ಯಶ್ ಸುದೀಪ್ ಶಿವಣ್ಣ ಹೆಸರು ಬಳಸಿ ಕಾಂಟ್ರವರ್ಸಿ ಹೇಳಿಕೆ ಕೊಟ್ಟ ಡಿ ಬಾಸ್! ಇವರು ಹೇಳಿದ್ದು ಏನು ಗೊತ್ತಾ?

ಯಶ್ ಸುದೀಪ್ ಶಿವಣ್ಣ ಹೆಸರು ಬಳಸಿ ಕಾಂಟ್ರವರ್ಸಿ ಹೇಳಿಕೆ ಕೊಟ್ಟ ಡಿ ಬಾಸ್! ಇವರು ಹೇಳಿದ್ದು ಏನು ಗೊತ್ತಾ?

ನಮ್ಮ "ಡಿ ಬಾಸ್" ಈ ನಟನ ಹೆಸರು ಇಡೀ ಎಲ್ಲಾ ಚಿತ್ರ ರಂಗದವರಿಗು ಕೂಡ ಚಿರಪರಿಚಿತ ಎಂದ್ರೆ ತಪ್ಪಾಗಲಾರದು. ಇನ್ನೂ ಈ ನಟ ನಮ್ಮ ಸ್ಯಾಂಡಲ್ ವುಡ್ ಚಿತ್ರಗಳನ್ನು ಮಾತ್ರ ಮಾಡಿದ್ದರು ಕೂಡ ಪರಭಾಷೆಯ ಅಭಿಮಾನಿಗಳು ಕೂಡ ಹೆಚ್ಚಾಗಿಯೇ ಇದ್ದಾರೆ. ಅದ್ರಲ್ಲೂ ಇವರ ಕಡಕ್ ಮಾತಿಗೆ ಹೆಚ್ಚಿನ ಮಂದಿ ಫಿದಾ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನೂ ಡಿ ಬಾಸ್ ನಮ್ಮ ಸ್ಯಾಂಡಲ್ ವುಡ್ ನ ಮೇರು ಕಲಾವಿದನ ಮಗ ಆಗಿದ್ದರು ಕೂಡ ತಮ್ಮ ಸಿನಿಮಾ ರಂಗದ ಮೊದಲ ಹಂತಗಳಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸುತ್ತಾ ಬಂದಿರುವವರು. ಇನ್ನೂ ಮೊದಲಿಗೆ ಲೈಟ್ ಬಾಯ್ ಆಗಿ ಕೆಲ್ಸ ಮಾಡಿ ಆ ನಂತರ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರವೇ ಈ ನಟನಿಗೆ ದೊಡ್ಡ ಅವಕಾಶ ಅವರ ಕೈ ಸೇರಿದ್ದು. 

ಇನ್ನೂ ಅವರ ಚೊಚ್ಚಲ ಚಿತ್ರಗಳು ಕೊಡ ಅವರಿಗೆ ಅಷ್ಟಾಗಿ ಯಶಸ್ಸು ತಂದುಕೊಡಲಿಲ್ಲ. ಆದರೆ ತಮ್ಮ ನಟನೆಯ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳದ ಇವರು ಅವರ ಪ್ರಯತ್ನವನ್ನು ಮುಂದುವರೆಸುತ್ತಾ ಬಂದಾಗ ಇವರ ಕೈ ಹಿಡಿದಿದ್ದು ಎಂದರೆ ಅದು ಕರಿಯ. ಈ ಸಿನಿಮಾದಲ್ಲಿ ಇವರ ನಟನೆಗೆ ಅವರ ಬಣ್ಣದ ಲೋಕದ ಕೆರಿಯರ್ ದಿಕ್ಕನ್ನೇ ಬದಲಿಸಿತು. ಅಂದು ಶುರುವಾದ ಹಿಟ್ ಸಿನಿಮಾಗಳು ಈಗಲೂ ಕೂಡ ಅದೇ ಸ್ಥಾನದಲ್ಲಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಾಲೆ ಇರುತ್ತದೆ. ಇನ್ನೂ ಇವರ ಸಿನಿಮಾಗಳು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುವ ರೀತಿ ಇವರ ಹೇಳಿಕೆಯು ಕೂಡ ಅಷ್ಟೇ ಸದ್ದು ಮಾಡುತ್ತದೆ ಎಂದರೆ ತಪ್ಪಾಗಲಾರದು . ಏಕೆಂದರೆ ನಟ ದರ್ಶನ್ ಅವರ ನೇರ ನುಡಿ ಸ್ವಭಾವದವರು. ಇದ್ದದನ್ನು ಇದ್ದಾಹಾಗಿಯೆ ಹೇಳಿ ಯಾರು ಯಾಕೆ ಹೇಗೆ ಎಂದು ಯೋಚಿಸುವ ವ್ಯಕ್ತಿತ್ವ ಅವರದ್ದು ಅಲ್ಲಾ.

