ಬ್ಯಾಂಕಾಕ್ ನಲ್ಲಿ ಆ ದಿನ ಏನಾಯ್ತು ಎಂದ ಕೂಡಲೇ ನಿರೂಪಕಿಗೆ ರಾಘು ಖಡಕ್ ಎಚ್ಚರಿಕೆ ಕೊಟ್ಟಿದ್ದು ಹೀಗೆ..!

ವಿಜಯ ರಾಘವೇಂದ್ರ ಅವರು ಅವರ ಪ್ರೀತಿಯ ಮಡದಿ ಸ್ಪಂದನ ಅವರ ಅಗಲಿಕೆ ಇಂದ ಇನ್ನೂ ಕೂಡ ಹೊರಬಂದಿಲ್ಲ, ಹೌದು, ಸ್ಪಂದನ ಅವರು ತೀರಿ ಹೋಗಿ ತಿಂಗಳು ಹತ್ತಿರ ಆಗುತ್ತಿದೆ. ಅವರ ಕುಟುಂಬಸ್ಥರು, ಸ್ಪಂದನ ಅಗಲಿಕೆಯಲ್ಲಿ ನೋವ ಅನುಭವಿಸುತ್ತಿದ್ದಾರೆ. ಸ್ಪಂದನ ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿದಂತಹ ಮಹಿಳೆ ಎಂದು ಹೇಳಬಹುದು..ಸದಾ ಇನ್ನೊಬ್ಬರಿಗೆ ಒಳಿತನ್ನೆ ಬಯಸುವ ಆ ಒಳ್ಳೆಯ ವ್ಯಕ್ತಿತ್ವದ ಜೀವ ಇಂದು ಕಾಣೆಯಾಗಿದೆ. ಕೇವಲ ದೈಹಿಕವಾಗಿ ಮಾತ್ರ ಅವರು ನಮ್ಮ ಜೊತೆಗಿಲ್ಲ, ಬದಲಿಗೆ ಅವರ ನೆನಪಿನಲ್ಲಿ ಸದಾ ಹೀಗೆ ನಮ್ಮ ಜೀವನ ನಡೆಯುತ್ತದೆ ಎಂದು ಅವರ ಪತಿ ನಟ ವಿಜಯ ರಾಘವೇಂದ್ರ ಅವರು ಧೈರ್ಯ ತೆಗೆದುಕೊಳ್ಳುತ್ತಿದ್ದಾರೆ.
ಸ್ಪಂದನ ಅವರ ಅಗಲಿಕೆಯಾದ ನಂತರ ಮೊದಲ ಬಾರಿ ವಿಜಯ ರಾಘವೇಂದ್ರ ಅವರು ಮೊನ್ನೆ ಸಂದರ್ಶನದಲ್ಲಿ ಕಾಣಿಸಿಕೊಂಡರು. ಹಾಗೆ ಅವರ ಹಾಗೂ ಸ್ಪಂದನಾರ ಒಡನಾಟ ಹೇಗಿತ್ತು..? ಅವರಿಬ್ಬರು ಯಾವ ರೀತಿಯಲ್ಲಿ ಇರುತ್ತಿದ್ದರು, ಅವರ ದಾಂಪತ್ಯ ಜೀವನ ಹೇಗಿರುತಿತ್ತು ಎಂಬುದಾಗಿ ಎಲ್ಲಾ ಸಹ ಹೇಳಿದರು. ಸಂದರ್ಶನದಲ್ಲಿ ಮಾತನಾಡುತ್ತಾ ನಿರೂಪಕಿ ಅಂದು ಬ್ಯಾಂಕಾಕ್ ನಲ್ಲಿ ನಿಜಕ್ಕೂ ಏನಾಯಿತು, ನಮಗೆ ಕೇವಲ ಬ್ಯಾಂಕಾಕ್ ಗೆ ಸ್ಪಂದನ ಅವರು ಹೋಗಿದ್ದಾರೆಂಬುದು ಅಷ್ಟೇ ಗೊತ್ತು, ಆ ದಿನ ಏನಾಯಿತು ಎನ್ನಲಾಗಿ ಪ್ರಶ್ನೆ ಕೇಳುತ್ತಾರೆ.
