2024 ರಲ್ಲಿ ಮಹಾನ್ ವ್ಯಕ್ತಿಗಳಿಗೆ ಸಂಕಷ್ಟ ಹಾಗೂ ಸಾವು ಕೊಡ ಸಂಭವಿಸಲಿದೆ ಎಂದ ಕೊಡಿ ಸ್ವಾಮೀಜಿ! ಇವರ ಭವಿಷ್ಯ ಹೇಳೋದು ಏನು ಗೊತ್ತಾ?
ಇನ್ನೂ ನಮ್ಮ ಕರ್ನಾಟಕದ ರಾಜ್ಯದಲ್ಲಿ ಹೆಚ್ಚಾಗಿ ಕೊಡಿ ಮಠದ ಸ್ವಾಮೀಜಿ ಅವರ ಭವಿಷ್ಯ ವಾಣಿಯನ್ನು ಹೆಚ್ಚಾಗಿಯೇ ಜನರು ಅನುಸರಿಸುತ್ತಾರೆ ಎಂದರೆ ತಪ್ಪಾಗಲಾರದು. ಕಾರಣ ಇವರು ಹೇಳುವ ಭವಿಷ್ಯ ಬಹುತೇಕ ನಿಜವಾಗಿದ್ದು ಎಲ್ಲವು ಕೊಡ ಈಗ ಕಾರ್ಯ ರೂಪದಲ್ಲಿ ಇದೆ. ಹಾಗಾಗಿ ಇವರ ಭವಿಷ್ಯಕ್ಕೆ ಹೆಚ್ಚಿನ ನಂಬಿಕೆ ಇದೆ ಎಂದ್ರೆ ತಪ್ಪಾಗಲಾರದು. ಇನ್ನೂ ಇವರು ಭವಿಷ್ಯ ನುಡಿಯುತ್ತೀರುವುದು ಇದೇನು ಹೊಸದಲ್ಲ. ಆದ್ರೆ ಆಗ ಅಪರೂಪಕ್ಕೆ ಕ್ಯಾಮರಾ ಮುಂದೆ ಬಂದು ಭವಿಷ್ಯ ನುಡಿಯುತ್ತಿದ್ದ ಕೊಡಿ ಮಠದ ಸ್ವಾಮೀಜಿ ಈಗಂತೂ ಆಗಾಗ ಬಂದು ಜಗತ್ತಿನ ಅಂತ್ಯದ ಮುನ್ಸೂಚನೆ ನೀಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಇನ್ನೂ ನಾಲ್ಕು ವರ್ಷದ ಹಿಂದೆ ಇವರು ತಿಳಿಸಿರುವ ಹಾಗೆ 100 ವರ್ಷಕ್ಕೆ ಒಮ್ಮೆ ಬರುವ ಸಾಂಕ್ರಾಮಿಕ ರೋಗದಿಂದ ನಮ್ಮ ಪ್ರಪಂಚ ಹೊಡೆತ ಅನುಭವಿಸುತ್ತದೆ ಎಂದು ತಿಳಿದಿದ್ದರೂ ಇನ್ನೂ ಅವರು ಹೇಳಿದಂತೆ ಕರೋನ ಕಾರಣದಿಂದ ಇಡೀ ದೇಶವೇ ಸ್ತಬ್ಧವಾಗಿತ್ತು. ಹಾಗೆಯೇ ಇಂದಿಗೂ ಆ ರೋಗದ ಹೊಡೆತದಿಂದ ನಾವಿನ್ನೂ ಸುಧಾರಣೆ ಕಂಡಿಲ್ಲ. ಹೀಗಿರುವಾಗ ಮತ್ತೆ ಕೊಡಿ ಮಠದ ಸ್ವಾಮೀಜಿ ಅವರು ಭವಿಷ್ಯ ನೀಡಿದ್ದಾರೆ. ಇನ್ನೂ ಈಗ ಆಡಳಿತದಲ್ಲಿ ಇರುವ ಕಾಂಗ್ರೆಸ್ ಸರ್ಕಾರದಿಂದ ನಮ್ಮ ಪ್ರಪಂಚ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಹಾಗೆಯೇ ಇದರಿಂದ ಬೇಸತ್ತ ಜನರಿಂದ 2024 ಮುಗಿಯುವ ಹೊತ್ತಿನಲ್ಲಿ ಸಿದ್ದು ಅವರ ಸರ್ಕಾರಕ್ಕೂ ಕೊಡ ಸಂಕಷ್ಟ ಎದುರಾಗಲಿದೆ.
