ಅಪರ್ಣಾ ಅವರ ಸಾವಿನ ರಹಸ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ! ಹೇಳಿದ್ದೇನು ಗೊತ್ತಾ?

ಅಪರ್ಣಾ ಅವರ ಸಾವಿನ ರಹಸ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ! ಹೇಳಿದ್ದೇನು ಗೊತ್ತಾ?

ಕನ್ನಡ ದೂರದರ್ಶನದ ಪ್ರಮುಖ ನಿರೂಪಕಿ ಮತ್ತು ನಟಿ ಆಗಿ ನಮ್ಮ ಚಂದನವನದಲ್ಲಿ ಗುರುತಿಸಿಕೊಂಡಿದ್ದ  ಅಪರ್ಣಾ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು.  ಅವರು 1993 ರಲ್ಲಿ ಆಲ್ ಇಂಡಿಯಾ ರೇಡಿಯೊದಲ್ಲಿ ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಯನ್ನು ಶುರುಮಾಡಿದವರು. ಇನ್ನೂ ರೇಡಿಯೋ ಜಾಕಿ ಆಗಿ ಮನರಂಜನೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಕ್ರಮೇಣ ದೊಡ್ಡ ಮಟ್ಟದ ಯಶಸ್ಸನ್ನು ಕೊಡ ಪಡೆದುಕೊಂಡರು. ಹಾಗೆಯೇ ಅವರ ಯಶಸ್ಸಿನ ಹಾದಿ ಅತಿ ಶೀಘ್ರದಲ್ಲೇ ದೂರದರ್ಶನಕ್ಕೆ ಪರಿವರ್ತನೆಗೊಂಡರು, 1990 ರಿಂದ ಡಿಡಿ ಚಂದನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಅವರು 1985 ರ ಚಲನಚಿತ್ರ "ಮಸಣದ ಹೂವು" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದರು. 

ಚಂದನ ಟಿವಿಯ ನಿರೂಪಕಿ ಅಪರ್ಣ ತನ್ನ ವಿನೂತನ ನಿರೂಪಣಾ ಶೈಲಿಯಿಂದ ಪ್ರಖ್ಯಾತಿ ಪಡೆದಿದ್ದಾರೆ. ಅಪರ್ಣ ಬೆಂಗಳೂರು ಮೂಲದವರು, ಮತ್ತು ತಮ್ಮ ಪ್ರೌಢಶಿಕ್ಷಣವನ್ನು ಮುಗಿದ ನಂತರ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಪ್ರವೇಶ ಪಡೆದರು. ಅವರು ಹಲವು ವರ್ಷಗಳಿಂದ ಚಂದನ ಟಿವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದಾರೆ. ಅಪರ್ಣ ತಮ್ಮ ಸ್ನೇಹಪರ ಸ್ವಭಾವದಿಂದ ಮತ್ತು ಮುಗ್ಧ ಮೌನದಿಂದ ಪ್ರೇಕ್ಷಕರಿಗೆ ನೆಚ್ಚಿನ ನಿರೂಪಕಿ ಆಗಿದ್ದಾರೆ. ಕನ್ನಡ ಕ್ಷೇತ್ರದಲ್ಲಿ ನಿರೂಪಕಿ ಆಗಿದ್ದ ಅಪರ್ಣ ದೀರ್ಘಕಾಲದಿಂದಲೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. 


ಅಪರ್ಣಾ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದು, ಇನ್ನೂ ಈ ತಿಂಗಳು ತಮ್ಮ ಬದುಕಿನ ಹೋರಾಟ ಮುಗಿಸಿ ಅವರು ಸಾವನ್ನಪ್ಪಿದರು. ಅವರ ನಿಧನವು ಅವರ ಕುಟುಂಬ, ಸ್ನೇಹಿತರು, ಮತ್ತು ಅಭಿಮಾನಿಗಳನ್ನು ದುಃಖದಲ್ಲಿಟ್ಟಿತು. ಇನ್ನು ಮರೆಯಲಾಗದ ಮಾಣಿಕ್ಯ ಎಂದರೆ ತಪ್ಪಾಗಲಾರದು. ಇನ್ನು ಅಚ್ಚು ಕಟ್ಟಾಗಿ ಜೀವನ ಸಾಗಿಸುತ್ತಾ ಇದ್ದ ಅಪರ್ಣಾ ಅವರ ಖಾಯಿಲೆ ಬಂದಿದ್ದು ಹೇಗೆ ಎಂಬ ಯಕ್ಷ ಪ್ರಶ್ನೆ ಕಾಡುವ ಸಮಯದಲ್ಲಿ ಬಿಗ್ ಬಾಸ್ ಸೀಸನ್ ನಲ್ಲಿ ಒಟ್ಟಾಗಿ ಸಮಯ ಕಳೆದ ಬ್ರಹ್ಮಾಂಡ ಗುರೂಜಿ ಅವರು ಬೇರೆಯೇ ಅಂಶದ ಬಗ್ಗೆ ಮಾತನಾಡಿದ್ದಾರೆ. ಅದೇನೆಂದರೆ ಅಪರ್ಣಾ ಅವರಿಗೆ ಶನಿ ಕಾಟ ನಡೆಯುತ್ತಿತ್ತು ಈ ಕಾರಣದಿಂದ ಅವರು ಸಾವು ಪಡೆದುಕೊಂಡರು ಎಂದು ಹೇಳಿಕೆ ನೀಡಿದ್ದಾರೆ.