ವಿನೋದ್ ರಾಜ್ ಪುತ್ರ ಓದಿದ್ದು ಏನು ಗೊತ್ತಾ..? ಅವರ ತಿಂಗಳ ಸಂಬಳ ಇಷ್ಟಿದೆ ನೋಡಿ

ವಿನೋದ್ ರಾಜ್ ಪುತ್ರ ಓದಿದ್ದು ಏನು ಗೊತ್ತಾ..? ಅವರ ತಿಂಗಳ ಸಂಬಳ ಇಷ್ಟಿದೆ ನೋಡಿ

ನಟಿ ಲೀಲಾವತಿ ಅವರು ಇತ್ತೀಚಿಗೆ ವಿಧಿವಶರಾದರು. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಾಗೂ ತುಳು ಭಾಷೆಯಲ್ಲಿ ಅಭಿನಯ ಮಾಡಿದ್ದು ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದವರು ಲೀಲಾವತಿಯವರು.. ಹೌದು, ಇವರ ಅಗಲಿಕೆ ಇನ್ನೂ ಕೂಡ ಅವರ ಮಗನಾದ ವಿನೋದ್ ರಾಜ್ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೆಚ್ಚು ನೋವು ಇದೆ ಎನ್ನಬಹುದು. ಹೌದು ಹೀಗಿರುವಾಗ ಮಾಧ್ಯಮದವರ ಜೊತೆ ಮಾತನಾಡಿದ್ದು ತಮ್ಮ ತಾಯಿಯ ಕೊನೆ ಆಸೆ ಏನಾಗಿತ್ತು ಎಂದು ತುಂಬಾ ಮುಕ್ತವಾಗಿ ಹೇಳಿಕೊಂಡಿದ್ದಾರೆ ವಿನೋದ್. ಜೊತೆಗೆ ತನ್ನ ಹೆಂಡತಿ ಮತ್ತು ಮಗನನ್ನು ಇಷ್ಟು ದಿವಸ ಯಾಕೆ ತಮ್ಮಿಂದ ದೂರ ಇಡಲಾಗಿತ್ತು ಎನ್ನುವ ವಿಚಾರವನ್ನು ಕೂಡ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ನನ್ನ ತಾಯಿಗೆ ವಿಶಿಷ್ಟ ಪುಣ್ಯದ ದೇವಸ್ಥಾನಗಳಿಗೆ ಭೇಟಿ ನೀಡುವ ಕನಸು ಇತ್ತು, ಆದರೆ ಅದು ಈಡೇರಲಿಲ್ಲ, ಅವರಿಗಾಗಿ ನಾವು ಒಂದು ಸ್ಮಾರಕ ಕಟ್ಟುತ್ತೇವೆ. ಹಾಗೆ ಅಮ್ಮನ ಗುಡಿ ಇರಬೇಕು. ಅದಕ್ಕೆ ಇನ್ನೂ ಸಮಯ ಇದೆ ಆಲೋಚನೆ ಮಾಡಿ ಆ ಕಾರ್ಯವನ್ನು ಕೈಗೊಳ್ಳುತ್ತೇವೆ ಎಂದರು ವಿನೋದ್ ರಾಜ್. ಬಳಿಕ ತನ್ನ ಮಗನ ಬಗ್ಗೆ ಮಾತನಾಡಿದ ವಿನೋದ್ ರಾಜ್ ಅವರು, ನನ್ನ ಹೆಂಡತಿ ಮತ್ತು ಮಗ ಇಲ್ಲಿಯೇ ಇದ್ದರೆ ಕೆಲವೊಂದಿಷ್ಟು ಮಾತುಗಳು ಬರಬಹುದೆಂದು ನನ್ನ ಹಾಗೆ ಅವನು ಸಿನಿಮಾ ರಂಗಕ್ಕೆ ಬರುವುದು ನನ್ನ ಅಮ್ಮನಿಗೆ ಇಷ್ಟ ಇರಲಿಲ್ಲ. ಅವನಿಗೆ ಸಿನಿಮಾ ರಂಗದ ಸಹವಾಸವೇ ಬೇಡ ಎಂದು ದೂರ ಇಟ್ಟು ವಿದ್ಯಾಭ್ಯಾಸದ ಸಲುವಾಗಿ ನನ್ನಮ್ಮ ದೂರ ಇರುವಂತೆ ಹೇಳಿದ್ದು , ಮದ್ರಾಸ್ ನಲ್ಲಿ ನನ್ನ ಹೆಂಡತಿ ಮತ್ತು ಮಗ ಇಷ್ಟು ದಿವಸ ದೂರ ಇದ್ದರು. ಹಾಗೆ ನನ್ನ ಮಗ ಚೆನ್ನೈ ನಲ್ಲಿದ್ದರೂ ಕನ್ನಡವನ್ನ ತುಂಬಾ ಚೆನ್ನಾಗಿ ಮಾತನಾಡುತ್ತಾನೆ.

ಹಾಗೆ ನಾವೆಲ್ಲ ಅಂದುಕೊಂಡಂತೆ ತುಂಬಾ ಚೆನ್ನಾಗಿ ವಿದ್ಯಾಭ್ಯಾಸ ಮುಗಿಸಿ ತಿಂಗಳಿಗೆ ಇದೀಗ 50,000 ಸಂಬಳ ಪಡೆಯುತ್ತಾನೆ ಎಂದು ಖುಷಿ ವ್ಯಕ್ತಪಡಿಸಿದರು. ಮಾಹಿತಿ ಬಂದಿರುವ ಪ್ರಕಾರ ನಟ ವಿನೋದ್ ರಾಜ್ ಅವರ ಪುತ್ರ ಯುವರಾಜ್ ಒಬ್ಬರು ಸಾಫ್ಟ್ವೇರ್ ಎಂಜಿನಿಯರ್ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...