ಹೆಣ್ಣು ಹುಡುಕಿ ಹುಡುಕಿ ಸಾಕಾಗಿದೆಯಾ, ಹಾಗಾದ್ರೆ ಈ ದೇವರ ಬಳಿ ಹೋಗಿ ಖಂಡಿತಾ ಮದುವೆ ಆಗುತ್ತೆ..!

ಹೆಣ್ಣು ಹುಡುಕಿ ಹುಡುಕಿ ಸಾಕಾಗಿದೆಯಾ, ಹಾಗಾದ್ರೆ ಈ ದೇವರ ಬಳಿ ಹೋಗಿ ಖಂಡಿತಾ ಮದುವೆ ಆಗುತ್ತೆ..!

ಮದುವೆ ಅನ್ನುವುದು ಇತ್ತೀಚಿನ ದಿನಕ್ಕೆ ಒಂದು ರೀತಿ ವ್ಯಾಪಾರ ಆಗಿದೆ. ಹೌದು ಮನುಷ್ಯರಿಗೆ ಮನುಷ್ಯತ್ವಕ್ಕೆ ಒಳ್ಳೆಯ ಗುಣಕ್ಕೆ ಇಂದಿಗೆ ಯಾವ ಬೆಲೆಯೂ ಇಲ್ಲ.. ಕೇವಲ ಹಣ ಐಶ್ವರ್ಯಕ್ಕೆ ಅಂತಸ್ತಿಗೆ ಬೆಲೆಯನ್ನು ಹೆಚ್ಚು ಜನರು ನೀಡುತ್ತಿದ್ದಾರೆ. ಹಲವರಲ್ಲಿ ಈ ತತ್ವ ಆಲೋಚನೆ ಬಂದಿದೆ.. ಎಲ್ಲರೂ ಕೂಡ ಅವರ ರೀತಿಯೇ ಯೋಚನೆ ಮಾಡುವುದಿಲ್ಲ.. 10 ವರ್ಷಗಳ ಹಿಂದೆ ಹೆಣ್ಣು ಮಕ್ಕಳು ಮದುವೆ ಆಗಲು ಹುಡುಗರಿಗೆ ಸಿಗುತ್ತಿದ್ದರು.. ಒಂದಿಷ್ಟು ಜಮೀನು, ಒಂದಿಷ್ಟು ವ್ಯಾಪಾರ, ಒಂದಿಷ್ಟು ಒಳ್ಳೆಯ ಗುಣ ಇದ್ದರೆ ಸಾಕು ಹುಡುಗನಿಗೆ ಹುಡುಗಿಯನ್ನು ಕೊಟ್ಟು ಮದುವೆ ಮಾಡುತ್ತಿದ್ದರು. ಸದಾ ಒಳ್ಳೆಯ ಜೀವನ ಮಾಡಿ ಎಂದು ಹಾರೈಸುತ್ತಿದ್ದರು.ಆದರೆ ಇವತ್ತಿಗೆ ಅದು ಉಲ್ಟಾ ಆಗಿದೆ.

ಅದಷ್ಟೇ ಜಮೀನು ಇದ್ದರೂ, ಹುಡುಗ ಓದದೆ ಸಿಟಿಯಲ್ಲಿ ಸೆಟಲ್ ಆಗದೆ ಇದ್ದರೆ, ಹಳ್ಳಿಗರ ರೈತರಿಗೆ ಹೆಣ್ಣನ್ನು ಯಾರು ಕೂಡ ಕೊಡಲು ಮುಂದೆ ಬರುತ್ತಿಲ್ಲ. ಮದುವೆ ಆಗದಿರುವವರು ಪ್ರತಿದಿನ ಸಾಕಷ್ಟು ಜನರು ತಮ್ಮ ನೋವನ್ನು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಇದೀಗ ಒಂದು ಶುಭ ಸುದ್ದಿ ಬಂದಿದೆ ಗೆಳೆಯರೇ. ಅದು ಏನು ಅಂದ್ರೆ ನೀವು ಮದುವೆಗಾಗಿ ಹುಡುಗಿಯ ಹುಡುಕಿ ಯಾವ ಹುಡುಗಿಯೂ ನಿಮ್ಮನ್ನು ಒಪ್ಪಿಕೊಳ್ಳದೆ ಯಾವ ಮದುವೆ ಕಾರ್ಯಗಳು ಕೈಗೊಳ್ಳದೆ ತುಂಬಾನೇ ನೊಂದು ಹೋಗಿದ್ದರೆ, ಇಂದು ಈ ಕೆಲಸ ಮಾಡಿದರೆ ಸಾಕು, ನಿಮಗೆ ಖಂಡಿತ ಮದುವೆ ಆಗುತ್ತದೆ. ಅದು ಏನು ಅಂದ್ರೆ ಒಂದು ಪ್ರಸಿದ್ಧ ಹಿಂದೂ ದೇವಾಲಯ ಇದೆ ಗೆಳೆಯರೇ.     

ಮೂರು ಸಾವಿರ ವರ್ಷಗಳ ಇತಿಹಾಸ ಈ ದೇವಸ್ಥಾನಕ್ಕೆ ಇದ್ದು, ಈ ದೇವಸ್ಥಾನದಲ್ಲಿ ಶಿವನ ಕೈಯನ್ನು ಪಾರ್ವತಿ ಹಿಡಿದಿರುವ ಮೂರ್ತಿ ಇದೆ. ಇದು ತುಂಬಾನೇ ಪ್ರಸಿದ್ಧಿ ಪಡೆದಿರುವ ದೇವಸ್ಥಾನ. ಹಾಗೆ ಶಿವ ಪಾರ್ವತಿ ಮದುವೆ ಆಗಿರುವ ಪುಣ್ಯಸ್ಥಳ ಎಂದು ಕರೆಯಲಾಗುತ್ತದೆ. ಹೌದು ಇದು ಬರುವುದು ತಮಿಳುನಾಡಿನಲ್ಲಿ, ತಿರುಮನಂಚೆರಿ ಕಲ್ಯಾಣ ಸುಂದರೇಶ್ವರ ಟೆಂಪಲ್ ಇದಾಗಿದೆ.. ಮದುವೆ ಆಗದೆ ಇದ್ದವರು ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋದ ಮೇಲೆ ಮದುವೆ ಆಗಿದೆ ಎನ್ನುವ ಪ್ರತೀತಿ ಇದೆ.  ಮೊದಲು ಮದುವೆ ಆಗದೆ ಇರುವವರು ಇಲ್ಲಿಗೆ ಬಂದು ಅಲ್ಲಿ ನೀಡುವ ಪೂಜಾ ಚಟುವಟಿಕೆಗಳ ಕೈಗೊಳ್ಳಬೇಕು, ನಂತರ ಹಾರವನ್ನು ಕೊಡುತ್ತಾರೆ, ಅದನ್ನು ತೆಗೆದುಕೊಂಡು ನಿಮ್ಮ ಹರಕೆಯನ್ನು ಕಟ್ಟಿಕೊಂಡು ವಾಪಸು ಬರಬೇಕು.

ಅಲ್ಲಿಗೆ ಹೋಗಿ ಬಂದ ಸ್ವಲ್ಪ ದಿನದಲ್ಲಿಯೇ ನಿಮಗೆ ಕಂಡಿತಾ ಮದುವೆ ಕೂಡ ಆಗುತ್ತದೆ ಎನ್ನುವ ನಂಬಿಕೆ ಈ ದೇವರ ದೇವಸ್ತಾನದ ಮೇಲೆ ಇಡಬಹುದು. ಮದುವೆ ಆದ ನಂತರ ನೀವು ನಿಮ್ಮ ಹೆಂಡತಿಯನ್ನ ಮತ್ತೊಮ್ಮೆ  ಈ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮತ್ತೆ ಹರಕೆ ತೀರಿಸಿ ಬರಬೇಕು..ಅಸಲಿಗೆ ಇದರ ಅನುಭವವನ್ನು ಹಂಚಿಕೊಂಡಿರುವ ಒಂದು ನಿಜವಾದ ಜೋಡಿ ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ಎಲ್ಲವನ್ನು ತಿಳಿಸಿ ಕೊಟ್ಟಿದೆ. ಒಮ್ಮೆ ಪೂರ್ತಿಯಾಗಿ ವಿಡಿಯೋ ನೋಡಿ.. ಈ ಜೋಡಿಗೆ ನಿಮ್ಮದೇ ಆದ ಅನಿಸಿಕೆ ಅಭಿಪ್ರಾಯ ಮತ್ತು ಪ್ರಶ್ನೆಗಳನ್ನು ಕೂಡ ಕೇಳಿ, ಹಾಗೆ ಮಾಹಿತಿ ಇಷ್ಟ ಆದ್ರೆ ಶೇರ್ ಮಾಡಿ, ಧನ್ಯವಾದಗಳು.

( video credit : Harish AL's creativity )