ಸ್ಪಂದನಾ ಮೃತದೇಹ ನೋಡಿ ಕೊಡಿಶ್ರಿಗಳು ಹೇಳಿದ್ದೇನು..? ಇದು ಅವರ ಇಚ್ಛೆಯಂತೆ
ನಟ ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನ ಅವರು ವಿದೇಶಕ್ಕೆ ಪ್ರಯಾಣ ಕೈಗೊಂಡ ವೇಳೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು. ನೆನ್ನೆ ಬೆಂಗಳೂರಿನ ಅವರ ತಂದೆ ಮನೆ ಅತ್ತ ಮಲ್ಲೇಶ್ವರಂ ನಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತದನಂತರ ಸಾಯಂಕಾಲ ಅಂತಿಮ ದರ್ಶನ ಮುಗಿದ ಬಳಿಕ ಹರಿಶ್ಚಂದ್ರ ಘಾಟ್ ನ ವಿದ್ಯುತ್ ಚಿತಾಗಾರದಲ್ಲಿ ಸ್ಪಂದನ ಅವರ ಅಂತ್ಯಕ್ರಿಯೆ ಮಾಡಲಾಯಿತು. ಹೌದು ಸ್ಪಂದನಾ ಅವರ ನೆನಪು ಸದಾ ಅವರ ಕುಟುಂಬಕ್ಕೆ ಕಾಡುತ್ತಲೇ ಇರುತ್ತದೆ..ಇನ್ನು ಅವರು ನೆನಪಾಗಿಯೇ ಮಾತ್ರ ಉಳಿಯುತ್ತಾರೆ ಎಂದು ಹೇಳಲು ಸಹ ಕಷ್ಟ. ಅಷ್ಟು ನೋವು ಅವರ ಅಗಲಿಕೆಯಿಂದ ಆಗಿರುತ್ತದೆ.
ದೈಹಿಕವಾಗಿ ಅವರಿಲ್ಲದೆ ಇದ್ದರೂ ಕೂಡ ಅವರ ಮನೆಯವರಿಗೆ ಅವರ ನೆನಪುಗಳು ಸದಾ ಜೊತೆಗೆ ಇರುತ್ತವೆ ಎಂದು ಹೇಳಬಹುದು. ಹೌದು ಸ್ಪಂದನ ಅವರ ಮೃತ ದೇಹವನ್ನು ನೋಡಿ ಕರ್ನಾಟಕದ ಖ್ಯಾತ ಸ್ವಾಮೀಜಿಗಳಾದ ಕೋಡಿ ಶ್ರೀ ಮಠದ ಗುರುಗಳು ನುಡಿದದ್ದ ಕೆಲವು ವಿಚಾರಗಳು ಎಂತವು ಗೊತ್ತಾ.? ಹೌದು ಮೊದಲಿಗೆ ಸ್ಪಂದನ ಅವರನ್ನು ನೋಡಿದ ಕೊಡಿಶ್ರೀ ಮಠದ ಸ್ವಾಮಿಗಳು ಅವರ ಹಣೆಗೆ ವಿಭೂತಿ ಹಚ್ಚಿ ಕುಂಕುಮ ಇಟ್ಟರು. ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು ಇದು ಅಕಾಲಿಕ ಮೃತ್ಯು, ದೇವರ ಇಚ್ಛೆಯೆ ಆಗಿರುತ್ತದೆ.
ಆ ದೇವರಿಗೆ ಹೂವು ಬೇಕಾದಾಗ ಒಳ್ಳೆಯ ಹೂವೂ ಬೇಕಾದಾಗ ಇಂತಹವರನ್ನು ತನ್ನತ್ತ ಕರೆಸಿಕೊಳ್ಳುತ್ತಾನೆ. ಇದು ಅಕಾಲಿಕ ಮರಣ, ಇದು ಭಗವಂತನಿಗೆ ಬೇಕಾದ ಹೂವು. ಆ ದೇವರ ಇಚ್ಛೆ ಆಗಿದೆ.. ಹಾಗಾಗಿ ಅವರ ಕುಟುಂಬಕ್ಕೆ ಸ್ಪಂದನ ಅವರ ಅಗಲಿಕೆ ನೋವ ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ ಎಂದರು. ಆ ತಾಯಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿ ಹೋದರು. ಇಲ್ಲಿದೆ ನೋಡಿ ವಿಡಿಯೋ...