ಮಗನ ಬಗ್ಗೆ ಮಾತನಾಡಿದ ರಾಘು ಇದೀಗ ಯಾರ ಜೊತೆ ಇದ್ದಾನಂತೆ ಗೊತ್ತಾ ಶೌರ್ಯ..? ಕಣ್ಣೀರು ಹಾಕಿದ ರಾಘು

ಮಗನ ಬಗ್ಗೆ ಮಾತನಾಡಿದ ರಾಘು ಇದೀಗ ಯಾರ ಜೊತೆ ಇದ್ದಾನಂತೆ ಗೊತ್ತಾ ಶೌರ್ಯ..? ಕಣ್ಣೀರು ಹಾಕಿದ ರಾಘು

ನಟ ವಿಜಯ ರಾಘವೇಂದ್ರ ಅವರು ಅವರ ಪ್ರೀತಿಯ ಮಡದಿ ಸ್ಪಂದನ ಅವರ ಅಗಲಿಕೆಯಲ್ಲಿ ತುಂಬಾನೇ ನೋವಿಗೆ ಒಳಗಾಗಿದ್ದಾರೆ. ದೇವರು ಇಂತಹ ನಿರ್ಧಾರ, ಅದು ನಮ್ಮ ಕುಟುಂಬದಲ್ಲಿ ಏಕೆ ತೆಗೆದುಕೊಂಡು ಬಿಟ್ಟ. ಅತಿ ಸಣ್ಣ ವಯಸ್ಸಿಗೆ ಎಲ್ಲಾ ಹಂತದಲ್ಲೂ ನನ್ನ ಜೊತೆಗೆ ನಿಂತುಕೊಂಡಿದ್ದ ಸ್ನೇಹಿತೆಯಂತ ನನ್ನ ಮಡದಿಯನ್ನು ನನ್ನಿಂದ ಕಸಿದುಕೊಂಡು ಬಿಟ್ಟ ಎಂದು ಕಣ್ಣೀರಿಡುತ್ತಾ ಚಿಂತೆ ಮಾಡುವುದ ಬಿಟ್ಟರೆ ರಾಘುಗೆ ಬೇರೆ ದಾರಿಯೇ ಇಲ್ಲ, ನೋವ ಮರೆಯಬೇಕು ಆ ಶಕ್ತಿ ದೇವರು ಅವರಿಗೆ ಕರುಣಿಸಲಿ ಎಂದು ಕೇಳಿಕೊಳ್ಳೋಣ.. ದೇವರನ್ನ ನಾವು ದೂಷಿಸುವುದಕ್ಕೆ ಆಗುವುದಿಲ್ಲ, ದೇವರ ಮೇಲೆ ಕೋಪಗೊಳ್ಳುವುದಕ್ಕೂ ಆಗುವುದಿಲ್ಲ, ಇಂತಹ ಕೆಟ್ಟ ನಿರ್ಧಾರ ಮಾಡಿದ ಆ ದೇವರು, ನಮ್ಮ ಮೇಲೆ ಯಾಕೆ ಈ ರೀತಿ ಅಸ್ತ್ರ ಪ್ರಯೋಗ ಮಾಡಿದ ಎಂದು ನಾವು ಪ್ರಶ್ನೆ ಮಾಡಲು ಕೂಡ ಆಗುವುದಿಲ್ಲ ಎನ್ನುವ ನಿಟ್ಟಿನಲ್ಲಿ ನಟ ರಾಘು ಅವರು ಮಾತನಾಡಿದ್ದಾರೆ.

