ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಶಾಕಿಂಗ್ ಹೇಳಿಕೆ ನಿಜಾನಾ?

ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಶಾಕಿಂಗ್ ಹೇಳಿಕೆ ನಿಜಾನಾ?

ಇನ್ನೂ ನಮ್ಮ ಕಲಾವಿದರ ಬದುಕು ನಾವು ಕ್ಯಾಮರಾ ಮುಂದೆ ನೋಡುವಷ್ಟು ಸುಂದರವಾಗಿಲ್ಲ ಎಂದರೆ ತಪ್ಪಾಗಲಾರದು. ಏಕೆಂದರೆ ಈಗಿನ ಕಾಲದಲ್ಲಿ ಮದುವೆ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತೆ ಮಾಡಿದ್ದಾರೆ. ಇನ್ನೂ ಈಗ ನಾವು ಮದುವೆ ಹಾಗೂ ಪ್ರೀತಿಯ ವಿಚಾರದಲ್ಲಿ ನಮ್ಮ ಬಾಲಿವುಡ್ ಅಂಗಳದತ್ತಾ ನೋಡಿದರೆ ಇಂತಹ ಪದಗಳಿಗೆ ಈ ಬಾಲಿವುಡ್ ಅಂಗಳದಲ್ಲಿ ಬೆಲೆಯೇ ಇಲ್ಲದಂತಗಿದೆ. ಏಕೆಂದರೆ ಇಲ್ಲಿ ಪ್ರಿತಿಯಾಗುವುದು ಕೊಡ ಅಚ್ಚರಿ ಇಲ್ಲ ಹಾಗೆಯೇ ಮದುವೆಯ ನಂತರ ಮತ್ತೊಬ್ಬರನ್ನು ಪ್ರೀತಿಸಿ ಅಥವಾ ವಿಚ್ಛೇದನ ಪಡೆಯುವುದು ಕೊಡ ಹೊಸದೇನೂ ಅಲ್ಲ. ಈ ಪಟ್ಟಿಯಲ್ಲಿ ಬೇರೆ ಚಿತ್ರ ರಂಗಗಳಿಗಿಂತ ಹೆಚ್ಚು ಬಾಲಿವುಡ್ ಅಂಗಳದಲ್ಲಿ ಉದ್ದದ ಪಟ್ಟಿ ಇದೆ ಎನ್ನಬಹುದು.ಇದೀಗ ಆ ಪಟ್ಟಿಗೆ ಸೇರ್ಪಡೆ ಆಗಲು ಬಾಲಿವುಡ್ ನ ಮೋಸ್ಟ್ ಫೇಮಸ್ ಜೋಡಿ ಆಗಿರುವ ಜೋಡಿ ಎಲ್ಲಾ ಸೂಚನೆಗಳನ್ನು ನೀಡುತ್ತಾ ಬರುತ್ತಿದೆ. ಇನ್ನೂ ಆ ಜೋಡಿಗಳು ಎಂದ್ರೆ 2007ರಲ್ಲೀ ಮದುವೆಯಾದ ಅಭಿಷೇಕ್ ಬಚ್ಚನ್ ಹಾಗೂ ಏಡ್ವರ್ಯ ರೈ.   

ಹೌದು ಈ ಜೋಡಿ ಪರಸ್ಪರ ಪ್ರೀತಿಸಿ ಅದ್ರಲ್ಲೂ ಐಶ್ವರ್ಯ ರೈ ಬಾಲಿವುಡ್ ನ ಸುಲ್ತಾನ್ ಎಂದೇ ಹೆಸರು ಮಾಡಿದ್ದ ಸಲ್ಮಾನ್ ಖಾನ್ ಅವರನ್ನು ಹಿಂದಕ್ಕೆ ಇಟ್ಟು ಅಭಿಷೇಕ್ ಅವರನ್ನು ಆಯ್ಕೆ ಮಾಡಿಕೊಂಡು 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗೆ ಪ್ರೀತಿಸಿ ದಿನದಿಂದ ದಿನಕ್ಕೆ ತಮ್ಮ ಮೇಲಿನ ಪ್ರೀತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದ ಈ ಜೋಡಿ 2011ರಲ್ಲಿ ತಮ್ಮ ಪ್ರೀತಿಯ ಸಂಕೇತವಾಗಿ ಆರಾಧ್ಯ ಅವರನ್ನು ತಮ್ಮ ಕುಟುಂಬಕ್ಕೆ ಬರಮಾಡಿಕೊಳ್ಳುತ್ತಾರೆ.ಆದರೆ ಹೀಗೆ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿಯ ನಡುವೆ ವರ್ಷಗಳು ಉರುಳುತ್ತಿದ್ದಂತೆ ಇವರಿಬ್ಬರ ನಡುವೆ ಪ್ರೀತಿ ಕೊಡ ಕಡಿಮೆಯಾಗಿದೆ ಎಂದು ಸಾಕಷ್ಟು ಬಾರಿ ಇವರಿಬ್ಬರೂ ಮದ್ಯಮಗಳ ಮುಂದೆ ನಡೆದುಕೊಳ್ಳುವ ರೀತಿಯಿಂದ ಊಹಿಸಲಾಗಿತ್ತು.

ಆದರೆ ಈಗ ಈ ವಿಚಾರಕ್ಕೆ ಕೆಲವೊಂದು ಘಟನೆ ಪುಷ್ಠಿ ನೀಡಿ ಇವರಿಬ್ಬರೂ ವಿಚ್ಛೇದನ ನಿರ್ಧಾರ ಮಾಡಿದ್ದಾರೆ ಎಂದು ಉಮೈರ್ ಅವರು ಕೊಡ ಟ್ವೀಟ್ ಮುಖಾಂತರ ತಿಳಿಸಿದ್ದರು. ಅದರಂತೆಯೇ ಈಗ ಬಚ್ಚನ್ ಹುಟ್ಟು ಹಬ್ಬಕ್ಕೆ ಐಶ್ವರ್ಯ ಅವರು ಅವರ ಒಬ್ಬರೇ ಇದ್ದ ಫೋಟೋ ಹಂಚಿಕೊಂಡು ಕೇವಲ ಹ್ಯಾಪಿ ಬರ್ತಡೇ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಇತ್ತೀಚೆಗೆ ನಡೆದ ಒಂದು ಪಾರ್ಟಿಯಲ್ಲಿ ಅಭಿಷೇಕ್ ಅವ್ರು ತಮ್ಮ ಮದುವೆಯ ರಿಂಗ್ ಇಲ್ಲದೆ ಮೊದಲನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ. 

ಹಾಗಾಗಿ ಈಗ ಇವರಿಬ್ಬರೂ ವಿಚ್ಛೇದನ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ನಂಬಿಕೆ ಹೆಚ್ಚಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಇವರೆ ಸ್ಪಷ್ಟನೆ ನೀಡುವ ವರೆಗೂ ಕಾದು ನೋಡಬೇಕಿದೆ. ಇನ್ನೂ ಈ ವರೆಗೂ ಉಮೈರ್ ಅವರು ಬರೆದಿರುವ ಎಲ್ಲಾ ಟ್ವೀಟ್ ಕೊಡ ಸುಳ್ಳಾಗಿದೆ. ಹಾಗಾಗಿ ಇವರ ಟ್ವೀಟ್ ಕೊಡ ಸುಳ್ಳು ಎಂದು ಇಂದು ನಡೆದ ಬಾಲಿವುಡ್ ಸಮಾರಂಭದಲ್ಲಿ ಕುಟುಂಬ ಸಮೇತರಾಗಿ ಭಾಗಿ ಆಗಿದ್ದರು.