಯರಿಗೆ ನೀಡುವುದಿಲ್ಲ ಈ ಲಿಂಗ ತಾರತಮ್ಯ ಯಾವಾಗ ಹೋಗುತ್ತದೆ ಎಂದು ಗೊತ್ತಿಲ್ಲ ಆದರೆ ಇನ್ನೊಬ್ಬ ಲೇಡಿ ಐಪಿಎಸ್ ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಗುಜರಾತ್ ರಾಜ್ಯದ ಅಹಮದಬಾದ್ ನಗರದ ಮಂದಿತ ಅಲ್ಲಿಗೆ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ದಿನ ಪೊಲೀಸ್ ಕೇಸ್ ಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ಬಗ್ಗೆ ಸಭೆ ನಡೆಯುತ್ತಿತ್ತು ಈ ಸಭೆಗೆ ದೊಡ್ಡ ಪೊಲೀಸ್ ಆಫೀಸರ್ಗಳು ಹಾಗೂ ರಾಜಕಾರಣಿಗಳು ಬಂದಿದ್ದರು ಇಡೀ ಸಭೆಯಲ್ಲಿ ಮಂದಿತ ಒಬ್ಬರೇ ಮಹಿಳಾ ಸದಸ್ಯೆ ಈ ಸಭೆ ಬೆಳಗ್ಗೆಯಿಂದ ಸಂಜೆಯವರೆಗೂ ನಡೆಯಿತು.
ಸಭೆ ನಡೆಯುತ್ತಿರುವ ವೇಳೆ ಮಂದಿತಾ ರವರಿಗೆ ಪೀರಿಯಡ್ಸ್ ಅಥವಾ ಋತುಸ್ರಾವ ಶುರುವಾಯಿತು ಸ್ವಲ್ಪ ಸಮಯದ ನಂತರ ಈ ವಿಚಾರ ಮಂದಿತಾ ರವರಿಗೂ ತಿಳಿಯಿತು ಯಾರಿಗೂ ಗೊತ್ತಾಗದಂತೆ ಸಭೆ ಮುಗಿದ ತಕ್ಷಣ ಸಭೆಯಿಂದ ಹೊರಡಬೇಕು ಎಂದು ಕೊಂಡರು ಸಭೆ ಮುಗಿದ ತಕ್ಷಣ ತನ್ನ ಹೈಯರ್ ಆಫೀಸರ್ ಗೆ ಸೆಲ್ಯೂಟ್ ಹೊಡಿಯಬೇಕಾಗಿತ್ತು. ( video credit : mr info )
ಸೆಲ್ಯೂಟ್ ಹೊಡೆಯಲು ಮೇಲೆ ಎದ್ದರೆ ಬಟ್ಟೆಗೆ ಆಗಿರುವ ಕಲೆ ಎಲ್ಲರಿಗೂ ಗೊತ್ತಾಗುತ್ತದೆ ನಾನು ಎದ್ದೇಳದೆ ಹೋದರೆ ಬೇರೆಯವರು ಎದ್ದೇಳುವುದಿಲ್ಲ ಏನಾದರೂ ಆಗಲಿ ಸೆಲ್ಯೂಟ್ ಮಾಡಲೇಬೇಕು ಎಂದು ನಿರ್ಧರಿಸಿ ಎದ್ದು ಸೆಲ್ಯೂಟ್ ಮಾಡಿದರು ನಂತರ ಏನೂ ಆಗಿಲ್ಲ ಎನ್ನುವಂತೆ ಮೇಲೆದ್ದು ತನ್ನ ಕಾರಿನ ಕಡೆ ಹೊರಟರು ಅಲ್ಲಿದ್ದ ಎಲ್ಲರೂ ಇವರನ್ನೇ ದಿಟ್ಟಿಸಿ ನೋಡುತ್ತಿದ್ದರು.
ಇವರ ಗನ್ ಮ್ಯಾನ್ ಕೂಡ ನಿಮ್ಮ ಪ್ಯಾಂಟಿನಲ್ಲಿ ಕಲೆ ಆಗಿದೆ ಮೇಡಂ ಎಂದಾಗ ಮಂದಿತ ನಕ್ಕು ಇದು ಸಾಮಾನ್ಯ ಇರಲಿ ಬಿಡು ನಿನಗೆ ಮುಂದೆ ಎಂದಾದರೂ ಇಂತಹ ಕಲೆ ಕಂಡರೆ ಹೇಳುವುದನ್ನು ಮರೆತು ಬಿಡು ಎಂದು ಧೈರ್ಯದಿಂದ ಹೇಳಿದರು ಈ ವಿಚಾರವನ್ನು ಮಂದಿತಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ನೋಡುವ ರೀತಿ ಬದಲಾಗಬೇಕು ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ರೆಸ್ಟ್ ನೀಡಬೇಕು ಮಹಿಳೆಯರು ಕೂಡ ತನ್ನ ಆಲೋಚನಾ ವಿಧಾನವನ್ನು ಬದಲಾಯಿಸಬೇಕು ಇಂತಹ ಸಮಯದಲ್ಲಿ ಧೃತಿಗೆಡ ಬಾರದು , ಪಿರಿಯಡ್ಸ್ ಸಮಯದಲ್ಲಿ ಪುರುಷರು ಮಹಿಳೆಯರಿಗೆ ಸಹಾಯ ಮಾಡಬೇಕು ಕೇರಳದಲ್ಲಿ ಈಗಾಗಲೇ ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ರಜೆ ಕೊಡುತ್ತಾರೆ ಎಂದರು