ಕಲ್ಲಿನ ಮೂಲಕ ನಿಮ್ಮ ಕಷ್ಟಗಳಿಗೆ ಪರಿಹಾರ ಸೂಚಿಸುವ ದೇವಸ್ತಾನ! ಎಲ್ಲಿದೆ ಗೊತ್ತಾ?
ದೇವರು ಧರ್ಮಗಳಲ್ಲಿ ಅತ್ಯಂತ ಪ್ರಮುಖ ಅನ್ವಯಗಳಲ್ಲೊಂದು. ಇದು ಒಂದು ವೈವಿಧ್ಯಮಯ ವಿಷಯವಾಗಿದೆ ಮತ್ತು ಹಲವು ಸಂದೇಶಗಳನ್ನು ಹೊಂದಿದೆ. ಅದು ವ್ಯಕ್ತಿಗಳ ನಂಬಿಕೆಗಳ ಮತ್ತು ಆದರ್ಶಗಳ ಒಳಗಾಗಿದೆ. ಈ ವಿಷಯವನ್ನು ವಿವರಿಸುವಾಗ, ಭಕ್ತಿ, ನೈತಿಕತೆ, ಪ್ರೀತಿ, ಕೃಪೆ, ನೀತಿ ಮುಂತಾದ ಭಾವನೆಗಳು ಪ್ರಮುಖವಾಗುತ್ತವೆ. ಹೀಗೆ, ದೇವರ ಬಗ್ಗೆ ಹೇಳುವುದಾದರೆ ಅವನ ಅಸ್ತಿತ್ವದ ವೈವಿಧ್ಯತೆ ಮತ್ತು ಅದರ ಪ್ರಭಾವವನ್ನು ಪರಿಚಯಿಸಬಲ್ಲದು. ದೇವರ ಬಗ್ಗೆ ನಂಬಿಕೆಯ ಅಭಿವ್ಯಕ್ತಿಯೂ ಅದ್ಭುತ ಧಾರ್ಮಿಕ ಅನುಭವಗಳನ್ನು ಸಹಾಯ ಮಾಡಬಲ್ಲದು. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ಕಲ್ಲಿನ ಮೂಲಕ ನಿಮ್ಮ ಕಷ್ಟಗಳ ಪರಿಹಾರದ ಬಗ್ಗೆ ಸೂಚಿಸುವ ಒಂದು ದೇವರ ಬಗ್ಗೆ ಹೇಳಲು ಹೊರಟ್ಟಿದ್ದೇವೆ. ಆ ದೇವ್ರು ಯಾವುದು ಹಾಗೂ ಎಲ್ಲಿದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ತುಮಕೂರು ಜಿಲ್ಲೆಯಲ್ಲಿ ಇರುವ ದ್ವಾರಳು ಗ್ರಾಮದ ಹಿರಿಯೂರು ರಾಷ್ಟೀಯ ಹೆದ್ದಾರಿಯಲ್ಲಿ ಇರುವ ಈ ಉಡಸಲಮ್ಮ ದೇವಸ್ಥಾನ. ಈ ದೇವಸ್ಥಾನಕ್ಕೆ ಯಾವ ಪೂಜಾರಿ ಹಾಗೂ ಗುಡಿ ಯಾವುದು ಇಲ್ಲ. ಇಲ್ಲಿಗೆ ಬರುವ ಭಕ್ತನೇ ತನ್ನ ಇಚ್ಛಾನುಸಾರ ಪೂಜೆ ಮಾಡಬಹುದು. ಇನ್ನೂ ಈ ದೇವಾಲಯ ಆಗಿರುವುದು ಒಂದು ಅಚ್ಚರಿಯ ವಿಚಾರ ಎಂದು ಹೇಳಬಹುದು. ಏಕೆಂದರೆ ತೊಂಬತ್ತರ ದಶಕದಲ್ಲಿ ಪ್ರಧಾನಿಗಳು ಇಲ್ಲಿರುವ ಅಲದ ಮರವನ್ನು ಕೆಡವಿ ರಾಷ್ಟೀಯ ಹೆದ್ದಾರಿಯಾಗಿ ಮಾಡಬೇಕು ಎನ್ನುವ ಸಮಯದಲ್ಲಿ ಆ ಮರವನ್ನು ಕೆಡವುವ ಸಂಧರ್ಭದಲ್ಲಿ ಅಲ್ಲಿಗೆ ಬಂದಿದ್ದ JCB ಕೆಟ್ಟು ಸರಿಪಡಿಸಿದೆ ಇರುವ ರೀತಿಯಲ್ಲಿ ಆಯಿತಂತೆ ಹಾಗೆಯೇ ಅಲ್ಲಿನ ಇಂಜಿನಿಯರ್ ಹಾಗೂ ಕಾರ್ಮಿಕರು ಎಲ್ಲರೂ ಮರಣ ಹೊಂದಿದ್ದರು ಎನ್ನಲಾಗಿದೆ.
ಹಾಗೆಯೇ ಕಡಿಯಲು ಬಂದ ಜನರಿಗೆ ಕಣ್ಣು ಕಾಣದೆ ಇರುವ ರೀತಿಯಲ್ಲಿ ಆಗಿದೆ ಎನ್ನಲಾಗುತ್ತಿದೆ. ಈ ಸಂದರ್ಭಗಳನ್ನು ನೋಡಿ ಅಚ್ಚರಿ ಆದ ಪ್ರಧಾನ ಮಂತ್ರಿ ಪರಿಶೀಲನೆ ಮಾಡಿದಾಗ ಆ ಮರದ ಕೆಳಗೆ ದೇವಸ್ತಾನ ಇರುವುದಾಗಿ ಕಂಡು ಬಂದಿದೆ. ಆಗ ಆ ಮರದ ಸುತ್ತಾ ಬಿಟ್ಟು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಇಂದಿನ ವರೆಗೂ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರಲಿದ್ದು. ಇಲ್ಲಿಗೆ ಬಂದು ತನ್ನ ಇಚ್ಛೆಯಂತೆ ತಮ್ಮ ಕೈಯಾರ ಉಡಸಲಮ್ಮ ದೇವಿಗೆ ಪೂಜೆ ಮಾಡಿಕೊಂಡು ಹೋಗುತ್ತಾರೆ. ಇನ್ನೂ ವಿಶೇಷ ಎಂದರೆ ಇಲ್ಲಿ ಇರುವ ಕಲ್ಲಿನ ಮೇಲೆ ನೀವು ಕುಳಿತು ಭಕ್ತಿಯಿಂದ ನಿಮ್ಮ ಕಷ್ಟವನ್ನು ಹೇಳಿಕೊಂಡಾಗ ಆ ಕಲ್ಲು ತಿರುಗಿದರೆ ನಿಮ್ಮ ಕಷ್ಟ ಪರಿಹಾರ ಆಗಲಿದೆ. ತಡವಾಗಿ ತಿರುಗಿದರೆ ಅಥವಾ ನಿಧಾನವಾಗಿ ತಿರುಗಿದರೆ ನಿಮ್ಮ ಕಷ್ಟಗಳು ಅದರಂತೆಯೇ ಪರಿಹಾರ ಆಗಲಿದೆ ಎಂದು ಹೇಳುತ್ತಾರೆ. ( video credit : Native Nest )