ಡ್ರೋನ್ ಪ್ರತಾಪ್ ಆತ್ಮ ಹತ್ಯೆ ವಿಚಾರಕ್ಕೆ ಮೌನ ಮುರಿದ ಚಾನಲ್ ಮುಖ್ಯಸ್ಥ! ಇವರು ಹೇಳೋದು ಏನು ಗೊತ್ತಾ?
ಕಿರು ತೆರೆಯ ರಿಯಾಲಿಟಿ ಶೋ ಗಳ ಪೈಕಿ ದೊಡ್ಡ ಮಟ್ಟದ ಹೆಸರು ಮಾಡಿರುವ ಶೋ ಎಂದರೆ ಅದು ಬಿಗ್ ಬಾಸ್. ಇನ್ನೂ ಈ ರಿಯಾಲಿಟಿ ಶೋ ಅವತರಣಿಕೆಯಲ್ಲಿ ಮೂಡಿ ಬರುತ್ತಿದ್ದರು ಕೊಡ ಈಗ ಎಲ್ಲಾ ಭಾಷೆಯಲ್ಲೋ ಪ್ರಸಾರವಾಗಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಹೇಳಬಹುದು. ಇನ್ನೂ ಸಾಕಷ್ಟು ರಿಯಾಲಿಟಿ ಶೋ ಇದ್ದು ಈ ರಿಯಾಲಿಟಿ ಶೋ ಮಾತ್ರ ಎಲ್ಲದಕ್ಕಿಂತ ವಿಭಿನ್ನ ಎಂದು ಹೇಳಬಹುದು. ಏಕೆಂದ್ರೆ ಈ ರಿಯಾಲಿಟಿ ಶೋ ನಲ್ಲಿ ಹೊರಗಿನ ಪ್ರಪಂಚದ ಅರಿವು ಇಲ್ಲದೆ ಒಂದು ಮನೆಯಲ್ಲಿ ಬಂದಿ ಆಗಿ ತಮ್ಮ ದಿನ ನಿತ್ಯದ ಸೌಕರ್ಯಕ್ಕೆ ಆಟವಾಡಿ ಹೊರಡಿ ಜಗಳ ಆಡಬೇಕು. ಇದರಿಂದ ಇದೊಂದೇ ಮನೆಯಲ್ಲಿ ಜೀವನಕ್ಕೆ ಬೇಕಾಗುವ ಎಲ್ಲಾ ಪಾಠಗಳನ್ನು ಕಲಿಯಬಹುದಾಗಿದೆ.
ಇನ್ನೂ ಮನೋರಂಜನೆಯ ವಿಷಯದಲ್ಲಿ ಬಂದರೆ ವಾರದ ಪೂರ್ತಿ ಧಾರಾವಾಹಿಗಳ ಮುಖಾಂತರ ಮನೋರಂಜನೆಯನ್ನು ನೀಡಿ ವಾರದ ಅಂತ್ಯದಲ್ಲಿ ರಿಯಾಲಿಟಿ ಶೋಗಳು ಪೈಕಿ ಮನೋರಂಜನೆ ನೀಡುತ್ತಾರೆ. ಆದರೆ ಈ ಶೋ ವಾರದ ಪೂರ್ತಿ ಹಾಗೂ ವಾರದ ಅಂತ್ಯದಲ್ಲಿ ದುಪ್ಪಟ್ಟು ಮನೋರಂಜನೆಯನ್ನು ನೀಡಲಾಗುವುದು. ಇದೀಗ ಸೀಸನ್ ಹತ್ತು ಕೊಡ ಇನ್ನೇನು ಅಂತಿಮ ಹಂತದಲ್ಲಿ ಇದೆ. ಈ ಸೀಸನ್ ಮನೋರಂಜನೆಯ ವಿಷಯದಲ್ಲಿ ಕೊಂಚ ಎಡವಿದ್ದರು ಕೊಡ ಟಿ ಆರ್ ಪೀ ವಿಷಯದಲ್ಲಿ ಸಾಕಷ್ಟು ಸದ್ದು ಮಾಡಿದೆ. ಅದ್ರಲ್ಲಿ ಈ ಒಂಬತ್ತು ಸೀಸನ್ ನಲ್ಲಿ ಆಗಿರದ ಘಟನೆಗಳಿಗೆ ಈ ಸೀಸನ್ ಕಾರಣ ಕೊಡ ಆಗಿದೆ ಎಂದು ಹೇಳಬಹುದು.
ಮೊದಲಿಗೆ ಈ ಕನ್ನಡ ಸೀಸನ್ ಗಳಲ್ಲಿ ಅಲ್ಲದೆ ಬೇರೆಯ ಭಾಷೆಯಲ್ಲಿ ಕೊಡ ಮನೆಯಿಂದ ನೇರವಾಗಿ ಯಾರೊಬ್ಬ ಸದಸ್ಯೆ ಕೊಡ ಜೈಲಿಗೆ ಹೋಗಿರಲಿಲ್ಲ. ಹುಲಿ ಉಗುರಿನ ವದಂತಿಯಿಂದ ವರ್ತೂರು ಸಂತೋಷ್ ಅವರು ಜೈಲಿಗೆ ಕೋರ್ಟ್ ಮೆಟ್ಟಿಲು ಏರಿ ಮತ್ತೆ ದೊಡ್ಡ ಮನೆಗೆ ಮರಳಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಅವರು ದೊಡ್ಡ ಮನೆಯಲ್ಲಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ ಎಂದು ನಿನ್ನೆಯಿಂದ ಸುದ್ದಿ ಆಗುತ್ತಿತ್ತು. ಆದ್ರೆ ಛಾನಲ್ ಮುಖ್ಯಸ್ಥ ತಿಳಿಸಿರುವ ಹಾಗೆ ಪ್ರತಾಪ್ ಅವರಿಗೆ ಓವರ್ ಗ್ಯಾಸ್ಟ್ರಿಕ್ ಆಗಿ ಸಾಕಷ್ಟು ಬಾರಿ ವಾಮಿಟ್ ಹಾಗೂ ಲೋಜ್ ಮೋಷನ್ ಆಗಿದ್ದ ಕಾರಣದಿಂದ ಅವರಿಗೆ ಜ್ವರ ಬಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.