ಇನ್ನೂ ಇವರ ನೇರ ನುಡಿಗಳಿಗೆ ಮಾಧ್ಯಮದವರಿಗೆ ಕೂಡ ಬೇಚ್ಚಿ ಅವರ ತಂಟೆಗೆ ಹೋಗದಂತೆ ನಿರ್ಧಾರ ಮಾಡಿದ್ದರು. ಆದರೆ ಮದ್ಯಮ ಅವರು ಅವರ ಸಿನಿಮಾಗಳಿಗೆ ಪ್ರಮೋಷನ್ ಮಾಡದೆ ಇದ್ದರು  ಕೊಡ ಡಿ ಬಾಸ್ ನ ಸಿನಿಮಾ ಗಾಂಧಿ ನಗರದಲ್ಲಿ ದೊಡ್ಡ ಹಿಟ್ ಪಡೆದುಕೊಳ್ಳುತ್ತಿದೆ. ಇನ್ನೂ ಮೊನ್ನೆ ನಡೆದ ಒಂದು ಸಮಾರಂಭದಲ್ಲಿ ಬಾಗಿ ಆಗಿದ್ದ ಡಿ ಬಾಸ್ ಮತ್ತೊಂದು ಕಾಂಟ್ರವರ್ಸಿ ಹೇಳಿಕೆಯನ್ನು ನೀಡಿದ್ದಾರೆ. ಅದೇನೆಂದರೆ ಇತ್ತೀಚೆಗೆ ಬಿಡುಗಡೆ ಆದ "ತಮಿಳು ಚಿತ್ರವನ್ನು ನಮ್ಮ ಕನ್ನಡದ ನಿರ್ಮಾಪಕ ಕೇವಲ 6 ಕೋಟಿ ಕೊಟ್ಟು ಕರಿದಿ ಮಾಡಿ ಆ ಸಿನಿಮಾ ಇಂದ ಬರೂಬ್ಬರಿ 38 ಕೋಟಿ ಲಾಭವನ್ನು ಪಡೆದುಕೊಂಡಿದ್ದಾರೆ. ಇದ್ರಿಂದ ಅವರ ಲಾ ಆಯಿತು ಬೇರೆಯ ಭಾಷೆಯ ಸಿನಿಮಾ ಒಳ್ಳೆಯ ಹೆಸರು ಮಾಡಿತು. ಹಿಗಿದ್ದವರಿಗೆ ದರ್ಶನ್, ಸುದಿಪ್, ಯಶ್, ಶಿವಣ್ಣ ಅವರ ಸಿನಿಮಾಗಳು ಯಾಕೆ ಕಾಣಿಸಲಿಲ್ಲ? ". ನಮ್ಮವರು ಆಗಿದ್ದುಕೊಂಡು ನಮ್ಮ ಕಲಾವಿದರ ಬೆಳೆವಣಿಗೆಗೆ ಯಾಕೆ ಮುಂದೆ ಬರುವುದಿಲ್ಲ ಎಂದು ಕಡಕ್ ಆಗಿ ಪ್ರಶ್ನೆ ಮಾಡಿದ್ದಾರೆ. ಇನ್ನೂ ಇವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ.