ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ ನಿಮ್ಮ ಮದುವೆ ಆಗುವುದು ನಿಶ್ಚಿತ
ಹೌದು ದೇವರು ಇದ್ದಾನೆ ಎಂದು ಕೆಲವರು ನಂಬುತ್ತಾರೆ, ಇನ್ನೂ ಕೆಲವರು ನಂಬುವುದೆ ಇಲ್ಲ. ಈ ದೇವರನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಷಯಕ್ಕೆ ಬಿಟ್ಟಿದ್ದು, ಇಂದಿನ ಈ ಲೇಖನದಲ್ಲಿ ನಾವು ನಿಮಗೆ ಒಂದು ದೇವಸ್ಥಾನದ ಬಗ್ಗೆ ಮತ್ತು ಅಲ್ಲಿಯ ವಿಶೇಷತೆ ವೈಶಿಷ್ಟತೆಗಳ ಬಗ್ಗೆ ತಿಳಿಸಲಿದ್ದೇವೆ. ಹೌದು ಇದು ಬರುವುದು ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ಇರುವ ಅತ್ತಿವಟ್ಟ ಎಂಬ ಸ್ಥಳದಲ್ಲಿ ಇದು ಊರಿಂದ ಸ್ವಲ್ಪ ದೂರ ಊರ ಹೊರಗೆ ಈ ದೇವಸ್ತಾನ ಇದ್ದು ಅಲ್ಲಿ ಅನ್ನಪೂರ್ಣೇಶ್ವರಿ ದೇವಿ ಉದ್ಭವಿಸಿದ್ದಾಳೆ.
ಹೌದು ಅಲ್ಲಿಯ ಜನರ ಅಭಿಪ್ರಾಯ, ಆ ದೇವರ ಮೇಲಿನ ಅಪಾರ ನಂಬಿಕೆ, ಅವರಿಗೆ ಬಂದಂತಹ ಕಷ್ಟ ಎಂತಹುಗಳು ಇದ್ದವು, ಅವುಗಳಿಂದ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಳಿಕ ಹೇಗೆ ಪಾರಾದವು ಎನ್ನುವ ಅಂಶ ಅಭಿಪ್ರಾಯವನ್ನು ಅಲ್ಲಿಗೆ ಬಂದು ಅವರ ಕಷ್ಟ ದೂರದ ಮೇಲೆಯೇ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಿಳಿಸಲಾಗಿದೆ..ಇದು ಯಾವುದೇ ಕಟ್ಟುಕಥೆ ಅಲ್ಲ, ಬದಲಿಗೆ ಜನರ ಅಪಾರವಾದ ಆ ದೇವತೆ ಮೇಲಿನ ನಂಬಿಕೆ. ತರ್ಕಕ್ಕೆ ನಿಲುಕದಿರುವ ತೊಂದ್ರೆ ಸಮಸ್ಯೆ ಇಲ್ಲಿ ಬಗೆ ಹರಿಯುತ್ತವೆ.
ಅವರಿಗೆ ಬಂದಂತಹ ಕಷ್ಟ ಯಾವ ರೀತಿ ಇದ್ದರೂ ಈ ದೇವರಿಗೆ ಹರಕೆ ತೀರಿಸಿ ಬೆಲ್ಲದ ಪಣತಿ ಮಾಡಿ ಇಂತಿಷ್ಟು ವಾರ ಎಂಬಂತೆ ಅಲ್ಲಿ ದ್ವೀಪ ಉರಿಸಿದರೆ, ಯಾವ ಕಷ್ಟ ಇದ್ದರೂ ಬಗೆಹರಿಯುತ್ತದೆ ಎನ್ನುವ ದೊಡ್ಡ ನಂಬಿಕೆ ಇದೆ. ಅದು ಎಲ್ಲರಲ್ಲಿಯೂ ನಿಜ ಆಗಿದೆ ಕೂಡ. ನೀವು ಕೂಡ ಈ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳಬೇಕಾ..? ಹಾಗಿದ್ದರೆ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ಪೂರ್ತಿ ನೋಡಿ. ಅಲ್ಲಿಗೆ ಬಂದಂತಹ ಜನರು ಯಾವ ರೀತಿ ಸಮಸ್ಯೆ ಎದುರಿಸುತ್ತಿದ್ದರು, ಹಾಗೆ ಮದುವೆ ಆಗದೆ ಇರುವವರು, ಮದುವೆ ಆದಮೇಲೆ ಅವರಿಗೆ ಮಕ್ಕಳು ಆಗದಿರುವವರು,
ಓದು ವಿದ್ಯಾಭ್ಯಾಸ, ಕೆಲಸ, ಹಾಗೆ ಮಕ್ಕಳು ಕಾಯಿಲೆಯಿಂದ ಬಳಲುತ್ತಿದ್ದವರು, ಆಸ್ಪತ್ರೆಗೆ ಹೋದರೂ ಬಗೆಹರಿಯದ ಸಮಸ್ಯೆ, ಸಾಲ ಪಡೆದು ಅದನ್ನ ವಾಪಸ್ಸು ನೀಡದ ಕೆಲವರ ಮೊಂಡುತನ ಮತ್ತು ಲೋನ್ ವಿಚಾರವಾಗಿ ಕೆಲವರು ಅವರವರ ಸಮಸ್ಯೆ ಮತ್ತು ಇಲ್ಲಿಗೆ ಬಂದು ಹೋದ ಮೇಲೆ ಆದ ನಿವಾರಣೆ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಈ ದೇವತೆ ಬಗ್ಗೆ ಎಲ್ಲವನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೂರ್ತಿಯಾಗಿ ನೋಡಿ. ನಿಮಗೂ ಕೂಡ ಬಗೆಹರಿಯದ ಸಮಸ್ಯೆ ನಿಮ್ಮಲ್ಲಿ ಇದ್ದರೆ, ಒಂದು ಬಾರಿ ಈ ದೇವಸ್ಥಾನಕ್ಕೆ ಭೇಟಿ ನೀಡಿ. ಹೌದು ಖಂಡಿತ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ ಈ ದೇವರಲ್ಲಿ ಎಂದು ನಂಬಬಹುದು ಧನ್ಯವಾದ...
( video credit : Halli Tv )