ಮದುವೆಯಾಗಿ ಒಂದೇ ವರ್ಷದಲ್ಲಿ ಪೊಲೀಸ್ ಅತಿಥಿಯಾದ ರವೀಂದ್ರ! ಕಾರಣ ಏನು ಗೊತ್ತಾ?

ಮದುವೆಯಾಗಿ ಒಂದೇ ವರ್ಷದಲ್ಲಿ ಪೊಲೀಸ್ ಅತಿಥಿಯಾದ ರವೀಂದ್ರ! ಕಾರಣ ಏನು ಗೊತ್ತಾ?

ಕಳೆದ ಒಂದು ವರ್ಷ ದಿಂದಲೂ ಕೂಡ ಟ್ರಾರ್ಲರ್ಸ್ ನ ಅತಿಥಿಯಾಗಿರುವ ದಂಪತಿಗಳು ಎಂದರೆ ಅದು ಸ್ಟಾರ್ ಟ್ರೊಲ್ ಕಪಲ್ ಎಂದು ಟಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ನಟಿ ಹಾಗೂ ನಿರೂಪಕಿ "ಮಹಾಲಕ್ಷ್ಮಿ" ಹಾಗೂ ನಿರ್ಮಾಪಕ ಮತ್ತು ನಿರ್ದೇಶಕ "ರವೀಂದ್ರ" ಅವರು ಇದೀಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಇನ್ನೂ ಈ ಜೋಡಿ ಈಗಾಗಲೇ ದಾಂಪತ್ಯ ಜೀವನದಲ್ಲಿ ಬೇಸತ್ತು ಒಬ್ಬಂಟಿಗರಾಗಿ ಕಾಲ ಕಳೆಯುತ್ತಿದ್ದ ವೇಳೆಯಲ್ಲಿ ಸಿನಿಮಾ ವಿಚಾರವಾಗಿ ಇವರಿಬ್ಬರ ಬೇಟಿ ಆಗುತ್ತದೆ. ಇನ್ನೂ ಆ ಬೇಟಿ ಇವರಿಬ್ಬರ ನಡುವೆ ಒಂದು ಸ್ನೇಹವನ್ನು ಕೂಡ ಹುಟ್ಟು ಹಾಕುತ್ತದೆ. ಆ ನಂತರದ ದಿನಗಳಲ್ಲಿ ಇವರಿಬ್ಬರ ಸ್ನೇಹ ಸಲುಗೆಯಾಗಿ ಆ ನಂತರ ಪ್ರೀತಿಯಾಗಿ ಕೂಡ ಬದಲಾಗಿದೆ. ಆ ಪ್ರೀತಿ ಇವರಿಬ್ಬರೂ ಉಳಿಸಿಕೊಳ್ಳಬಲ್ಲರು ಎನ್ನುವ ನಿರ್ಧಾರಕ್ಕೆ ಬಂದ ನಂತರ ಇದೇ ತಿಂಗಳು ಕಳೆದ ಒಂದು ವರ್ಷದ ಹಿಂದೆ ತಿರುಪತಿಯಲ್ಲಿ ಮದುವೆ ಕೊಡ ಆಗಿದ್ದರು.   