ಆಗ ವಿಜಯ್ ಅವರು ತುಂಬಾನೇ ನೊಂದುಕೊಂಡು ಅದನ್ನು ಪದೇಪದೇ ನನಗೆ ಹೇಳಲು ಆಗುವುದಿಲ್ಲ, ತುಂಬಾನೇ ನೋವಾಗುತ್ತೆ, ತುಂಬಾನೇ ಚುಚ್ಚಿದ ಹಾಗೆ ಆಗುತ್ತೆ, ಎಲ್ಲರೂ ಕೂಡ ಟ್ರಿಪ್ ಹೋಗುತ್ತಾರೆ, ಅದರಲ್ಲಿ ಏನು ವಿಶೇಷತೆ ಇರುತ್ತದೆ, ಅದು ನನ್ನ ಲೈಫ್ ನಾಟ್ ಎ ಕ್ರೈಂ ಸ್ಟೋರಿ, ಕ್ರೈಂ ಸ್ಟೋರಿ ಅಲ್ಲ ಅದನ್ನು ಪದೇ ಪದೇ ಹೇಳಲು ಆಗುವುದಿಲ್ಲ, ತುಂಬಾನೇ ಚುಚ್ಚುತ್ತದೆ ಎಂದು ಪ್ರತಿಕ್ರಿಯಿಸಿದರು..ಆ ಸಂದರ್ಭದಲ್ಲಿ ನನಗೆ ಹೆಗಲು ಕೊಟ್ಟ ಸಾಕಷ್ಟು ಜನರಿಗೆ ನಾನು ಕೃತಜ್ಞತೆ ತಿಳಿಸುತ್ತೇನೆ.
ಸ್ಪಂದನ ಕೇವಲ ನನಗೆ ಮಾತ್ರ ಅಲ್ಲ, ನಮ್ಮ ಇಡೀ ಕುಟುಂಬಕ್ಕೆ, ನಮ್ಮ ತಂದೆ ತಾಯಿಗೆ, ಅವರ ತಂದೆ ತಾಯಿಗೆ ಎಲ್ಲರಿಗೂ ಕೂಡ ಬೇಕಾದಂತಹ ಪ್ರೀತಿಯ ಜೀವ ಆಕೆಯದ್ದು. ಎಲೆಕ್ಷನ್ ಸಂದರ್ಭದಲ್ಲಿ ಆಕೆ ಏನು ಮಾಡಿ ಹೋಗಿದ್ದಾಳೆ ಎಂಬುದು ಬೆಳ್ತಂಗಡಿ ಕ್ಷೇತ್ರದಲ್ಲಿ ಎಲ್ಲರಿಗೂ ಗೊತ್ತು. ನೀವು ಏಕೆ ಎಲೆಕ್ಷನ್ ನಿಲ್ಲಬಾರದು ಎನ್ನುವ ಮಟ್ಟಕ್ಕೆ ಆಕೆ ಕೆಲಸ ಮಾಡಿದಳು, ಅಂತಹ ವ್ಯಕ್ತಿತ್ವ ಅದು ಎಂದು ಸ್ಪಂದನ ಬಗ್ಗೆ ನಟ ವಿಜಯ ರಾಘವೇಂದ್ರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ. ನಿರೂಪಕಿ ಕೇಳಿದ ಪ್ರಶ್ನೆಗೆ ವಿಜಯ ರಾಘವೇಂದ್ರ ಅವರು ಖಡಕ್ಕಾಗಿಯೆ ನೋವಾಗುತ್ತದೆ ಪದೇ ಪದೇ ಅದನ್ನೇ ಕೇಳಬೇಡಿ ಎಂದು ತಮ್ಮ ನೋವಿನ ಮೂಲಕವೇ ಎಚ್ಚರಿಕೆಯ ನೀಡಿದಂತಿದೆ ಈ ವಿಡಿಯೋ ದೃಶ್ಯ..
ಈ ನ್ಯೂಸ್ ಚಾನೆಲ್ ನವರೇ ಹಾಗೆ ಅವರ ಮನೆಯಲ್ಲಿ ಏನಾದರೂ ಈ ರೀತಿ ಸಂದರ್ಭ ಎದುರಾದರೆ ಅವರಿಗೆ ಆ ನೋವು ಎಷ್ಟು ಇರುತ್ತದೆ ಎಂಬುದು ಗೊತ್ತಾಗುತ್ತದೆ. ಈ ರೀತಿ ಪದೇಪದೇ ವಿಜಯ್ ಅವರಿಗೆ ಪ್ರಶ್ನೆ ಮಾಡಿ ಕಣ್ಣೀರ ತರಿಸಬೇಡಿ ಎಂಬುದಾಗಿ ಹೇಳಿ ನೆಟ್ಟಿಗರು ಅಪೇಕ್ಷೆ ವ್ಯಕ್ತಪಡಿಸುತ್ತಿದ್ದಾರೆ..