ಇದೀಗ ಸಂಕ್ರಾತಿ ಹಾಗೂ ಹೊಸ ವರ್ಷದ ಹೊಸ್ತಿಲಲ್ಲಿ ಇರುವ ಜನತೆಗೆ ಕೊಡಿ ಮಠದ ಸ್ವಾಮೀಜಿ ಕರಾಳ ಭವಿಷ್ಯ ನೀಡಿದ್ದಾರೆ. ಆ ವಿಚಾರವಾಗಿ ಕೊಡಿ ಮಠದ ಸ್ವಾಮೀಜಿ "ನಮ್ಮ ದೇಶವನ್ನು ಆಳ್ವಿಕೆ ಮಾಡುತ್ತಿರುವವರು ಎಚ್ಚರ ವಹಿಸಬೇಕು. ಎಚ್ಚರ ವಹಿಸದೆ ಇದ್ದರೆ ಮುಂದೆ ಧುರ್ಘಟನೆ ತಪ್ಪಿಸಲು ಸಾದ್ಯವಿಲ್ಲ. ಹೀಗೆ ಕಾಲ ಕಳೆದಂತೆ ಪರಿಸ್ಥಿತಿ ಎಲ್ಲ ಪ್ರಶ್ನೆಗೆ ಉತ್ತರ ನೀಡುವುದು . ಮುಂದಿನ ಪೀಳಿಗೆ ತಮ್ಮ ಜೀವನ ಆಡಂಬರ ವಾಗಿ ಇರಬಾರದು ಇಲವಾದಲ್ಲಿ ಆರ್ಥಿಕ ಹೊರೆ ಹೆಚ್ಚಾಗಲಿದೆ. ಇತ್ತ ಅದ್ಯಾತ್ಮಿಕವಾದ ಚಿಂತನೆ ನಮ್ಮಲಿ ಬೆಳೆಸಿಕೊಳ್ಳಬೇಕು ಇಲ್ಲವಾದಲ್ಲಿ ನಮ್ಮ ಗುರುತು ಇಲ್ಲದ ರೀತಿಯಲ್ಲಿ ದೇಶ ಸಂಕಷ್ಟಕ್ಕೆ ಸಿಲುಕುವುದು ಎಂದಿದ್ದಾರೆ.ಈಗ ಆಳ್ವಿಕೆಯಲ್ಲಿ ಇರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಆದರೆ ಕೆಲವರು ಬಹುಬೇಗ ಹಣ ಮಾಡುವ ಆಸೆ ಇಂದ ಇದ್ದಾರೆ. ಅದೇ ಜನರ ಕಷ್ಟಗಳಿಗೆ ಕಾರಣ ಆಗುತ್ತದೆ. ಮುಂದಿನ ವರ್ಷದಲ್ಲಿ ಸಾಕಷ್ಟು ಆಘಾತಗಳು ಸಂಭವಿಸಲಿದೆ. ಆದರೆ ಮನುಷ್ಯರ. ಜೀವನಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆ. ಹೀಗಾಗಿ ಸರ್ಕಾರ ಜನರ ಹಿತಕ್ಕಾಗಿ ತಮ್ಮ ವರ್ತನೆಯನ್ನು ಬದಲಾಯಿಸ ಬೇಕು” ಎಂದಿದ್ದಾರೆ.