ಕ್ರಿಸ್ ಗೇಲ್ ಅವರು ಮತ್ತೆ ರೀ ಎಂಟ್ರಿ ನೀಡುವ ಸುಳಿವು ಕೊಟ್ಟ ವಿರಾಟ್! ಮಾಜಿ ನಾಯಕ ಹೇಳಿದ್ದೇನು ಗೊತ್ತಾ?

ಕ್ರಿಸ್ ಗೇಲ್ ಅವರು ಮತ್ತೆ ರೀ ಎಂಟ್ರಿ ನೀಡುವ ಸುಳಿವು ಕೊಟ್ಟ ವಿರಾಟ್! ಮಾಜಿ ನಾಯಕ ಹೇಳಿದ್ದೇನು ಗೊತ್ತಾ?

ಚಿಕ್ಕ ಭರವಸೆ ಹಾಗೂ ನಂಬಿಕೆ ಇದ್ದರೆ ಅಸಾಧ್ಯವನ್ನು ಕೊಡ ಸಾಧ್ಯ ಮಾಡಬಹುದು ಎಂಬ ಮಾತಿಗೆ ತಕ್ಕ ಉದಾಹರಣೆ ಎಂದರೆ ಅದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಮೊದಲನೇ ಹಂತದಲ್ಲಿ ಎಲ್ಲಾ ಪದ್ಯಂದಲ್ಲಿ ಸೋತು ಮೊದಲು ಐಪಿಎಲ್ ಇಂದ ಹೋರ ಬೀಳುವ ಎಂದು ಟೀಕೆ ಮಾಡಿಸಿಕೊಂಡ ಈ ತಂಡ ತನ್ನ ಎರಡನೇ ಹಂತದಲ್ಲಿ ಭರ್ಜರಿ ಗೆಲುವನ್ನು ಪಡೆದುಕೊಂದು ಪ್ಲೇ ಆಫ್ ಪ್ರವೇಶ ಪಡೆದುಕೊಂಡಿದೆ. ಐಪಿಎಲ್ 2024 ರಲ್ಲಿ ಪ್ಲೇಆಫ್ ಪ್ರವೇಶಿಸಲು RCB ಯ ನಿರ್ಣಾಯಕ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವಾಗಿತ್ತು.  ಆರ್‌ಸಿಬಿಗೆ ಪ್ಲೇಆಫ್ ಸ್ಥಾನವನ್ನು ಪಡೆಯಲು, ಸಿಎಸ್‌ಕೆಗೆ ಹೋಲಿಸಿದರೆ ಕಡಿಮೆ ನಿವ್ವಳ ರನ್ ರೇಟ್‌ನಿಂದಾಗಿ ಅವರು ಗಮನಾರ್ಹ ಅಂತರದಿಂದ ಗೆಲ್ಲಬೇಕಾಗಿತ್ತು.ನಿರ್ದಿಷ್ಟವಾಗಿ ಹೇಳುವುದಾದರೆ, RCB ಮೊದಲು ಬ್ಯಾಟಿಂಗ್ ಮಾಡಿದರೆ ಕನಿಷ್ಠ 200 ರನ್ ಗಳಿಸಬೇಕು ಮತ್ತು 18 ರನ್‌ಗಳಿಂದ ಗೆಲ್ಲಬೇಕು ಅಥವಾ 18.1 ಓವರ್‌ಗಳಲ್ಲಿ 220 ರನ್ ಗುರಿಯನ್ನು ಬೆನ್ನಟ್ಟಬೇಕಿತ್ತು. 

219 ಟಾರ್ಗೆಟ್ ಕೊಟ್ಟು ಫಿಲ್ಡಿಂಗ್ ಮಾಡಿದ RCB ಬಹಳ ಅತ್ಯತ್ತಮ ಪ್ರದರ್ಶನ ನೀಡಿ ಭರ್ಜರಿ ವಿಜಯ ಸಾಧಿಸಿದ್ದು ಅಲ್ಲದೆ ಟಾಪ್ ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶ ಕೊಡ ಪಡೆದುಕೊಂಡಿದೆ. ಇನ್ನೂ ಈ ಖುಷಿಯನ್ನು ನಾವು ಸುಮಾರು ಮೂರು ದಿನಗಳಿಂದ ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಈ ರೀತಿ ಟಫ್  ಕಾಂಪಿಟೇಶನ್ ನೀಡಿರುವುದು ಎಲ್ಲರಲ್ಲೂ RCB ತಂಡಕ್ಕೆ ಗೌರವನ್ನೆ ಹೆಚ್ಚಿಸಿದೆ ಎಂದ್ರೆ ತಪ್ಪಾಗಲಾರದು.ಇನ್ನೂ ಈ ನಿರ್ಣಾಯಕ ಪಂದ್ಯವನ್ನು ನೋಡಲು ಸಾಕಷ್ಟು ಗಣ್ಯರು ಕೊಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಗಿ ಆಗಿದ್ದರು. ಎಲ್ಲರ ನಡುವೆ ಗಮನ ಸೆಳೆದಿದ್ದು ಎಂದ್ರೆ ಕ್ರಿಸ್ ಗೇಲ್ ಎಂದು ಹೇಳಬಹುದು.  

ಕ್ರಿಸ್ ಗೇಲ್ ಅವರು ಎಲ್ಲರ ಗಮನ ಸೆಳೆದದ್ದು ಅಲ್ಲದೆ RCB ಅವರ ವಿಜೇಯಕ್ಕೆ ಸಾಕ್ಷಿ ಆಗಿದ್ದರು. ಇನ್ನೂ ಈತ ಕ್ರಿಸ್ ಗೇಲ್, ಜಮೈಕಾದ ಕ್ರಿಕೆಟ್ ಆಟಗಾರ, ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಟಗಾರನಾಗಿ ಜನಪ್ರಿಯನಾದ. 2011 ರಿಂದ 2017ರವರೆಗೆ RCBಗಾಗಿ ಆಟವಾಡಿದ ಗೇಲ್, ತನ್ನ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದ ತಂಡಕ್ಕೆ ಅನೇಕ ಗೆಲುವುಗಳನ್ನು ತಂದುಕೊಟ್ಟಿದ್ದಾನೆ. ಗೇಲ್ ತನ್ನ ಸ್ಫೋಟಕ ಶೈಲಿ ಮತ್ತು ಉಲ್ಲಾಸಭರಿತ ವ್ಯಕ್ತಿತ್ವದಿಂದ RCB ಅಭಿಮಾನಿಗಳಲ್ಲಿ ಸದಾ ಪ್ರಿಯನಾಗಿದ್ದ. IPL ನಲ್ಲಿಯೂ ತಮ್ಮ ಪಾತ್ರದ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಎಂದಿಗೂ ನೆನಪಾಗುವ ಕ್ಷಣಗಳನ್ನು ನೀಡಿದ್ದಾರೆ. ಎಲ್ಲಾ ಮುಗಿದ ಮೇಲೆ ಕಾಕ ನೀವು ಕಮ್ಬ್ಯಾಕ್ ಮಾಡಬೇಕು ನಮ್ಮ ತಂಡಕ್ಕೆ ಎಂದು ಮನವಿ ಕೊಡ ವಿರಾಟ್ ಅವರು ಮಾಡಿದ್ದಾರೆ.