ನಟಿ ಲಕ್ಷ್ಮಿ ಮಗಳಿಗೆ ಕಿರುಕುಳ: ಖಾಸಗಿ ವಿಡಿಯೋ ಕಳುಹಿಸಿ ಕಾಟ ಕೊಟ್ಟ ಕಾಮುಕರು

ನಟಿ ಲಕ್ಷ್ಮಿ ಮಗಳಿಗೆ ಕಿರುಕುಳ: ಖಾಸಗಿ ವಿಡಿಯೋ ಕಳುಹಿಸಿ ಕಾಟ ಕೊಟ್ಟ ಕಾಮುಕರು

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟತೆ ಹಾಗೂ ನಟನೆ ಮೂಲಕ ಗುರುತಿಸಿಕೊಂಡಿರುವ ಹಿರಿಯ ನಟಿ ಲಕ್ಷ್ಮಿಯವರ ಪುತ್ರಿ ಐಶ್ವರ್ಯ, ಕೆಲವು ಸಿನಿಮಾಗಳಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸಿದ್ದಾರೆ. ಆದರೆ ಸರಿಯಾದ ಅವಕಾಶ ಸಿಗದೇ, ಅವರು ಸಿನಿಮಾ ಮತ್ತು ಕಿರುತೆರೆಯಿಂದ ದೂರ ಉಳಿದಿದ್ದಾರೆ.

ಐಶ್ವರ್ಯ ಅವರು ತಮ್ಮ ಜೀವನ ಸಾಗಿಸಲು (ಹೊಟ್ಟೆಪಾಡಿಗಾಗಿ) ಸಾಬೂನು ಮಾರಾಟ ಮಾಡುತ್ತಿದ್ದಾರೆ. ಆನ್ಲೈನ್ ಮೂಲಕ ಸಾಬೂನು ಮಾರಾಟ ಮಾಡಲು ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿರುವ ಕಾರಣ, ಕೆಲವು ಕಾಮುಕರು ಆ ಸಂಖ್ಯೆಯನ್ನು ಕೆಟ್ಟದಾಗಿ ಬಳಸುತ್ತಿದ್ದಾರೆ.

ಗ್ರಾಹಕರೊಂದಿಗೆ ಆರ್ಡರ್ ಪಡೆಯಲು ತಮ್ಮ ಫೋನ್ ನಂಬರ್ ಅನ್ನು ಹಂಚಿಕೊಂಡಿದ್ದು ತಪ್ಪಾಯಿತಾ ಎಂಬುದಾಗಿ, ತಮಗೆ ಆಗಿರುವ ಕಿರುಕುಳದ ಬಗ್ಗೆ ಸಂಪೂರ್ಣವಾಗಿ ತಮ್ಮದೇಯಾದ ಯೂಟ್ಯೂಬ್ ಚಾನಲ್ ನಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಬೇಸರ ಹೊರಹಾಕಿದ್ದಾರೆ.

ಕೆಲ ಪುಂಡರು ಅನುಚಿತವಾಗಿ ಮೆಸೇಜ್ ಮಾಡುವುದಲ್ಲದೆ, ತಮ್ಮ ಖಾಸಗಿ ಭಾಗದ ವಿಡಿಯೋ ಮತ್ತು ಫೋಟೋಗಳನ್ನು ವಾಟ್ಸಾಪ್ನಲ್ಲಿ ಕಳುಹಿಸುತ್ತಿದ್ದಾರೆ. ಎಲ್ಲವು ಕೂಡ ತಮ್ಮ ಬಳಿ ಇವೆ, ಇದನ್ನು ಇಟ್ಟುಕೊಂಡು ಸೈಬರ್ ಕ್ರೈಮ್ ಗೆ ಹೋಗಲು ಬಯಸುವುದಿಲ್ಲ. ಆದ್ರೆ, ಇದೇ ರೀತಿ ಇವರ ಕಿರುಕುಳ ಮುಂದುವರೆದರೆ ಖಂಡಿತ ಇದರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.