ನೀತಿ ಮಾತು ಎಂದ ಕೊಡಲೇ ನಮಗೆ ನೆನಪಾಗುವ ಒಂದು ಹೆಸರು ಎಂದ್ರೆ ಅದು ಚಾಣಕ್ಯ. ಏಕೆಂದ್ರೆ ಅವರ ನೀತಿ ಅನುಸಾರ ಜೀವನವನ್ನು ನಡೆಸಿದಾಗ ಮಾತ್ರ ಯಶಸ್ವಿ ಕಾಣಲು ಸಾಧ್ಯ ಎಂದು ಹಲವಾರು ಮಂದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದ್ರೆ ಚಾಣಕ್ಯನ ಹಿತವಚನಗಳ ಅನುಯಾಯಿಗಳು ಈಗಿನ ಕಾಲದಲ್ಲಿ ಇದ್ದಾರೆ ಎಂದರೆ ನೀವು ಅದಾಜಿಸಬಹುದು. ಇನ್ನು ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ ಹೇಳುವ ಪ್ರಕಾರ, ಮನುಷ್ಯರು ಜ್ಞಾನಿಗಳು, ಶ್ರದ್ಧಾಳುಗಳು ಮತ್ತು ಸಜ್ಜನರ ಸಹವಾಸವನ್ನು ಮಾತ್ರ ಮಾಡಬೇಕು. ಅವರು ಸಜ್ಜನರ ಜೊತೆಗಿದ್ದರೆ ಬುದ್ಧಿ, ಶ್ರದ್ಧೆ, ಮತ್ತು ಸತ್ಕರ್ಮಗಳಿಗಾಗಿ ಪ್ರೇರಣೆಯಾಗುತ್ತಾರೆ.
ಹಾಗೆಯೇ ಇಂದಿನ ನಮ್ಮ ಲೇಖನದಲ್ಲಿ ಚಾಣಕ್ಯನ ಪ್ರಕಾರ ಮನುಷ್ಯರೇ ತಮ್ಮ ಖುಷಿಯನ್ನು ಹಾಳು ಮಾಡಿಕೊಳ್ಳುವವರು ಅದನ್ನು ಪರರ ಮೇಲೆ ದೋಷಿಸುತ್ತಾರೆ ಎಂದು ಹೇಳಿದ್ದಾರೆ. ಏಕೆಂದ್ರೆ ಮನುಷ್ಯ ತನ್ನ ಜೀವನಕ್ಕೆ ಹಾಗೂ ಖುಷಿಗೆ ಪರಿಗಣಿಸುವ ಅಂದಾಜಿನ ಶಕ್ತಿ ನೀಡಿರುವಾಗ ತನ್ನ ಜೀವನದಲ್ಲಿ ಬೇಕಾಗಿರುವ ವ್ಯಕ್ತಿಯನ್ನು ವಿಷಯವನ್ನು ಬಹಳ ಸೂಕ್ಷ್ಮವಾಗಿ ಅರಿಸಿಕೊಳ್ಳಬೇಕು. ತಾನೇ ಆರಿಸಿಕೊಳ್ಳುವ ವ್ಯಕ್ತಿಯ ಜೊತೆ ಅವರಿಂದ ಬೇಸರವಾಗುತ್ತಿದೆ ಎಂದು ಕುಳಿತುಕೊಳ್ಳುವುದು ತಪ್ಪು. ಅವರು ಹೇಳುವುದು ಏನೆಂದರೆ ಈ ರೀತಿಯ ವ್ಯಕ್ತಿಯ ಜೊತೆ ನಾವು ಇದ್ದಾಗ ನಮ್ಮ ಸಮಯ , ಖುಷಿ ಹಾಳಾಗುತ್ತಿದೆ ಎಂದಾಗ ಅವರಿಂದ ದೂರ ಮಾಡಿಕೊಳ್ಳುವ ನಿರ್ಧಾರ ಮಾಡಬೇಕು. ಅವರ ಖುಷಿಗೆ ನಿಮ್ಮ ಖುಷಿಯನ್ನು ಬಳಿಕೊಡಬಾರದು ಎಂದಿದ್ದಾರೆ.
ಇನ್ನು ಮನುಷ್ಯನು ಖುಷಿಯಾಗಿರಲೂ ಮಿಠ್ಯಾ ಮಾತು ಮಾಡುವವರನ್ನು, ದ್ರೋಹ ಮಾಡುವವರನ್ನು, ಮತ್ತು ಕೃತಘ್ನರನ್ನು ಯಾವತ್ತೂ ನಂಬಬೇಡಿ.ದೇವರು ನಮಗೆ ಕೈಗಳನ್ನು ನೀಡಿದ್ದಾನೆ ಶ್ರಮವನ್ನು ಮಾಡಲು, ಕೇವಲ ಪ್ರಾರ್ಥನೆ ಮಾಡುವುದಕ್ಕಲ್ಲ. ಒಳ್ಳೆಯವರೊಂದಿಗೆ ಇದ್ದರೆ ಬುದ್ಧಿ ಬೆಳೆಯುತ್ತದೆ, ಕೆಟ್ಟವರೊಂದಿಗೆ ಇದ್ದರೆ ಅಪಾಯಗಳಿಗೆ ಗುರಿಯಾಗುತ್ತೇವೆ.ಒಬ್ಬನು ದಿನವೂ ಹೊಸ ವಿಷಯಗಳನ್ನು ಕಲಿಯಬೇಕು. ಜ್ಞಾನವೇ ಶಕ್ತಿಯ ಮೂಲ."ಹೆಚ್ಚಿನ ಶ್ರಮ ಮಾಡುವವರು ಮಾತ್ರ ಸಫಲವಾಗುತ್ತಾರೆ. ಶ್ರಮವಿಲ್ಲದೆ ಯಶಸ್ಸು ಸಾಧ್ಯವಿಲ್ಲ.ಚಾಣಕ್ಯನ ಹಿತವಚನಗಳು ಅಜ್ಞಾನವನ್ನು ನಿವಾರಿಸಲು ಮತ್ತು ಜೀವಿತವನ್ನು ಉತ್ತಮವಾಗಿ ರೂಪಿಸಲು ಮಾರ್ಗದರ್ಶಕವಾಗಿವೆ.