ಯುವತಿಯರೇ ಹುಷಾರ್ ; ಈ ಊರಿನಲ್ಲಿ ಇನ್ಮುಂದೆ ನೀವು ಜೀನ್ಸ್ ಪ್ಯಾಂಟ್ ಧರಿಸಿದರೆ ನಿಮಗೆ ಏನ್ ಶಿಕ್ಷೆ ಗೊತ್ತಾ?

ಯುವತಿಯರೇ ಹುಷಾರ್ ;  ಈ ಊರಿನಲ್ಲಿ  ಇನ್ಮುಂದೆ ನೀವು ಜೀನ್ಸ್ ಪ್ಯಾಂಟ್ ಧರಿಸಿದರೆ ನಿಮಗೆ ಏನ್ ಶಿಕ್ಷೆ ಗೊತ್ತಾ?

ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು. ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ ಎಲ್ಲವೂ ಸಹ ಸಾಕಷ್ಟು ಬದಲಾಗಿದೆ. ಹೆಣ್ಣು ಮಕ್ಕಳು ಇದೀಗ ಮನೆಯ ಹೊರಗೆ ಬಂದಿದ್ದಾರೆ. ಹೌದು ಅಂದರೆ ಅವರು ಇದೀಗ ಯಾರ ಮಾತನ್ನು ಸಹ ಕೇಳುವ ಸ್ಥಿತಿಯಲ್ಲಿಲ್ಲ.

ಯಾರಾದರೂ ಅವರಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇತ್ತೀಚಿನ ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು ಮಣ್ಣು ಪಾಲು ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ವೆಸ್ಟರ್ನ್ ಬದುಕನ್ನು ಅಳವಡಿಸಿಕೊಂಡು ಈಗಿನ ಕಾಲದವರು ಮಾಡ್ರನ್ ಆಗಿ ಬದುಕಲು ಇಷ್ಟಪಡುತ್ತಾರೆ.  

ಭಾರತದ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಸಮುದಾಯದ ಗುಂಪೊಂದು ಪುರುಷರು ಹಾಫ್ ಪ್ಯಾಂಟ್ ಮತ್ತು ಮಹಿಳೆಯರು ಸ್ಕರ್ಟ್ ಮತ್ತು ಜೀನ್ಸ್ ಧರಿಸುವುದನ್ನು ನಿಷೇಧಿಸಿದೆ. ಮುಜಾಫರ್‌ನಗರ ಜಿಲ್ಲೆಯ ಪೀಪಾಲ್‌ಶಾ ಗ್ರಾಮದ ಕ್ಷತ್ರಿಯ ಪಂಚಾಯತ್ ಯುವಕರು ಮತ್ತು ಪುರುಷರು ಹಾಫ್ ಪ್ಯಾಂಟ್ ಮತ್ತು ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಿದೆ. ಹುಡುಗಿಯರು ಸ್ಕರ್ಟ್ ಮತ್ತು ಜೀನ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ. ನಿಷೇಧವನ್ನು ಉಲ್ಲಂಘಿಸುವವರು ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಗುತ್ತದೆ ಎಂದು ಪಂಚಾಯತ್ ಹೇಳಿದೆ.

ಮಂಗಳವಾರ ಸಂಜೆ ನಡೆದ ಪಂಚಾಯಿತಿಯಲ್ಲಿ ಹತ್ತಕ್ಕೂ ಹೆಚ್ಚು ಗ್ರಾಮಗಳ ಕ್ಷತ್ರಿಯ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಹಳ್ಳಿಗಳಲ್ಲಿ ಹುಡುಗರು ಹಾಫ್ ಪ್ಯಾಂಟ್ ಧರಿಸಬಾರದು ಮತ್ತು ಹುಡುಗಿಯರು ಜೀನ್ಸ್ ಧರಿಸಬಾರದು. “ಅವರು ಈ ಆದೇಶವನ್ನು ಅನುಸರಿಸದಿದ್ದರೆ, ಅವರನ್ನು ಸಾಮಾಜಿಕವಾಗಿ ಶಿಕ್ಷಿಸಬಹುದು  ( video credit :Mast Guru 377k )