ನಾನು ನನ್ನ ಅಪ್ಪ ಅಮ್ಮನ ಮಗ ಸನಾತನದ ಮಗ ಅಲ್ಲಾ ಎಂದ ಪ್ರಕಾಶ್ ರಾಜ್! ಈ ರೀತಿ ಹೇಳಿಕೆಯ ಕಾರಣ ಏನು ಗೊತ್ತಾ?

ನಾನು ನನ್ನ ಅಪ್ಪ ಅಮ್ಮನ ಮಗ ಸನಾತನದ ಮಗ ಅಲ್ಲಾ ಎಂದ ಪ್ರಕಾಶ್ ರಾಜ್! ಈ ರೀತಿ ಹೇಳಿಕೆಯ ಕಾರಣ ಏನು ಗೊತ್ತಾ?

ನಮ್ಮ ಬಣ್ಣದ ರಂಗದಲ್ಲಿ ಹೆಚ್ಚು ಟೀಕೆಗಳ ಮಾತು ಹೆಚ್ಚುತ್ತಲೇ ಇದೆ. ನಮ್ಮ ಹಿಂದಿನ ಕಾಲದಲ್ಲಿ ತಾವು ತಮ್ಮ ನಟನೆ ಎಂದು ಬದುಕುತ್ತಿದ್ದ ನಟರ ನಡುವೆ ಇಂದು ಕಲಾವಿದರ ನಡುವೆ ಜಿದ್ದ ಜಿದ್ದಿ ಶುರುವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಕೆಲವೊಂದು ಕಲಾವಿದರ ಬಳಿ ವಾಗ್ವಾದ ಆಗುವಂತಹ ಸನ್ನಿವೇಶಗಳು ಕೊಡ ನಮ್ಮಲ್ಲಿ ಸಾಕಷ್ಟಿದೆ. ಮುಂಚೆ ಕಲಾವಿದರ ನಡುವೆ ಎಷ್ಟೇ ವೈಮನಸ್ಯ ಇದ್ದರೂ ಕೂಡ ಬಹಿರಂಗವಾಗಿ ಏನನ್ನು ಹೇಳಿಕೊಳುತ್ತಿರಲಿಲ್ಲ. ಆದರೆ ಇದೀಗ ಕೆಲ ಕಲಾವಿದರು ಕೇವಲ ಮತ್ತೊಬ್ಬರನ್ನು ಟೀಕಿಸಲು ಶುರು ಮಾಡಿಕೊಂಡಿದ್ದಾರೆ.  

ಹೀಗೆ ಟೀಕಿಸುವ ಕಲಾವಿದರು ಎಂದಂತೆ ನಮ್ಮ ತಲೆಗೆ ಬರುವ ಹೆಸರು ಎಂದರೆ ಅದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೇಳುವುದು ಆದರೆ "ಪ್ರಕಾಶ್ ರಾಜ್ ಹಾಗೋ ಚೇತನ್". ಈ ಎರಡು ಕಲಾವಿದರು ನಮ್ಮಲ್ಲಿ ನಡೆಯುವ ಎಲ್ಲಾ ಸನ್ನಿವೇಶಕ್ಕೂ ಒಂದೊಂದು ಟೀಕಿಸುವ ಮಾತನ್ನು ಹೇಳುತ್ತಾ ಬರುತ್ತಿದ್ದಾರೆ. ಇದೀಗ ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು "ಪ್ರಕಾಶ್ ರಾಜ್ " ಅವರು ಇಂದಿನ ಸಭೆಯಲ್ಲಿ ಸನಾತನದ ಬಗ್ಗೆ ತಿಳಿಸಿರುವ ವಿಚಾರ. ಆ ವೇದಿಕೆಯಲ್ಲಿ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಪ್ರಕಾಶ್ ರಾಜ್ ಅವರು ಏನು ಹೇಳಿದ್ದಾರೆ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.

ಇಂದು ಖ್ಯಾತ "ಗೌರಿ ಲಂಕೇಶ್ " ಅವರು ಕೊಲೆಯಾಗಿ ಆರನೇ ವರ್ಷಕ್ಕೆ ಕಾಲಿಟ್ಟಿದೆ. ಆದರೆ ಈ ಆರು ವರ್ಷಗಳು ಆಗಿದ್ದರು ಕೊಡ ಇಂದಿಗೂ ಇವರ ಕೆಸ್ ಬಗೆಹರಿದಿಲ್ಲ. ಆದರೆ ಅವರ ನೆನಪಿನ ಆಚರಣೆಗೆ ಬೆಂಗಳೂರಿನಲ್ಲಿ ನಾನು ಗೌರಿ ಹಾಗೂ ನಾವೆಲ್ಲ ಗೌರಿ ಎನ್ನುವ ಹೆಸರಿನಲ್ಲಿ ಸಭೆಯನ್ನು ಏರ್ಪಾಟು ಮಾಡಲಾಗಿತ್ತು. ಈ ಸಭೆಗೆ ಮುಖ್ಯ ಅತಿಥಿಯಾಗಿ ಬಂದ ಪ್ರಕಾಶ್ ರಾಜ್ ಅವರು ಸನಾತನದ ಬಗ್ಗೆ ಮಾತನಾಡಿದರು. ಈ ಹಿಂದೆ "ಮೋದಿಜಿ" ಅವರು ಸನಾತನ ಭವನದ ಪೂಜೆ ಸಲ್ಲಿಸಿದರು. ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಪ್ರಕಾಶ್ ರಾಜ್ ಅವರು ತಮ್ಮ ಟ್ವಿಟರ್ ನಲ್ಲಿ ಸನಾತನಿ ಸಂಸತ್ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ನೀವು ಸನಾತನಿ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರಕಾಶ್ ಅವರು ನಾನು ನನ್ನ ಅಪ್ಪ ಅಮ್ಮನ ಮಗ ಸನಾತನಕ್ಕೆ ಅಲ್ಲ ಎಂದು ಟ್ವೀಟ್ ಮಾಡಿದ್ದರು.  ಹಾಗೆಯೇ ನಾನು ಮೋದಿ ಅವರ ವಿರೋಧಿ ಸನಾತನದ ವಿರೋಧಿ ಅಲ್ಲ ಎಂದು ಕೂಡ ತಿಳಿಸಿದ್ದಾರೆ.