ಸ್ವಂತ ಜಾಗ ಖರೀದಿ ಮಾಡಬೇಕು ಎನ್ನುವ ಕನಸು ಹೊತ್ತ ಜನರಿಗೆ ಈ ದೇವಸ್ತಾನ ಒಂದು ದಾರಿದೀಪ! ಆ ದೇವಸ್ತಾನ ಯಾವುದು ಗೊತ್ತಾ?
ಭೂವರಾಹ ಸ್ವಾಮಿ ದೇವಸ್ಥಾನ ಭಕ್ತರಲ್ಲಿ ಪ್ರಸಿದ್ಧವಾಗಿದೆ. ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಹೊನವರ ನಗರದಲ್ಲಿ ಸ್ಥಿತವಿದೆ ಹಾಗೆಯೇ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಕೊಡ ಇದೆ. ಇನ್ನೂ ಈ ಎರಡು ದೇವಸ್ಥಾನಗಳಲ್ಲಿ ಹೆಚ್ಚಿನ ಪ್ರಸಿದ್ದಿ ಪಡೆದಿರುವ ದೇವಸ್ತಾನ ಎಂದ್ರೆ ಅದು ಮಂಡ್ಯ ಜಿಲ್ಲೆಯಲ್ಲಿ ಇರುವ ಭೂವರಾಹ ಸ್ವಾಮಿ ದೇವಸ್ಥಾನ. ಈ ದೇವಸ್ಥಾನವು ವರಾಹ ಅವತಾರವನ್ನು ಪಡೆದ 18ಅಡಿಯಲ್ಲಿ ಕೆತ್ತನೆ ಮಾಡಿರುವ ವಿಷ್ಣು ದೇವರನ್ನು ಹೇಮಾವತಿ ನದಿಯ ಮಡಿಲಿನಲ್ಲಿ ಆರಾಧಿಸುವ ಕೇಂದ್ರವಾಗಿದೆ. ದೇವಸ್ಥಾನದ ಆರಾಧಕರು ವಿಭಿನ್ನ ಭಾಗಗಳಿಂದ ಬರುತ್ತಾರೆ ಮತ್ತು ಇಲ್ಲಿ ಹೊಸ ಮಹಿಮೆಯನ್ನು ಕೊಡ ಕಾಣುತ್ತಾರೆ. ಹಾಗಾಗಿ ಹೋರ ರಾಜ್ಯಗಳಿಂದಲೂ ಕೊಡ ಈ ದೇವಸ್ತಾನಕ್ಕೆ ಭೇಟಿ ನೀಡುವವರು ಹೆಚ್ಚಾಗಿ ಬರುತ್ತಾರೆ.
ಭೂವರಾಹ ಸ್ವಾಮಿ ದೇವಸ್ಥಾನದ ವಿಶೇಷತೆಗಳಲ್ಲಿ ಕೆಲವು ಮುಖ್ಯವಾದವುಗಳು ಕೊಡ ಅಡಗಿವೆ. ವರಾಹ ಅವತಾರ ದೇವಸ್ಥಾನದ ಮುಖ್ಯ ಉದ್ದೇಶವೇ ವರಹ ಅವತಾರವನ್ನು ಪಡೆದ ವಿಷ್ಣು ದೇವರನ್ನು ಆರಾಧಿಸುವುದು. ಈ ಅವತಾರದ ಮೂರು ಮುಖಗಳು ವರಾಹ, ನೃಸಿಂಹ, ವಾಮನ ರೂಪಗಳು ಆಗಿವೆ. ಭಕ್ತರಿಗೆ ಧಾರ್ಮಿಕ ಮುದ್ರೆಗಳನ್ನು ಬಾಳ್ಗೊಟ್ಟು ಮಂಗಳ ದರ್ಶನ ನೀಡುವ ಹಡಗು ಈ ದೇವಸ್ಥಾನದಲ್ಲಿ ಪ್ರಸಿದ್ಧ. ಇನ್ನೂ ಈ ದೇವಸ್ತಾನಕ್ಕೆ ಮನೆ ಕಟ್ಟುವವರು ಹಾಗೂ ಕಟ್ಟಬೇಕು ಎಂದು ಕೊಂಡಿದ್ದವರು ಈ ದೇವಸ್ತಾನಕ್ಕೆ ಬಂದು ಅಲ್ಲಿನ ಮಣ್ಣು ಅಥವಾ ಇಟ್ಟಿಗೆಯನ್ನು ತೆಗೆದುಕೊಂಡು ಹೋದಲ್ಲಿ ಮನೆ ಕಟ್ಟಲು ಕಾಲ ಕೊಡಿಬರುವುದು ಎಂಬ ನಂಬಿಕೆ ಇದೆ.
ಇನ್ನೂ ಯಾರಿಗೆ ತಾನೇ ತಮ್ಮದೇ ಆದ ಸೂರು ಇರಬೇಕು ಎಂದು ಆಸೆ ಇರುವುದಿಲ್ಲ ಹೇಳಿ. ಇನ್ನೂ ತಮ್ಮ ಆಸೆಯನ್ನು ನೆರವೇರಿಸಿಕೊಳ್ಳಬೇಕು ಎಂದು ಸಾಕಷ್ಟು ದಿನಗಳಿಂದ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರು ಕೊಡ ಕಾಲ ಕೊಡಿ ಬಂದಿರದೆ ಇದ್ದರೆ ಅಂತವರು ತಮ್ಮ ಕನಸಿನ ಮನೆಯ ಅಥವಾ ಜಾಗದ ನಿರ್ಮಾಣಕ್ಕಾಗಿ ಈ ದೇವ್ರ ಮೊರೆ ಹೋಗಿ ಈ ದೇವಸ್ಥಾನದಲ್ಲಿ ಅಲ್ಲಿ ಇರುವ ಇಟ್ಟಿಗೆಯನ್ನು ಪೂಜೆ ಮಾಡಿಸಿ ತಂದ್ರೆ ಅಥವಾ ದೇವಸ್ತಾನದ ಬಲಭಾಗದಲ್ಲಿ ಇರುವ ಮಣ್ಣನ್ನು ತಂದು ಮನೆಯಲ್ಲಿ ಇಟ್ಟರೆ ನಿಮ್ಮ ಭೂ ಸಂಬಂಧಿತ ಯಾವ ಸಮಸ್ಯೆ ಇದ್ದರೂ ಪರಿಹಾರ ಅಗತ್ತದೆ ಎಂಬ ನಂಬಿಕೆ ಈ ದೇವಸ್ತಾನಕ್ಕೆ ಇದೆ. ಹಾಗೆಯೇ ಇಲ್ಲಿಗೆ ನಮ್ಮ ಕರ್ನಾಟಕದಲ್ಲಿ ಇರುವವರಿಗಿಂತ ಹೆಚ್ಚಾಗಿ ಹೈದ್ರಾಬಾದ್ ಹಾಗೂ ಮುಂಬೈ ಜನಗಳು ಹೆಚ್ಚಾಗಿ ಭೇಟಿ ನೀಡುತ್ತಾರೆ ಎಂಬ ಮಾತು ಕೊಡ ಇದೆ.
ಇವು ಕೇವಲ ಕೆಲವು ವಿಶೇಷತೆಗಳು ಮಾತ್ರ, ಇದು ಭಕ್ತರಿಗೆ ದೈವೀಯ ಅನುಭವ ನೀಡುವ ಪವಿತ್ರ ಸ್ಥಳ ಎಂದ್ರೆ ತಪ್ಪಾಗಲಾರದು. ( video credit : Kurukshetra ಕುರುಕ್ಷೇತ್ರ )