ಜೀವನ ಅಂದರೆ ಹಾಗೇನೇ, ಯಾವಾಗ ಯಾರ ಜೀವನದಲ್ಲಿ ಏನಾಗುತ್ತದೆ ಎಂದು ಹೇಳಲು ಆಗದು. ಅಂತಹದ್ದೇ ಮಾತುಗಳನ್ನು ಇದೀಗ ರಾಘು ಅವರು ಹೇಳಿದ್ದು ಸ್ಪಂದನ ನೆನಪಿನಲ್ಲಿ ಜೀವನ ಸಾಗಿಸಬೇಕು, ನನ್ನ ಪ್ರತಿಯೊಂದು ಹಂತದಲ್ಲಿ ನನ್ನನ್ನ ಸ್ಪಂದನ ಆವರಿಸಿಕೊಂಡು ಬಿಟ್ಟಿದ್ದಾಳೆ. ಹಾಗೆ ಅವಳು ಕಂಡಿದ್ದ ಕನಸನ್ನು, ಹಾಗೆ ಮಗನ ಬಗ್ಗೆ ಅಂದುಕೊಂಡ ರೀತಿಯೇ ನನ್ನ ಮಗನನ್ನು ಕೂಡ ಬೆಳೆಸುವ ಕೆಲಸ ನನ್ನ ಮೇಲೆ ಇದೆ ಎಂದು ಮೊನ್ನೆ ಟಿವಿ9 ಖಾಸಗಿ ಮಾಧ್ಯಮದಲ್ಲಿ ಹೇಳಿಕೊಂಡರು. ನಟ ರಾಘು ಅವರು ಇದರಿಂದ ಹೊರಬರಲು ಸಮಯ ಬೇಕು, ಅಷ್ಟರಲ್ಲಿ ಸಂದರ್ಶನಕ್ಕೆ ಬಂದು ಅವರ ಮತ್ತು ಸ್ಪಂದನಾರ ನಡುವಿನ ಒಡನಾಟ ಹೇಗಿತ್ತು ಎಂಬುದಾಗಿ ಒಂದೊಂದೇ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 

ಹೌದು ತಮ್ಮ ಮಗನ ಬಗ್ಗೆಯೂ ಕೂಡ ಮಾತನಾಡಿದ ರಾಘು ಅವರು ಶೌರ್ಯ ತುಂಬಾನೇ ಗಟ್ಟಿ ಇದ್ದಾನೆ, ಅವರ ತಾಯಿಯಂತೆಯೇ ಅವನು ಕೂಡ ಎಂದರು. ಹಾಗೆ ಅವನು ಹೆಚ್ಚು ಮಾತನಾಡುವುದಿಲ್ಲ, ಎಲ್ಲವನ್ನು ಕೂಡ ದೂರದಿಂದಲೇ ಆಬ್ಸರ್ವ್ ಮಾಡುತ್ತಿರುತ್ತಾನೆ. ನನ್ನನ್ನು ಕೂಡ ನೋಡುತ್ತಾನೆ, ಆದರೆ ಏನು ಪ್ರತಿಕ್ರಿಯೆ ಕೊಡುವುದಿಲ್ಲ, ಹೆಚ್ಚು ಮಾತನಾಡದೆನೇ ಗಟ್ಟಿಯಾಗಿ ಇರುತ್ತಾನೆ. ಅವನನ್ನು ಗೌರವದಿಂದ ಬೆಳೆಸಬೇಕೆಂದು  ಸ್ಪಂದನ ಆಸೆಯಾಗಿತ್ತು. ಇದೀಗ ಶೌರ್ಯ ಒಬ್ಬನೇ ತನ್ನೆಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾನೆ, ಶಾಲೆಗೆ ಹೋಗುತ್ತಿದ್ದಾನೆ. ನಮ್ಮ ತಮ್ಮ ಶ್ರೀ ಮುರುಳಿಯ ಮಕ್ಕಳ ಜೊತೆ ಶೌರ್ಯ ಸಮಯ ಕಳೆಯುತ್ತಿದ್ದಾನೆ ಎಂದು ದಿನನಿತ್ಯದ ಈಗಿನ ಸ್ಪಂದನ ಅವರಿಲ್ಲದ ಸಮಯದ ಬಗ್ಗೆ ರಾಘು ಅವರು ಹೇಳಿಕೊಂಡರು. ಇಲ್ಲಿದೆ ನೋಡಿ ಆ ವಿಡಿಯೋ. ರಾಘು ಅವರು ಆದಷ್ಟು ಬೇಗನೆ ಇದರಿಂದ ಹೊರಗೆ ಬರಲು ಹೆಚ್ಚು ಶಕ್ತಿ ಕೊಡಲಿ ಆ ದೇವರು ಎಂದು ಕೇಳಿಕೊಳ್ಳಿ. ವಿಡಿಯೋ ನೋಡಿ, ಮೆಚ್ಚುಗೆ ತಿಳಿಸಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಧನ್ಯವಾದಗಳು...