ವಿಜಯ್ ರಾಘವೇಂದ್ರ ಅವರೋಟ್ಟಿಗಿನ ಫೋಟೋ ಹಂಚಿಕೊಂಡು ವಿಶೇಷ ಸಾಲನ್ನು ಬರೆದುಕೊಂಡ ಅನುಶ್ರೀ! ಅವರು ಹೇಳಿದ್ದು ಏನು ಗೊತ್ತಾ?

ನಮ್ಮ ಬಣ್ಣದ ರಂಗದ ಮೇಲಿನ ಕರಿ ನೆರಳು ನಮ್ಮ ಕಲಾವಿದರನ್ನು ಒಬ್ಬರನ್ನಾಗಿ ತನ್ನ ಲೋಕಕ್ಕೆ ಕರೆದೊಯ್ಯುತ್ತಿದೆ. ಇನ್ನೂ ಈ ಕರಿ ನೆರಳಿನ ಛಾಯೆ ಮಾಸಲಿಕ್ಕೆ ಅದೆಷ್ಟು ಸಮಯ ತೆಗೆದುಕೊಳ್ಳಲಿದೆ ಎಂದು ಆ ದೇವ್ರೇ ಬಲ್ಲ. ಇನ್ನೂ ಈ ಕರಿ ನೆರಳಿನ ಚಾಯೆಯಿಂದ ಊಹೆಗು ಮೀರಿದ ಕಲಾವಿದರು ನಮ್ಮನ್ನು ಆಗಲುತ್ತ ಬರುತ್ತಿದ್ದಾರೆ.ನಾವಿನ್ನೂ ನಾಲ್ಕು ವರ್ಷದ ಹಿಂದೆ ಮೃತ ಪಟ್ಟ ಚಿರು ಅವರ ಸಾವಿನಿಂದ ಹೊರಬರಲಿಕ್ಕೆ ಆಗಿಲ್ಲ ಹೀಗಿದ್ದಲ್ಲಿ ನಾವು ಊಹಿಸಲೂ ಸಾಧ್ಯವಾಗದ ಅಪ್ಪು ಕೂಡ ವಿಧಿಯ ಆಟಕ್ಕೆ ಬಲಿಯಾದರು. ಇನ್ನೂ ಜನರ ಜೀವನ ಎಷ್ಟು ಕಷ್ಟ ಎಂದು ನಿಟ್ಟುಸಿರು ಬಿಡುವ ಸಮಯದಲ್ಲಿ ಕಳೆದ ತಿಂಗಳು ವಿದೇಶದಲ್ಲಿ "ಚಿನ್ನಾರಿ ಮುತ್ತನ" ಪತ್ನಿ ಕೂಡ ಬಾರದ ಲೋಕದೋರಿಗೆ ಪಯಣ ಬೆಳೆಸಿದರು. ಇನ್ನೂ "ಸ್ಪಂದನ" ನಮ್ಮನ್ನು ಅಗಲಿ ಒಂದು ತಿಂಗಳು ಆಗುತ್ತಾ ಬರುತ್ತಿದೆ ಹೀಗಿದ್ದರೂ ಕೂಡ ಅಪ್ಪು ಚಿರು ಹಾಗೂ ಸಂಚಾರಿ ವಿಜಯ್ ಅವರ ಸಾವನ್ನು ಇಂದಿಗೂ ಒಪ್ಪಿಕೊಳ್ಳಲ್ಲು ಸಾದ್ಯವಾಗುತ್ತಿಲ್ಲ.
