ಭಕ್ತರು ಕಷ್ಟಕ್ಕೆ ದೇವಸ್ಥಾನದಲ್ಲಿ ಉತ್ತರ ನೀಡುವ ಚೌಡೇಶ್ವರಿ ದೇವಿ! ಆ ದೇವಸ್ಥಾನ ಎಲ್ಲಿದೆ ಗೊತ್ತಾ?

ಭಕ್ತರು ಕಷ್ಟಕ್ಕೆ ದೇವಸ್ಥಾನದಲ್ಲಿ ಉತ್ತರ ನೀಡುವ ಚೌಡೇಶ್ವರಿ ದೇವಿ! ಆ ದೇವಸ್ಥಾನ ಎಲ್ಲಿದೆ ಗೊತ್ತಾ?

ಕಷ್ಟ ಎಂದು ಬಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ದೇವರು ಮಾತ್ರ. ಇನ್ನೂ ದೇವರಿಗೆ ಹಲವಾರು ರೂಪ ಆದ್ರೆ ಶಕ್ತಿ ಮಾತ್ರ ಒಂದೇ ಎಂದು ಹೇಳಬಹುದು. ಈಗ ದೇವಸ್ತಾನ ಎಂದರೆ ಅಪಾರ ಸಂಖ್ಯೆಯಲ್ಲಿ ಹುಟ್ಟಿಕೊಂಡಿದ್ದು ಒಂದೊಂದು ದೇವಾಲಯಗಳಲ್ಲಿ ಕೊಡ ತನ್ನದೇ ಆದ ಶಕ್ತಿಗಳಿಂದ ಪ್ರಸಿದ್ದಿಯನ್ನು ಪಡೆದಿದೆ. ಇನ್ನೂ ಇಂದಿನ ನಮ್ಮ ಲೇಖನದಲ್ಲಿ ನಾವು ಕಲ್ಸದ ಚೌಡೆಶ್ವರಿಯ ಬಗ್ಗೆ ತಿಳಿಸಲು ಹೊರಟ್ಟಿದ್ದೆವೆ. ಇನ್ನೂ ಈ ದೇಗುಲದ ಶಕ್ತಿಯ ಬಗ್ಗೆ ಹೇಳುವುದಾದರೆ ನಿಮ್ಮ ಕಷ್ಟಗಳಿಗೆ ಅಲ್ಲಿಯೇ ಪರಿಹಾರ ಕೊಡ ಸೋಚಿಸಿ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತದೆ. ಈ ಶಕ್ತಿಯ ದೇಗುಲಕ್ಕೆ ಈ ಹಿಂದೆ ಪ್ರಧಾನಿ ಕೊಡ ನಂಬಿ  ಭೇಟಿ ನೀಡಿದ್ದು ಉಂಟು. ಆ ದೇಗುಲ ಯಾವುದು ಹಾಗೂ ಎಲ್ಲಿದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಚೌಡೇಶ್ವರಿ ದೇವಿ ಭಾರತೀಯ ಹಿಂದೂ ಧರ್ಮದಲ್ಲಿ ಪೂಜೆಯಾಗುವ ದೇವತೆಗಳಲ್ಲಿ ಒಬ್ಬರು ಎಂದು ಹೇಳಬಹುದು. ಇನ್ನೂ ಈಕೆ ಶಿವನ ಪತ್ನಿಯಾಗಿ ಅವನ ಶಕ್ತಿರೂಪವಾಗಿದ್ದು, ಅವಳ ವಾಹನ ವೃಷಭವಾಗಿದೆ. ಅವಳನ್ನು ಮೂರು ನಕ್ಷತ್ರಗಳ ದೇವತೆಯಾದ ಬ್ರಹ್ಮಚಾರಿಣಿ ಎನ್ನುತ್ತಾರೆ. ಚೌಡೇಶ್ವರಿ ದೇವಿಯ ಪೂಜೆ ಹಲವಾರು ಭಾಗಗಳಲ್ಲಿ ಭಾರತದ ವಿವಿಧ ಭಾಗಗಳಲ್ಲಿ ನಡೆಯುತ್ತದೆ. ಈ ದೇವಸ್ಥಾನವು ದಸರಘಟ್ಟ ಚೌಡೇಶ್ವರಿ ದೇವಿ ಕರ್ನಾಟಕದಲ್ಲಿ ಪ್ರಸಿದ್ಧವಾದ ದೇವಸ್ಥಾನ. ಈ ದೇವಸ್ಥಾನ ದಸರಘಟ್ಟ ಗ್ರಾಮದಲ್ಲಿದೆ ( ತುಮಕೂರು  ) ಮತ್ತು ಅದು ಚೌಡೇಶ್ವರಿ ದೇವಿಗೆ ಮೀಸಲಾಗಿದೆ. ಇದು ಭಕ್ತರಿಗೆ ಮತ್ತು ಪ್ರಾರ್ಥನೆಗೆ ಪ್ರಸಿದ್ಧವಾಗಿದೆ. ಈ ದೇವಸ್ಥಾನದ ದರ್ಶನದಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಧಾರ್ಮಿಕ ಆನಂದ ಅನುಭವವಾಗುತ್ತದೆ.   

ಇನ್ನೂ ಈ ದೇವಸ್ತಾನದ ವಿಶೇಷತೆ ಎಂದರೆ ಭಕ್ತರು ತಮ್ಮ ಕಷ್ಟಗಳನ್ನು ಮನಸಿನಲ್ಲಿ ಅಪಾರ ಭಕ್ತಿಯಿಂದ ದೇವರ ವಿಗ್ರಹದ ಮುಂದೆ ಬೇಡಿಕೊಂಡಾಗ ಕಳಸದ ತುದಿ ಭಾಗದಿಂದ ಹಲಗೆಯ ಮೇಲೆ ಭಕ್ತರು ತಂದಿದ್ದ ರಾಗಿ ಹಿಟ್ಟು ಹಾಗೂ ಹರುಷಿನವನ್ನು ಹರಡಿದ್ದು ಅದರ ಮೇಲೆ ಕಳಸದ ತುದಿ ಭಾಗವನ್ನು ಬಳಸಿ ಅವರ ಕಷ್ಟಕ್ಕೆ ಪರಿಹಾರವನ್ನು ಬರೆದು ಸೂಚಿಸುತ್ತದೆ. ಇನ್ನೂ ವರ್ಷಕ್ಕೆ ಒಮ್ಮೆ ನಡೆಯುವ ಜಾತ್ರೆಯಲ್ಲಿ ಕೊಡ ದೇವ್ರ ಸನ್ನಿಧಾನಕ್ಕೆ ಮುಳ್ಳುಗಳ ಮೇಲೆ ಅಲ್ಲಿ ಬಂದಿರುವ ಭಕ್ತಾದಿಗಳು ನಡೆದು ಹೋದರು ಕೊಡ ಅವರಿಗೆ ಯಾವ ನೋವು ಹಾಗೂ ಗಾಯ ತಾಗಲುವುದಿಲ್ಲ. ಇನ್ನೂ ಈ ವಿಶೇಷ ಶಕ್ತಿಯುಳ್ಳ ದೇವಸ್ತಾನಕ್ಕೆ ನೀವು ಒಮ್ಮೆ ಭೇಟಿ ನೀಡಿ ನಿಮ್ಮ ಕಷ್ಟಗಳಿಗೆ ಪರಿಹಾರ ತಿಳಿದುಕೊಳ್ಳಿ ಎಂದು ನಾವು ಕೊಡ ಆಶಿಸುತ್ತೇವೆ.

( video credit : FOCUS )