ಈ ಬಾರಿಯ ಹೊಸ ವರ್ಷದ ವೇಳೆ ಬುಕ್ ಆದ ಪ್ರತಿ ಗಂಟೆಯ ಕಾಂಡೊಮ್ 1722..! ಓಯೋದಲ್ಲಿ ಎಷ್ಟು ರೂಮ್ ಬುಕ್ ಆಗಿದ್ದವು ನೋಡಿ

ಈ ಬಾರಿಯ ಹೊಸ ವರ್ಷದ ವೇಳೆ ಬುಕ್ ಆದ ಪ್ರತಿ ಗಂಟೆಯ ಕಾಂಡೊಮ್ 1722..! ಓಯೋದಲ್ಲಿ ಎಷ್ಟು ರೂಮ್ ಬುಕ್ ಆಗಿದ್ದವು ನೋಡಿ

2023 ಕ್ಕೆ ಎಲ್ಲರೂ ವಿದಾಯ ಹೇಳಿದ್ದು, 2024ಕ್ಕೆ ಕಾಲಿಟ್ಟಿದ್ದಾರೆ..ಹೌದು. ಮೊನ್ನೆಯಷ್ಟೇ 2024 ನ್ನ ಎಲ್ಲರೂ ಕೂಡ ಪ್ರೀತಿಯಿಂದ ಬರಮಾಡಿಕೊಂಡರು. ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ನಮಗೆ ಗೊತ್ತಿರುವ ಹಾಗೆ ಹೆಚ್ಚು ಜನರು ಎಣ್ಣೆ ಕುಡಿದು, ಪಾರ್ಟಿ ಮಾಡಿ, ಡಾನ್ಸ್ ಮಾಡಿ, ಊಟ ಮಾಡಿ ಎಂಜಾಯ್ ಮಾಡುತ್ತಾರೆ. ಆದ್ರೆ ಈಗ ಕೇಳು ಬಂದಿರುವ ಒಂದಿಷ್ಟು ವಿಷಯಗಳು ತುಂಬಾನೇ ಚರ್ಚೆ ಆಗುತ್ತಿವೆ.. ಆಹಾರ ವಿತರಣಾ ಕಂಪನಿ ಆದ ಸ್ವಿಗ್ಗಿ ಹಾಗೂ ಝೋಮ್ಯಾಟೋ ದಾಖಲೆ ಮಟ್ಟದಲ್ಲಿ ಬಿರಿಯಾನಿ ಆರ್ಡರ್ಗಳನ್ನು ಈ ವರ್ಷದ 2024 ರ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪಡೆದಿದ್ದಾವಂತೆ.

ಪ್ರತಿ ನಿಮಿಷಕ್ಕೂ 1244 ಬಿರಿಯಾನಿಗಳು ಆರ್ಡರ್ ಆಗಿದ್ದವೆಂದು ಸ್ವಿಗ್ಗಿ ಸಂಸ್ಥೆಯವರು ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದೆ. ಹೌದು ಹೈದರಾಬಾದ್ ಒಂದರಲ್ಲಿ ಪ್ರತಿ ನಿಮಿಷಕ್ಕೆ 1244 ಬಿರಿಯಾನಿಗಳು ಬುಕ್ ಆಗಿದ್ದವು. ಹಾಗೆ ಹೊಸ ವರ್ಷಕ್ಕೆ ಇನ್ನೇನು ಒಂದು ತಾಸು ಇರುವಾಗ ಸುಮಾರು 10 ಲಕ್ಷ ಜನರು ಸ್ವಿಗ್ಗಿ ಅಪ್ಲಿಕೇಶನ್ ಬಳಕೆ ಮಾಡಿದ್ದಾರೆ ಎಂದು ಸಹ ತಿಳಿದುಬಂದಿದ್ದು ಆಹಾರ ವಿತರಣಾ ಸಂಸ್ತೆಯ ಸಂಘಟಿಕರು ಬಹಿರಂಗಪಡಿಸಿದ್ದಾರೆ.. 

ಜೊತೆಗೆ ಈ ವರ್ಷ ಹೊಸ ವರ್ಷಾಚರಣೆ ಮಾಡುವ ಸಂದರ್ಭದಲ್ಲಿ ಅದೆಷ್ಟು ಜನರು ಕಾಂಡೊಮ್ ಬುಕ್ ಮಾಡಿದ್ದರು ಗೊತ್ತಾ..? ನಿಜಕ್ಕೂ ಶಾಕ್ ಆಗುತ್ತೆ ಈ ವಿಚಾರ. ಹೌದು ಪ್ರತಿ ಗಂಟೆಗೆ 1,722 ಯೂನಿಟ್ ಗಳ ಕಾಂಡೋಮ್‌ಗಳನ್ನು ಆರ್ಡರ್ ಮಾಡಲಾಗಿತ್ತಂತೆ. ಹೌದು ಅದೇ ರೀತಿ ಡಿಸೆಂಬರ್ 31ರಂದು ೨ ಲಕ್ಷ ಕೆಜಿ ಈರುಳ್ಳಿ, ಜೊತೆಗೆ 1.80 ಲಕ್ಷ ಕೆಜಿಯಷ್ಟು ಆಲೂಗಡ್ಡೆ ಸಹ ಡಿಮ್ಯಾಂಡ್ ಬಂದಿದ್ದು ಆರ್ಡರ್ ಆಗಿದ್ದವು ಎಂದು ಈಗ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕಡೆಯವರು ಬಹಿರಂಗ ಮಾಡಿದ್ದಾರೆ..

ಇನ್ನು ಓಯೋ ರೂಮ್ ನ ಬುಕಿಂಗ್ ವಿಚಾರಕ್ಕೆ ಬರುವುದಾದರೆ ಸುಮಾರು 6.2 ಲಕ್ಷ ರೂಮುಗಳು ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬುಕ್ ಆಗಿದ್ದವು ಎಂದು ಕೂಡ ತಿಳಿದು ಬಂದಿದೆ.. ಅತ್ತ ಅಯೋಧ್ಯೆಯಲ್ಲಿ ಕಳೆದ ವರ್ಷಕ್ಕಿಂತ ಶೇಕಡ 70ರಷ್ಟು, ಗೋವಾದಲ್ಲಿ ಕಳೆದ ವರ್ಷಕ್ಕಿಂತ ೫0ರಷ್ಟು, ನೈನಿತಾಲ್ ನಲ್ಲಿ ಶೇಕಡ 60 ರಷ್ಟು  ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಓಯೊ ರೂಮ್ ಬುಕ್ ಆಗಿದ್ದವು ಸಂಸ್ತೆಯ ಸಂಘಟಿಕರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕಾಮೆಂಟ್ ಮಾಡಿ..