16 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಐಶ್ವರ್ಯ ರೈ..? ಅಂಥದ್ದೇನಾಯ್ತು ನೋಡಿ

16 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಐಶ್ವರ್ಯ ರೈ..?  ಅಂಥದ್ದೇನಾಯ್ತು ನೋಡಿ

ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈ ಅವರು ಇದೀಗ ತಮ್ಮ 16 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಬಾಲಿವುಡ್ ನ ನಟ ಅಮಿತಾ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯ ರೈ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಪೋಸ್ ಮಾಡಿ ತಂದೆ ತಾಯಿ ಒಪ್ಪಿಗೆ ಪಡೆದು 2007ರಲ್ಲಿ ಮದುವೆಯಾಗಿದ್ದರು.. ಈ ದಂಪತಿಗಳಿಗೆ 2011ರಲ್ಲಿ ಒಂದು ಹೆಣ್ಣು ಮಗು ಕೂಡ ಜನನ ಆಗಿದೆ. ಸುಖವಾದ ಸಂಸಾರ, ಒಳ್ಳೆಯ ಗಂಡ, ಅತ್ತೆ ಮಾವ, ಆಸ್ತಿ ಅಂತಸ್ತು ಯಾವುದಕ್ಕೂ ಕೂಡ ಇವರಿಗೆ ಕಡಿಮೆ ಇರಲಿಲ್ಲ. ಸುಮಾರು 3000 ಕೋಟಿ ಅಮಿತಾ ಬಚ್ಚನ್ ಅವರ ಆಸ್ತಿ ಇದೆಯಂತೆ. ಇದೀಗ ಇದ್ದಕಿದ್ದಂತೆ ನಟಿ ಐಶ್ವರ್ಯ ರೈ ಅವರು ಗಂಡನ ಮನೆಯನ್ನು ಬಿಟ್ಟು ತನ್ನ ತಾಯಿ ಮನೆಯನ್ನು ಸೇರಿದ್ದಾರೆ. ಅದಕ್ಕೆ ಕಾರಣ ಕೂಡ ತಿಳಿದುಬಂದಿದ್ದು, ಇದೀಗ ಐಶ್ವರ್ಯ ರೈ ಅವರು ಗಂಡನ ಮನೆ ಬಿಟ್ಟು ಹೊರಬರಲು ಕಾರಣ ಅವರ ಪತಿ ಅಭಿಷೇಕ್ ಬಚ್ಚನ್ ಅಲ್ಲ, ಬದಲಿಗೆ ಅಭಿಷೇಕ್ ಬಚ್ಚನ್ ಅವರ ತಾಯಿ ಜಯ ಬಚ್ಚನ್ ಎಂದು ಕೇಳಿ ಬಂದಿದೆ.  

ಜಯ ಬಚ್ಚನ್ ಮತ್ತು ಐಶ್ವರ್ಯ ರೈ ಅವರಿಗೆ ಕೆಲವು ದಿನಗಳಿಂದ ಆಗಿ ಬರುತ್ತಿರಲಿಲ್ಲ. ಇತ್ತೀಚಿಗಷ್ಟೇ ಜಯ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಗಂಡನ ಜೊತೆ ಸ್ವಲ್ಪ ಗಲಾಟೆ ಮಾಡಿಕೊಂಡು ಬಂದು ಜಲ್ಸ ಎನ್ನುವ ಅಮಿತಾ ಬಚ್ಚನ್ ಮನೆಯಲ್ಲಿಯೇ ವಾಸವಿದ್ದರಂತೆ. ಹಾಗೆ ಸಾರ್ವಜನಿಕವಾಗಿ ಜಯ ಬಚ್ಚನ್ ಅವರು ತುಂಬಾನೇ ಕೋಪಿಷ್ಟೆ ಎಂಬಂತೆ ಕೇಳಿ ಬಂದಿದ್ದು, ಅದು ಮನೆಯಲ್ಲೂ ಕೂಡ ಮುಂದುವರೆದಿದೆ ಅಂತ ಕಾಣುತ್ತೆ,  ಐಶ್ವರ್ಯ ರೈ ಮತ್ತು ಅವರಿಗೂ ಆಗಾಗ ಕುಟುಂಬದಲ್ಲಿ ಕೆಲ ವಿಚಾರಗಳಿಗೆ ಕಲಹ ಗಲಾಟೆ ಆಗುತ್ತಿತ್ತಂತೆ. 