ಇನ್ನೂ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಬೆಸ್ಟ್ ಕಪಲ್ ಎಂದ ಕೂಡಲೇ ಮುಂಚೂಣಿಯಲ್ಲಿ ಇದ್ದ ಹೆಸರು ಎಂದ್ರೆ ಅದು ವಿಜಯ್ ಹಾಗೂ ಸ್ಪಂದನ. ಇವರಿಬ್ಬರೂ ಬಹಳ ಅಚ್ಚುಕಟ್ಟಾಗಿ ಸಂಸಾರದ ನೌಕೆಯನ್ನು ನಡೆದುಕೊಳ್ಳುತ್ತಿದ್ದವರು. ಹೀಗಿರುವಾಗ ತಮ್ಮ 18 ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲು ಹೋದ ಈ ಜೋಡಿಗೆ ದೇವರಿಂದ ಉಡುಗೊರೆಯಾಗಿ ಸಿಕ್ಕಿದ್ದು ಈ ನೋವು ಎಂದರೆ ತಪ್ಪಾಗಲಾರದು. ಇನ್ನೂ ಇವರಿಬ್ಬರೂ ಇಬ್ಬರನೋಬ್ಬರ ಮೇಲೆ ಅವಲಂಬಿತರಾಗಿದ್ದವರು. ಹೀಗಿರುವಾಗ "ವಿಜಯ್" ತಮ್ಮ ಚಿನ್ನ ಇಲ್ಲದೆ ಹೇಗೆ ಜೀವನ ನಡೆಸಬಹುದು ಎಂದು ಅವರ ಮನೆಯವರಿಗೆ ಹಾಗೂ ವಿಜಯ್ ಅಭಿಮಾನಿಗಳಿಗೆ ಬಹಳ ಆತಂಕವಾಗಿತ್ತು. ಏಕೆಂದ್ರೆ ವಿಜಯ್ ಬಹಳ ಮೃದು ಸ್ವಭಾವದ ವ್ಯಕ್ತಿ. ಹೀಗಿರುವಾಗ ಈ ನೋವನ್ನು ಹೇಗೆ ಬರಿಸುತ್ತಾರೆ ಎಂದು ಎಲ್ಲರಲ್ಲೂ ಆತಂಕ ಇತ್ತು ಆದರೆ ಈಗ ವಿಜಯ್ ತಮ್ಮ ಮಗನಿಗಾಗಿ ಗಟ್ಟಿಯಾಗಿ ನಿಂತಿದ್ದಾರೆ.
ತಮ್ಮ ಮಗನಿಗೆ ತಾವೇ ಅಮ್ಮ ಹಾಗೂ ಅಪ್ಪನ ಸ್ಥಾನ ತುಂಬುವ ಸಲುವಾಗಿ ತಮ್ಮ ಎಲ್ಲಾ ನೋವನ್ನ ಮರೆತು ಇದೀಗ ರಾಘು ತಮ್ಮ ಹಳೆಯ ಕೆಲ್ಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಅವ್ರ ಸಿನಿಮಾ ಕೂಡ ಉತ್ತಮ ಪ್ರದರ್ಶನ ಪಡೆದಿದೆ. ಇನ್ನೂ ಈ ಸಿನಿಮಾವನ್ನು ತಮ್ಮ ಪತ್ನಿಗೆ ಅರ್ಪಿಸುವುದು ವಿಜಯ್ ರಾಘವೇಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. ಹಾಗೆಯೇ ಇದೀಗ ಅನುಶ್ರೀ ಅವರು ಕೊಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಹಾಗೂ ಸ್ಪಂದನ ಅವರ ಬಗ್ಗೆ ಬರೆದುಕೊಂಡಿದ್ದಾರೆ. ಇನ್ನೂ "ಅನುಶ್ರೀ" ಅವರು ತಮ್ಮಿಬ್ಬರ ಫೋಟೋ ಒಂದನ್ನು ಹಂಚಿಕೊಂಡು ಕೆಲವೊಂದು ಭಾವನೆ ವಿವರಿಸುವುದು ಆಗಿರುವುದಿಲ್ಲ "ಮೈ ಬೆಸ್ಟ್ ಹುಮನ್ ಹಾಗೂ ಮೈ ಬೆಸ್ಟಿ" ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ( video credit : kannada taja suddi )