ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ ದೇವಿ ದೇವಸ್ಥಾನ ;ಒಮ್ಮೆ ಭೇಟಿ ಕೊಡಿ

ನೊಂದು ಬಂದವರಿಗೆ  ಪರಿಹಾರ ಕೊಡುವ ಹಾಸನದ ಈ ಪುರದಮ್ಮ ದೇವಿ ದೇವಸ್ಥಾನ ;ಒಮ್ಮೆ ಭೇಟಿ ಕೊಡಿ

ಇನ್ನೂ ದೇವರ ಹೆಸರಿನಲ್ಲಿ ಈಗ ಸಾಲು ಸಾಲು ದೇವಾಲಯಗಳು ನಿರ್ಮಾಣ ಆಗಿದೆ ಎಂದು ಹೇಳಬಹುದು. ಈಗ ನಿರ್ಮಾಣ ಗೊಂಡಿರುವ ದೇವಸ್ಥಾನವು ವಿಭಿನ್ನ ಶಕ್ತಿ ಉಳ್ಳ ದೇವರು ಇದೆ ಎಂದು ಹೇಳಬಹುದು. ಇಂದಿನ ನಮ್ಮ ಲೇಖನದಲ್ಲಿ ಹಾಸನದಲ್ಲಿ ಇರುವ ಪುರದಮ್ಮ ಅವರ ಬಗ್ಗೆ ತಿಳಿಸಲು ಹೊರಟ್ಟಿದ್ದೇವೆ. ಇನ್ನೂ ಹಾಸನದ ಪುರದಮ್ಮ ದೇವಸ್ಥಾನ ಕರ್ನಾಟಕದ ಹಾಸನ ನಗರದಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದು ಎಂದ್ರೆ ತಪ್ಪಾಗಲಾರದು. ಈ ದೇವಸ್ಥಾನ ಪ್ರಮುಖವಾಗಿ ಶಕ್ತಿ ಮತ್ತು ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದಕ್ಕಾಗಿ ಪ್ರಸಿದ್ಧವಾಗಿದೆ. ಇದು ಹಾಸನದ ಪ್ರಮುಖ ಧಾರ್ಮಿಕ ಆಸ್ಥಾನಗಳಲ್ಲೊಂದು. ದೇವಸ್ಥಾನದ ಸುತ್ತಲೂ ವಿವಿಧ ವಿಧದ ಧಾರ್ಮಿಕ ಗೋಷ್ಠಿಗಳು ಇಲ್ಲಿ ಆಚರಣೆ ಮಾಡಿಕೊಂಡು ಬಂದಿದೆ ಎಂದು ಹೇಳಬಹುದು.

ಪುರದಮ್ಮ ದೇವಿಯು ಸಾಕ್ಷಾತ್ ಶಕ್ತಿ ದೇವತೆಗಳ ಸ್ವರೂಪವಾಗಿದೆ. ಈ ದೇವಿಯ ಶಕ್ತಿ ಮತ್ತು ಮಹಾಲಕ್ಷ್ಮಿ ರೂಪದಲ್ಲಿ ಪ್ರತಿಷ್ಠಿತಳಾಗಿದ್ದು, ಭಕ್ತರು ಅವಳನ್ನು ಅತ್ಯಂತ ಭಕ್ತಿಯಿಂದ ಪೂಜಿಸುತ್ತಾರೆ. ಅವಳ ದಯಾಪೂರಿತ ಸ್ವಭಾವ, ಕರುಣೆಯುಳ್ಳ ದೃಷ್ಟಿ ಮತ್ತು ಭಕ್ತರ ಮಧುರ ಪ್ರೀತಿ ಇವುಗಳಿಂದ ಪ್ರಸಿದ್ಧಳಾಗಿದ್ದಾಳೆ. ಹಾಸನದ ಪೂರದಮ್ಮ ದೇವಸ್ಥಾನವು ಅವಳ ಪ್ರಮುಖ ಪೂಜಾ ಸ್ಥಳ ವಿಶೇಷತೆ ಎಂದ್ರೆ ಈ ತಾಯಿಯ ಅಲಂಕಾರ ಹಾಗೂ ಬಲಿ ಕೊಡುವ ವಿಧಾನ. ಇಲ್ಲಿ ದೇವಿಗೆ ತಾಳಿ ಬಿಟ್ಟು ಯಾವ ಒಡವೆ ವಸ್ತ್ರಗಳನ್ನು ಹಾಕುವುದಿಲ್ಲ. ಹಾಗೆಯೇ ಮುಂಚೆ ಯಾವ ದೇವಸ್ಥಾನವು ಇರಲಿಲ್ಲ ಈಗ ಮಠದ ದೇಣಿಗೆಯಿಂದ ದೇವಾಲಯ ನಿರ್ಮಾಣ ಆಗಿದೆ. ಹಾಗೆಯೇ ಎಲ್ಲಾ ದೇವಸ್ಥಾನದಲ್ಲಿ ಕುರಿ ಕೋಳಿ ಬಲಿ ಕೊಡುವುದು ವಾಡಿಕೆ ಆದರೆ ಇಲ್ಲಿಯ ಅನುಕರಣೆಯೆ ಬೇರೆ ಎಂದು ಹೇಳಬಹುದು.   

ಇಲ್ಲಿಯ ದೇವಿಗೆ ಹಂದೀ ಎಂದ್ರೆ ಬಹಳ ಅಚ್ಚು ಮೆಚ್ಚು. ಹಾಗಾಗಿ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಡಲು ಈ ತಾಯಿಗೆ ಭಕ್ತರು ಇಲ್ಲಿ ಹಂದಿಯನ್ನು ಬಲಿ ಕೊಡುತ್ತಾರೆ. ಇನ್ನೂ ಅದನ್ನು ತಿನ್ನಬೇಕು ಎಂದಿಲ್ಲ. ದೇವರಿಗೆ ಬಲಿ ಕೊಟ್ಟು ತಮ್ಮ ಕಷ್ಟಗಳನ್ನು ಪರಿಹಾರ ಮಾಡುವಂತೆ ಬೇಡಿಕೊಂಡರೆ ಸಾಕು ಆದಷ್ಟು ಬೇಗ ಅವರ ಕಷ್ಟ ಬಗೆಹರಿಯಲಿದೆ. ಇನ್ನೂ ದೇವಿಯ ಸನ್ನಿಧಾನದಲ್ಲಿ ಈ ರೀತಿಯ ಬಲಿಯನ್ನು ಕೊಡುವ ಮುನ್ನ ಹೋಗಿ ಹಂದಿ ಕೊಡಿ ಎಂದು ಕೇಳಬಾರದು ಹಾಗೆಯೇ ಬಲಿ ಕೊಡುವಾಗ ಕೊಡ ತಮ್ಮ ಕಷ್ಟಕ್ಕೆ ಹಂದಿ ಕೊಡುತ್ತಿದ್ದೇವೆ ಎಂದು ಹೇಳುವಂತಿಲ್ಲ. ಅದರ ಬದಲಿಗೆ ಭೇಟೆ ಎಂಬ ಪದವನ್ನು ಬಳಸಬೇಕು. ಈ ತಾಯಿಯನ್ನು ನಂಬಿ ಕಷ್ಟಗಳನ್ನು ಹೊತ್ತು ಬಂದವರಿಗೆ ಯಾರಿಗೂ ಕೊಡ ಇಲ್ಲಿ ಮೋಸ ನಡೆಯುವುದಿಲ್ಲ ಎಂದು ಹೇಳಬಹುದು. ( video credit : SR TV KANNADA )