ಇನ್ನೂ ಅಂದು ಶುರುವಾದ ಈ ಟ್ರೊಲ್ ಇಂದಿಗೂ ಕೂಡ ನಿಂತಿಲ್ಲ. ಆದ್ರೆ ಈ ಜೋಡಿ ತಮ್ಮಿಬ್ಬರ ಪ್ರೀತಿ ದುಡ್ಡಿಗೆ ಅಥವಾ ಸೌಂದರ್ಯಕ್ಕೆ ಆಗಿರುವುದು ಅಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮೀಡಿಯಾ ಮುಂದೆ ತಿಳಿಸಿದ್ದರು ಕೂಡ  ಅವರ ಎಲ್ಲಾ ಪ್ರಯತ್ನ ವಿಫಲವಾಗಿದೆ. ಆದ್ರೆ ಯಾವುದಕ್ಕೂ ಕೂಡ ಟೀಕೆಯ ಮಾತುಗಳನ್ನು ಕಡಿಮೆ ಆಗಲಿಲ್ಲ. ಹಾಗಾಗಿ ತಮ್ಮ ಪಾಡಿಗೆ ತಾವು ಸಂಸಾರವನ್ನು ಕೊಡ ತೂಗಿಸಿಕೊಂಡು ಹೋಗುತ್ತಿದ್ದರು. ಇನ್ನೂ ಕಳೆದ ವಾರದಲ್ಲಿ ಈ ಜೋಡಿ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಕೂಡ ಆಚರಿಸಿಕೊಂಡರು. ಆ ಸಮಯದಲ್ಲಿ ರವೀಂದ್ರ ಅವರು ಮಹಾಲಕ್ಷ್ಮಿ ಅವರಿಗೆ ಸುಧೀರ್ಘ ಪ್ರೀತಿಯ ಬಗ್ಗೆ ಪತ್ರ ಬರೆದು ಭಾರಿ ಮೊತ್ತದ ಉಡುಗೊರೆಯನ್ನು ಕೂಡ ನೀಡಿದ್ದಾರೆ. ಇನ್ನೂ ಆ ಬಗ್ಗೆ ಮಹಾಲಕ್ಷ್ಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಈ ಸಂಭ್ರಮದಲ್ಲಿ ಮುಳುಗಿದ್ದ ವೇಳೆಯಲ್ಲಿ ಇದೀಗ ರವೀಂದ್ರ ಅವರು ಪೊಲೀಸ್ ಅತಿಥಿಯಾಗಿದ್ದಾರೆ. ಕಾರಣ ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. ಇನ್ನೂ ರವೀಂದ್ರ ಅವರು ಸಿನಿಮಾಗಳಲ್ಲಿ ನಿರ್ದೇಶನ ಹಾಗೂ ನಿರ್ಮಾಣ ಮಾಡುವುದು ಅಲ್ಲದೆ ಬ್ಯುಸಿನೆಸ್ ಕೂಡ ನಡೆಸುತ್ತಿದ್ದರು. ಇನ್ನೂ ಆ ಕಾರಣಕ್ಕೆ ಮಾಧವ ಮೀಡಿಯಾ "ಪ್ರೈ. ಲಿಮಿಟೆಡ್‌ನ ಬಾಲಾಜಿ" ಎನ್ನುವ ಉದ್ಯಮಿಗೆ ರವೀಂದ್ರ ಚಂದ್ರಶೇಖರ್ ಮೋಸ ಮಾಡಿರುವುದಾಗಿ ಪೊಲೀಸ್ ಠಾಣೆಗೆ ದೂರನ್ನು ನೀಡಲಾಗಿದೆ. ಇನ್ನೂ  ರವೀಂದ್ರ ಅವರ "ಲಿಬ್ರಾ ಪ್ರೊಡಕ್ಷನ್ಸ್" ನಿಂದಾ "ಘನತ್ಯಾಜ್ಯದಿಂದ ವಿದ್ಯುತ್" ಉತ್ಪಾದಿಸುವ ಯೋಜನೆ ಶುರು ಮಾಡುವುದಾಗಿ  ಉದ್ಯಮಿ ಬಾಲಾಜಿ ಕಾಪಾರ ಬಳಿ ಸೆಪ್ಟೆಂಬರ್ 2020 ರಲ್ಲಿ 15.38 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದರು. ಆದರೆ, ಹಣ ಪಡೆದು ಎರಡು ವರ್ಷ ಆದರೂ ಕೊಡ ಈ ಯೋಜನೆಯ ಬಗ್ಗೆ ಯಾವ ಮಾತೂ ಕೂಡ ಆಡಿಲ್ಲ ಇತ್ತ ಹಣವನ್ನೂ ಕೂಡ ಹಿಂತಿರುಗಿಸಿಲ್ಲ ಎಂದು ಚೆನ್ನೈ ಪೊಲೀಸ ಬಳಿ ದೂರು ಸಲ್ಲಿಸಿದ್ದಾರೆ. ಇದೀಗ ರವೀಂದ್ರ ಅವರು ಪೊಲೀಸರ ಅತಿಥಿಯಾಗಿದ್ದು ಮುಂದೆ ಈ ಪ್ರಕರಣ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.