ಮಗಳು ಶ್ವೇತಾ ಬಚ್ಚನ್ ಗೆ ಅಮಿತಾ ಬಚ್ಚನ್ ಒಂದು ಪಾಲು ಮಾಡಿದ್ದು ಮಗ ಅಭಿಷೇಕ್ ಗೆ ಇನ್ನೊಂದು ಪಾಲು ಮಾಡಿ ತಮ್ಮ ಮೂರು ಸಾವಿರ ಕೋಟಿಯ ಆಸ್ತಿಯಲ್ಲಿ ಹಂಚಲು ಪ್ಲಾನ್ ಮಾಡಿದ್ದರಂತೆ. ಇಬ್ಬರಿಗೂ ಸಮ ಅರ್ಧ ಹಂಚುವುದಾಗಿ ಹೇಳಿದ್ದರು ಎನ್ನಲಾಗಿದ್ದು ಅದು ಕೂಡ ಒಂದು ಕಡೆ ಕಾರಣ ಆಗಿರಬಹುದು. ಅಥವಾ ಜಯಾ ಬಚ್ಚನ್ ಜೊತೆ ಹೊಂದಿಕೊಳ್ಳಲಾಗದೆ ಐಶ್ವರ್ಯ ರೈ ತಮ್ಮ ಮಗಳ ಜೊತೆ ತಾಯಿ ಮನೆಯ ಸೇರಿರಬಹುದು. ಇದೀಗ ಗಂಡನ ಮನೆಯನ್ನು ಬಿಟ್ಟು 16 ವರ್ಷದ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ ಐಶ್ವರ್ಯ ರೈಎಂದು ತಿಳಿದುಬಂದಿದೆ.

ಅಸಲಿಗೆ ಐಶ್ವರ್ಯ ರೈ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಇನ್ನು ಯಾವ ಯಾವ ಕಾರಣಗಳು ಇದಕ್ಕೆ ಪುಷ್ಟಿ ನೀಡಿವೆ ಗೊತ್ತಾ..? ಜೊತೆಗೆ ಈಗಾಗಲೇ ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದ ಪ್ರಕಾರ ಗಂಡನ ಮನೆ ಬಿಟ್ಟು ಐಶ್ವರ್ಯ ರೈ ಅವರು ಹೊರಬರಲು ಇನ್ನೂ ಹೆಚ್ಚು ಕಾರಣಗಳು ಈ ವಿಡಿಯೋದಲ್ಲಿವೆ ನೋಡಿ. ಈಗಾಗಲೇ ಅಮಿತಾ ಬಚ್ಚನ್ ಅವರು ಕೂಡ ಐಶ್ವರ್ಯ ರೈ ಅವರನ್ನು ಸಾಮಾಜಿಕ ಜಾಲತಾಣಗಳ ಅವರ ಖಾತೆಗಳಿಂದ ಅನ್ ಫಾಲೋ ಮಾಡಿದ್ದಾರಂತೆ. ಜೊತೆಗೆ ಅಭಿಷೇಕ್ ಬಚ್ಚನ್ ಸಹ ಮದುವೆ ಆದಮೇಲೆ ಕೈಯಲ್ಲಿ ಉಂಗುರವನ್ನು ಹಾಕಿಕೊಂಡಿದ್ದು ಸದಾ ಅದು ಇರುತ್ತಿತ್ತು ಇದೀಗ ಅದು ಅವರ ಕೈಯಲ್ಲಿ ಕಾಣುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ತೊಟ್ಟಿಲ್ಲ ಅದು ಕಾಣುತ್ತಿಲ್ಲ ಎನ್ನಲಾಗಿ ಸ್ಪಷ್ಟವಾಗಿ ಇವರ ಕುಟುಂಬದಲ್ಲಿ ಗಲಾಟೆ ಆಗಿದೆ ಎಂದು ತೋರಿಸಿದೆ. ಇಲ್ಲಿದೆ ನೋಡಿ ಸಂಕ್ಷಿಪ್ತವಾಗಿ ತಿಳಿಸುವ ಒಂದು ಸಣ್ಣ ಪ್ರಯತ್ನದ ವಿಡಿಯೋ.. ಪೂರ್ತಿ ನೋಡಿ...ಹಾಗೆ ವಿಡಿಯೋ ಶೇರ್ ಮಾಡಿ..