ವಿನೋದ್ ರಾಜ್ ಅವರಿಗೆ ಇಬ್ಬರು ಮಕ್ಕಳಿದ್ದರು ಕೊಡ ಮುಚ್ಚಿಟ್ಟಿದ್ಯಾಕೆ! ಅಸಲಿ ಕಾರಣ ಏನು ಗೊತ್ತಾ?
![ವಿನೋದ್ ರಾಜ್ ಅವರಿಗೆ ಇಬ್ಬರು ಮಕ್ಕಳಿದ್ದರು ಕೊಡ ಮುಚ್ಚಿಟ್ಟಿದ್ಯಾಕೆ! ಅಸಲಿ ಕಾರಣ ಏನು ಗೊತ್ತಾ? ವಿನೋದ್ ರಾಜ್ ಅವರಿಗೆ ಇಬ್ಬರು ಮಕ್ಕಳಿದ್ದರು ಕೊಡ ಮುಚ್ಚಿಟ್ಟಿದ್ಯಾಕೆ! ಅಸಲಿ ಕಾರಣ ಏನು ಗೊತ್ತಾ?](/news_images/2023/12/vinod-raj-daughter-and-son1702105217.jpg)
ಇಂದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಕಪ್ಪು ಛಾಯೆ ಮೂಡಿದೆ ಎಂದೇ ಹೇಳಬಹುದು. ಇದಕ್ಕೆ ಕಾರಣ ಹಿರಿಯ ನಟಿ ಲೀಲಾವತಿ ಅಮ್ಮನವರ ಅಗಲಿಕೆ. ಇನ್ನೂ ಈ ನಟಿ 1949ರಿಂದ ಚಿತ್ರ ರಂಗದಲ್ಲಿ ತೊಡಗಿಸಿಕೊಂಡವರು. ಆಗಿನ ಕಾಲದಲ್ಲಿ ನಟರ ಸರಿಸಮಾನವಾಗಿ ಸಂಭಾವನೆ ಪಡೆಯುತ್ತಿದ್ದ ಏಕೈಕ ನಟಿ ಎಂದೇ ಹೇಳಬಹುದು. ಇನ್ನೂ ಈ ನಟಿ ಮಂಗಳೂರಿನ ಬೆಳ್ತಂಗಡಿ ಯಲ್ಲಿ ಒಂದು ಬಡತನದ ಕುಟುಂಬದಲ್ಲಿ ಜನಿಸಿದವರು. ಇನ್ನೂ ಇವರ ಮನೆಯಲ್ಲಿ ಬಡತನ ಇದ್ದರೂ ಕೊಡ ನೆಮ್ಮದಿಯ ಜೀವನಕ್ಕೆ ಕಡಿಮೆ ಇರಲಿಲ್ಲ. ಆದರೆ ವಿಧಿಯ ಮುಂದೆ ಎಲ್ಲರೂ ಕೊಡ ತಲೆ ಬಾಗಲೆ ಬೇಕು ಏಕೆಂದ್ರೆ ಕೇವಲ ಆರನೇ ವಯಸ್ಸಿನಲ್ಲಿ ತನ್ನ ಅಪ್ಪ ಅಮ್ಮನನ್ನ ಕಳೆದುಕೊಳ್ಳುತ್ತಾರೆ.
ಆಗ ಆಶ್ರಯಕ್ಕಾಗಿ ಚಿಕ್ಕಮ್ಮನ ಮನೆಗೆ ಬರುತ್ತಾರೆ ಆದರೆ ಅಲ್ಲಿನ ಕಡು ಬಡತನ ಇವರ ಓದನ್ನು ಕಿತ್ತುಕೊಂಡು ಮನೆ ಕೆಲ್ಸಕ್ಕೆ ಮೈಸೂರಿನ ಬಳಿ ಬರುತ್ತಾರೆ. ಚಿಕ್ಕವಯಸ್ಸಿನಲ್ಲಿ ಸಿನಿಮಾಗಳ ಹುಚ್ಚಿದ್ದ ಈಕೆಗೆ ತನ್ನ ಮನೆಯ ಬಳಿ ಇರುವ ನಾಟಕ ರಂಗ ಇವರ ಮನೋರಂಜನೆಯ ತಾಣ ಆಗಿರುತ್ತದೆ. ಅದೇ ಹುಮ್ಮಸ್ಸಿನಲ್ಲಿ ಕೆಲವು ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶ ದಿಂದ ಪ್ರಯತ್ನ ಮಾಡಿದ ಇವರಿಗೆ 1949ರಲ್ಲಿ ಸಂಪೂರ್ಣ ನಟಿ ಆಗುವ ಅವಕಾಶ ಕೊಡ ಸಿಗುತ್ತವೆ. ತನ್ನ ಮೊದಲ ಪ್ರಯತ್ನದಲ್ಲಿ ಗೆದ್ದ ಈ ನಟಿ ಕನ್ನಡ ಚಿತ್ರಗಳ ಜೊತೆಗೆ ತಮಿಳು, ತೆಲುಗು ಮಲಯಾಳಂ ಭಾಷೆಯಲ್ಲಿ ಸೇರಿಸಿ ಒಟ್ಟಾರೆ 600ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಕೆಲ ಕಾರಣದಿಂದ ಚಿತ್ರರಂಗದಿಂದ ದೂರ ಉಳಿಯುತ್ತಾರೆ.
ಆ ನಂತರ ಬಂದ ಇವರ ಮಗ ವಿನೋದ್ ರಾಜ್ ಅವರು ಒಳ್ಳೆಯ ಹೆಸರು ಮಾಡಿದರು ಕೂಡ ಅವಕಾಶ ವಂಚಿತರಾಗಿ ಚಿತ್ರ ರಂಗದಿಂದ ದೂರ ಉಳಿಯುತ್ತಾರೆ.ಆ ನಂತರ ಇವರು ಆಯ್ಕೆ ಮಾಡಿಕೊಂಡಿದ್ದು ರೈತರ ಜೀವನವನ್ನ ಹೌದು ನೆಲಮಂಗಲದಲ್ಲಿ ಲೀಲಾವತಿ ಹಾಗೂ ಅವರ ಮಗ ತೋಟಗಾರಿಕೆ ಮಾಡಿಕೊಂಡು ಇದ್ದಾರೆ. ಇನ್ನೂ ವಿನೋದ್ ಅವರು ತನ್ನ ಅಮ್ಮನ ಬಳಿ ಇರಬೇಕು ಎಂದು ಚೆನ್ನೈ ನಲ್ಲಿ ಇರುವ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳಿಂದ ದೂರ ಉಳಿದಿದ್ದಾರೆ. ಆಗಾಗ ಚೆನೈ ಹೋಗಿ ಅವರನ್ನು ಭೇಟಿ ಮಾಡಿ ಬರುತ್ತಾರೆ. ಇನ್ನೂ ನೆನ್ನೆ ಸುದ್ದಿ ತಿಳಿದ ತಕ್ಷಣ ಚೆನ್ನೈ ನಿಂದಾ ಓಡೋಡಿ ಬಂದ ಇವರ ಕುಟುಂಬವನ್ನು ನೋಡಿ ವಿನೋದ್ ತಬ್ಬಿ ಅತ್ತಿದ್ದಾರೆ. ಇದೀಗ ನೆಲಮಂಗಲದ ಅಂಬೇಡ್ಕರ್ ಪಾರ್ಕ್ ನಲ್ಲಿ ಲೀಲಾವತಿ ಅಮ್ಮ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇನ್ನೂ ಲೀಲಾವತಿ ಅಮ್ಮ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಆಶಿಸೋಣ.