ಸತ್ತು ಹೋದ ಹೆಂಡತಿಯನ್ನು ಬದುಕಿಸಿದ ಪತಿಗೆ ಕಾದಿತ್ತು ಒಂದು ಆಘಾತ! ಆ ಆಘಾತ ಏನು ಗೊತ್ತಾ?

ಸತ್ತು ಹೋದ ಹೆಂಡತಿಯನ್ನು ಬದುಕಿಸಿದ ಪತಿಗೆ ಕಾದಿತ್ತು ಒಂದು ಆಘಾತ! ಆ ಆಘಾತ ಏನು ಗೊತ್ತಾ?

ನಮ್ಮ ಲೋಕ ಬಹಳ ಮುಂದುವರೆಯುತ್ತಿದೆ ಎನ್ನುವದು ಬಹಳ ಹೆಮ್ಮೆಯ ವಿಚಾರ. ಆದ್ರೆ ಕಾಲ ಮುಂದುವರ್ದಷ್ಟು ಜನರ ನೈಜತೆ ಹಾಗೂ ಪ್ರಾಮಾಣಿಕತೆ ಕೂಡ ಅಷ್ಟೇ ಪಾತಾಳ ಕಚ್ಚಿತ್ತಿದೆ. ಹೀಗಿರುವಾಗ ನೈಜ ಮನುಜರ ಬದುಕುವ ಕಡೆ ಸ್ವಾರ್ಥಿಗಳ ಮದ್ಯೆ ಬದುಕುವ ಸ್ಥಿತಿ ಎದುರಾಗಿದೆ ಎಂದ್ರೆ ತಪ್ಪಾಗಲಾರದು. ಮೊದಲೆಲ್ಲಾ ಕಷ್ಟ ಎಂದ ಕೂಡ ಯರೋದರೊಬ್ಬರು ನಮ್ಮ ಸಹಾಯಕ್ಕೆ ಎಂದು ಬಂದು ನಿಲ್ಲುತ್ತಿದ್ದರು. ಆದ್ರೆ ಈಗ ಕಷ್ಟ ಎಂದ ಕೊಡ ನಮ್ಮವರೇ ನಮಗಾಗಿ ಸ್ಪಂದಿಸದೆ ಇರುವ ಕಾಲದಲ್ಲಿ ನಾವು ಜೀವಿಸುತ್ತಾ ಬರುತ್ತಿದ್ದಿದ್ದೇವೆ. ಇನ್ನೂ ಈಗಿನ ಕಾಲದಲ್ಲಿ ಜೊತೆಗಿರುವ ಮಕ್ಕಳು ಹೆಂಡತಿ ಸ್ವಂತ ಹೆತ್ತ ಮಕ್ಕಳನ್ನೇ ನಂಬಲಾಗದ ಕಾಲ ಬಂದಿದೆ ಎಂದರೆ ತಪ್ಪಾಗಲಾರದು. ಇದೀಗ ಅಂತದ್ದೇ ಒಂದು ಮಾದರಿಯ ನೈಜ ಘಟನೆಯನ್ನು ನಮ್ಮ ಲೇಖನದಲ್ಲಿ ಹೊತ್ತು ತಂದಿದ್ದೇವೆ. ಆ ಲೇಖನದ ಬಗ್ಗೆ ನೀವು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಗಂಡ ಹೆಂಡತಿ ಎನ್ನುವುದು ಒಂದು ಅದ್ಬುತ ಸಂಬಂಧ ಆದರೆ ಈಗ ಆ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಆಗಿದೆ. ಇದೀಗ ಆದೆ ಸಾಲಿನಲ್ಲಿ ನಿಂತಿರುವ ಕಿಶೋರ್ ಹಾಗೂ ಕಾವ್ಯ ಅವರ ಕಥೆಯನ್ನು ಕೇಳೋಣ ಬನ್ನಿ. ಈ ಕಿಶೋರ್ ಹಾಗೂ ಕಾವ್ಯ ಅವರು ಬಹು ಕಾಲ ಪ್ರೀತಿಸಿ ಮದುವೆಯಾಗಿದ್ದವರು. ಇನ್ನೂ ಈ ಜೋಡಿ ನೋಡಲು ಅಷ್ಟೇ ಮುದ್ದಾಗಿದ್ದರು ಅದರಲ್ಲೂ ಕಾವ್ಯ ತಿದ್ದಿದ್ದ ಒಂದು ಬೊಂಬೆಯಂತೆ ಇದ್ದವರು. ಇನ್ನೂ ಇವರ ಪ್ರೀತಿ ಮದುವೆಯ ನಂತರ ದುಪ್ಪಟ್ಟಾಗಿೆತ್ತು ಅದೆಷ್ಟರ ಮಟ್ಟಿಗೆ ಎಂದ್ರೆ ದೇವರ ಕಣ್ಣಿಗೂ ಹೊಟ್ಟೆ ಕಿಚ್ಚು ಬರುವಷ್ಟು. ಹೀಗೆ ದಾಂಪತ್ಯದ ಜೀವನ ನಡೆಸುತ್ತಿದ್ದ ಜೋಡಿಯ ಬಾಳಿನಲ್ಲಿ ಒಂದು ಬಿರುಗಾಳಿ ಬಂದಿತು. ಅದುವೇ ಕಾವ್ಯ ಅವರು ರಸ್ತೆ ಅಪಘಾತದ ದಲ್ಲಿ ಮರಣ ಹೊಂದುತ್ತಾರೆ. ಇನ್ನೂ ಪತ್ನಿಯಲ್ಲಿ ತನ್ನ ಸುಖ ಸಂತೋಷ ಎಲ್ಲವನ್ನೂ ಕಾಣುತ್ತಿದ್ದ ಕಿಶೋರ್ ಗೆ ಕಾವ್ಯ ಅವರ ಸಾವು ಅರಗಿಸಿಕೊಳ್ಳಲಾಗದಷ್ಟು ನೋವನ್ನು ಉಂಟು ಮಾಡಿತ್ತು.

ಹೀಗೆ ಕಾವ್ಯ ಅವರ ಸವಾಗಿ ಒಂದು ತಿಂಗಳು ಆಗಿದ್ದರು ಕೂಡ ದಿನಾಲೂ ಕಿಶೋರ್ ಅವರ ಸಮಾಧಿಯ ಮುಂದೆ ಕುಳಿತು ಅಳುತ್ತಾ ಇದ್ದನು. ಇನ್ನೂ ಅವರ ಕೆಲ್ಸ ಕಾರ್ಯ ಎಲ್ಲವನ್ನೂ ಬಿಟ್ಟು ಆ ಸಮಾಧಿಯ ಮುಂದೆಯೇ ಇರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾನೆ. ಇದನ್ನು ಗಮನಿಸಿದ ಒಂದು ಸ್ವಾಮೀಜಿ ಅವನನ್ನು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಕಿಶೋರ್ ತನ್ನ ಎಲ್ಲಾ ನೋವನ್ನು ಆ ಸ್ವಾಮೀಜಿ ಬಳಿ ಹೇಳಿಕೊಳ್ಳುತ್ತಾನೆ. ಆ ಸ್ವಾಮೀಜಿ ಕೊಡ ಅವನ್ ಪ್ರೀತಿಯ ಬಗ್ಗೆ ಮರುಗಿ ತನ್ನಲ್ಲಿದ್ದ ಮಂತ್ರ ಶಕ್ತಿಯಿಂದ ಕಾವ್ಯಳನ್ನ ಮತ್ತೆ ಮರು ಜೀವಂತವಾಗಿ ಸಮಾಧಿಯಿಂದ ಹೋರ ತರುತ್ತಾನೆ. ಹೀಗೆ ಆಚೆ ಬಂದ ಕಾವ್ಯಳನ್ನು ನೋಡಿ ಕಿಶೋರ್ ಬಹಳ ಸಂತಸ ವ್ಯಕ್ತಪಡಿಸುತ್ತಾನೆ. ನಂತರ ಸ್ವಾಮೀಜಿಗೆ ಧನ್ಯವಾದ ತಿಳಿಸಿ ಹೊರಡುತ್ತಾನೆ.

ಬಹಳ ದಿನಗಳಿಂದ ನಿದ್ದೆ ಊಟ ಮಾಡಿರದ ಕಿಶೋರ್ ಗೆ ಬಹಳ ದಣಿವಾಗಿರುತ್ತದೆ. ಹಾಗಾಗಿ ಕಾವ್ಯಗೆ ತಿಳಿಸಿ ಅಲ್ಲಿಯೇ ಇದ್ದ ಮರದ ಕೆಳಗೆ ಮಲಗುತ್ತಾನೆ. ಇನ್ನೂ ಕಾವ್ಯಳ ತೊಡೆಯ ಮೇಲೆ ಮಲಗಿದ್ದ ಕಿಶೋರ್ ಹಾಗೆಯೇ ನಿದ್ದೆಗೆ ಜಾರುತ್ತಾನೆ. ಸ್ವಲ್ಪ್ ಸಮಯದ ನಂತರ ಅದೇ ಜಾಗಕ್ಕೆ ಒಬ್ಬ ಸುಂದರ ಮುಖದ ರಾಜ ಕುದುರೆಯನ್ನು ಏರಿ ಬರುತ್ತಾನೆ. ಆಗ ಕಾವ್ಯಳ ಕಣ್ಣು ಆ ರಾಜನ ಮೇಲೆ ಆ ರಾಜನ ಕಣ್ಣು ಸುಂದರ ಕಾವ್ಯಳ ಮೇಲೆ ಬೀಳುತ್ತದೆ. ಕಣ್ಣಿನಲ್ಲಿ ಮಾತನಾಡಿದ ಈ ಇಬ್ಬರು. ಕಾವ್ಯ ತನ್ನ ಪತಿಯನ್ನು ಮರೆತು ಆ ರಾಜನ ಜೊತೆಗೆ ಅವನ ಅರಮನೆಗೆ ತೆರಳುತ್ತಾಳೆ. ಸ್ವಲ್ಪ್ ಸಮಯದ ನಂತರ ಎದ್ದ ತನ್ನ ಹೆಂಡತಿಯ ಹೆಜ್ಜೆ ಗುರುತನ್ನು ಹಿಂಬಾಲಿಸಿಕೊಂಡು ಅವಳನ್ನು ಹುಡುಕುತ್ತಾ ತೆರಳುತ್ತಾನೆ. ಆ ವೇಳೆ ಅವನ ಹೆಂಡತಿ ರಾಜನ ಪಕ್ಕ ಅವನ ಅಸ್ತನದಲ್ಲಿ ಇರುತ್ತಾಳೆ. ಕವ್ಯಳನ್ನು ಪ್ರಶ್ನೆ ಮಾಡಿದ ಕಿಶೋರ್ ಗೆ ನಿನ್ನ ಜೊತೆ ಬರಲು ನನಗೆ ಎಷ್ಟ ಇಲ್ಲ ಎಂದು ಕಾವ್ಯ ಉತ್ತರ ನೀಡುತ್ತಾಳೆ. ಬಹಳ ಬೇಸರ ಗೊಂಡ ಕಿಶೋರ್ ತನ್ನ ಪ್ರೀತಿಗೆ ಬೆಲೆ ಇಲ್ಲವಾ ಎಂದಾಗ ನಿನ್ನ ಬಳಿ ಹಣ ಇಲ್ಲ ಹಾಗಾಗಿ ನಾನು ರಾಜನ ಪ್ರಿಯತಮೆ ಆಗಿ ಉಳಿಯುತ್ತೇನೆ ನಿನ್ನ ಜೊತೆ ಬರಲು ನನಗೆ ಇಷ್ಟ ಇಲ್ಲ ಎಂದು ತಿಳಿಸುತ್ತಾರೆ. ಅಲ್ಲಿಗೆ ಬಂದ ಅದೇ ಸ್ವಾಮೀಜಿ ತನ್ನ ಮಂತ್ರ ಕೋಪಗೊಂಡು ಕಾವ್ಯಳನ್ನು ಮತ್ತೆ ಸಾಯಿಸುತ್ತಾನೆ. ಆಗ ಕಿಶೋರ್ ಗೆ ಒಂದು ಬುದ್ದಿ ಮಾತು ತಿಳಿಸುತ್ತಾನೆ ಅದೇನೆಂದರೆ ದೇವರು ನಮ್ಮ ಜೊತೆ ಬಾಳಲು ಯಾರು ಯೋಗ್ಯರು ಅವರನ್ನು ಮಾತ್ರ ನಮ್ಮ ಜೊತೆ ಸದಾ ಕಾಲ ನಮ್ಮೊಡನೆ ಇರಿಸಲು ಇಚ್ಛಿಸುತ್ತಾನೆ. ನಿನ್ನ ನೈಜ ಪ್ರೀತಿಗೆ ಆಕೆ ಯೊಗ್ಯಳಲ್ಲ ಹಾಗಾಗಿ ಅವಳಿಂದ ನಿಂಗೆ ಹೆಚ್ಚು ನೋವು ಆಗಬಾರದು ಎಂದು ಅವಳನ್ನು ನಿನಿಂದ ದೂರ ಮಾಡಿದ್ದಾನೆ. ಇನ್ನು ನಮ್ಮನ್ನು ಬಿಟ್ಟು ಹೋದವರ ನೆನಪಿನಲ್ಲಿ  ನಮ್ಮ ಅಮೂಲ್ಯವಾದ ಜಿವನವನ್ನು ಹಾಳುಮಾಡಿಕೊಳ್ಳುವುದು ತಪ್ಪು ಎಂದು ಬುದ್ಧಿವಾದ ಹೇಳಿ ಕಿಶೋರ್ ನನ್ನು ಕಳುಹಿಸುತ್ತಾನೆ.